ಗೋವಾಗೆ ಹೋಗೋಣ ಬಾ ಅಂದ್ರು; ಖ್ಯಾತ ನಿಮಾ೯ಪಕನ ವಿರು ದ್ಧ ಗುಡುಗಿದ ನಟಿ ನೀತು

 
 ಮಲಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಒಂದು ಸಮಿತಿ ಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಮಹತ್ವದ ಸಭೆ ನಡೆಸಲಾಗಿತ್ತು. ಸಭೆ ಬಳಿಕ ಮಾತಾಡಿದ ನಟಿ ನೀತು ಶೆಟ್ಟಿ ತನಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. 
ನನಗೂ ಆ ಕೆಟ್ಟ ಅನುಭವ ಆಗಿದೆ. ಕೆಲವರು ಕಿರುಕುಳ ನೀಡಿದ್ದಾರೆ. ನಮ್ಮಲ್ಲೂ ಕೆಟ್ಟದಾಗಿ ಮುಟ್ಟಿ ಮಾತನಾಡಿಸುವ ಜನರಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಚಿಕ್ಕವಳಿದ್ದಾಗಲೇ ಕಿರುಕುಳ ಆಗಿದ್ದ ಕಾರಣ ನನಗೆ ತುಂಬಾ ಭಯ ಇದೆ ಎಂದಿದ್ದಾರೆ.ಯಾವುದೋ ಹುಡುಗಿಗೆ ನಿನಗೆ ಸಿನಿಮಾದಲ್ಲಿ ಚಾನ್ಸ್‌ ಕೊಡ್ತಿನಿ ಅಂತ ಕರೆದುಕೊಂಡು ಬಂದು ಬಳಸಿಕೊಳ್ಳುತ್ತಾರೆ.  <a href=https://youtube.com/embed/VB2njSk3Hdg?autoplay=1&mute=1><img src=https://img.youtube.com/vi/VB2njSk3Hdg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನನಗೂ ಕೂಡ ಗೋವಾ ಹೋಗೋಣ ಒಳ್ಳೆಯ ಚಾನ್ಸ್ ಕೊಡ್ತೇನೆ.ನೀನು ದೊಡ್ದ ನಟಿ ಆಗಬಹುದು ಎಂದು ಹೇಳಿದ್ದರು.ನಾನು ತಿರಸ್ಕರಿಸಿದೆ.ಇಂತಹದೆಲ್ಲ ನಾನು ಕಣ್ಣಲ್ಲಿ ನೋಡಿದಿನಿ ಎಂದು ನೀತು ಹೇಳಿದ್ದಾರೆ.ಕೆಲವು ಹುಡಗಿಯರು ಆ ದೊಡ್ಡ ನಟಿಯರು ಇದೇ ಥರ ಮಾಡಿದಾರೆ ಅಂತ ಅಂದುಕೊಳ್ತಾರೆ. ಇಲ್ಲ ಆ ಥರ ಇಲ್ಲವೇ ಇಲ್ಲ, ನಿಮ್ಮ ಆತ್ಮಸಾಕ್ಷಿನಾ ಬಿಡಬೇಡಿ ಎಂದು ನೀತು ಶೆಟ್ಟಿ ಹೇಳಿದ್ದಾರೆ. 
ಹೇಮಾ ಕಮಿಟಿ ಮಾದರಿಗೆ ಈಗಾಗಲೇ ಚಿತ್ರರಂಗದಲ್ಲಿ ಪರ ವಿರೋಧ ಚರ್ಚೆಗಳು ಆಗುತ್ತಿವೆ. ಕಮಿಟಿ ರಚನೆಗೆ ಸ್ಟಾರ್ ಹಾಗೂ ಹಿರಿಯ ನಟ ನಟಿಯರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಟಾರ್‌ಗಳ ವಿರೋಧದ ನಡುವೆ ನಿರ್ದೇಶಕಿ ಕವಿತಾ  ಲಂಕೇಶ್, ನಟಿ ನೀತು ಶೆಟ್ಟಿ , ಭಾವನ ರಾಮಣ್ಣ, ಸಂಜನಾ ಗಲ್ರಾನಿ, ನಟಿ ತಾರ ಅನುರಾಧ, ಅನಿತಾ ಭಟ್, ಅಶ್ವಿನಿ ಗೌಡ , ವಾಣಿಶ್ರೀ, ಸಿಂಧು ಲೋಕನಾಥ್ ಧ್ವನಿ ಎತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.