ನನ್ನ ಜೊತೆ ಪ್ರೀತಿ, ಮದುವೆ ಮಾತ್ರ ಬೇರೆ ಹುಡುಗಿ ಜೊತೆನಾ; ಮಾಧ್ಯಮ ಬಳಿ ಪ್ರಶ್ನೆ ಮಾಡಿದ ಅಮೃತ ಅಯ್ಯಂಗಾರ್
Nov 17, 2024, 13:40 IST
ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ ಅನೇಕರಲ್ಲಿತ್ತು. ಈ ಅನುಮಾನವನ್ನು ಖುದ್ದು ಡಾಲಿ ಮೊನ್ನೆ ಮೊನ್ನೆ ಡಾ.ಧನ್ಯತಾ ಜೊತೆ ತಾವು ಮದುವೆಯಾಗುತ್ತಿರುವ ವಿಚಾರವನ್ನು ಹೇಳುವ ಮೂಲಕ ದೂರ ಮಾಡಿದ್ದರು.ಆದರೆ.. ಅನೇಕರು ಈ ವಿಚಾರದಲ್ಲಿ ಸುಖಾ ಸುಮ್ಮನೆ ಅಮೃತಾ ಅಯ್ಯಂಗಾರ್ ಅವರನ್ನು ಇನ್ನೂ ನೋಯಿಸಲು ಶುರು ಮಾಡಿದರು.
ಕೆಲವರು ಅಣ್ಣಂದು ಮದುವೆ ಫಿಕ್ಸ್ ಆಯ್ತು ನೀವು ಬೇಗ ಮದುವೆಯಾಗಿ ಎನ್ನುವ ಪುಕ್ಸಟ್ಟೆ ಸಲಹೆಯನ್ನು ನೀಡಿದರು. ಇನ್ನೂ ಕೆಲವರು ಕಾಲೆಳೆದರು. ಇವೆಲ್ಲವನ್ನೂ ನೋಡಿದ ಅನೇಕರು ಡಾಲಿ ಧನಂಜಯ್ ಮದುವೆ ಸುದ್ದಿಯನ್ನು ಕೇಳಿ ನಿಜಕ್ಕೂ ಅಮೃತಾ ಅಯ್ಯಂಗಾರ್ ಹೃದಯ ನುಚ್ಚು ನೂರಾಗಿದೆ ಎಂದೇ ಅಂದುಕೊಂಡಿದ್ದರು. ಆದರೆ, ವಾಸ್ತವದಲ್ಲಿ ಅಮೃತಾ ಅಯ್ಯಂಗಾರ್ ಮತ್ತು ಡಾಲಿ ಧನಂಜಯ್ ನಡುವೆ ಇದ್ದಿದ್ದು ಸ್ನೇಹ ಮಾತ್ರ. ಪ್ರೇಮ ಅಲ್ಲ.
<a href=https://youtube.com/embed/vy8Z3o50DVM?autoplay=1&mute=1><img src=https://img.youtube.com/vi/vy8Z3o50DVM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನೂ ಡಾಲಿ ಧನಂಜಯ್ ಡಾಕ್ಟರ್ ಧನ್ಯತಾ ಬಗ್ಗೆ ಜಗತ್ತಿಗೆ ಹೇಳುವ ಮೊದಲೇ ಅಮೃತಾ ಅಯ್ಯಂಗಾರ್ ಅವರಿಗೆ ಇವರ ಪ್ರೀತಿಯ ವಿಚಾರ ಗೊತ್ತಿತ್ತು. ಖುದ್ದು ಅಮೃತಾ ಅಯ್ಯಂಗಾರ್ ಈ ಮಾತನ್ನು ಈಗ ಹೇಳಿದ್ದಾರೆ.ಹೌದು, ಅಸಲಿಗೆ ಡಾಲಿ ಧನಂಜಯ್ ಜೊತೆ ಮೂರು ಬಾರಿ ತೆರೆ ಹಂಚಿಕೊಂಡಿರುವ ಅಮೃತಾ ಈಗ ಇನ್ನೊಮ್ಮೆ ಧನು ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಹೆಸರು ಜಿಬ್ರಾ. ತೆಲುಗಿನಲ್ಲಿ ಸಿದ್ಧವಾಗಿರುವ ಈ ಚಿತ್ರ ಇನ್ನೇನು ಈ ಶುಕ್ರವಾರ ತೆರೆಗೆ ಬರಲಿದೆ.
ಈ ಕಾರಣಕ್ಕೆ ಚಿತ್ರದ ಪ್ರಚಾರವನ್ನು ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಮಾಡುತ್ತಿದ್ದಾರೆ. ಸಹಜವಾಗಿ ಇಬ್ಬರು ಹೋದಲ್ಲಿ ಬಂದಲ್ಲಿ ಚಿತ್ರಕ್ಕಿಂತ ಹೆಚ್ಚು ಡಾಲಿ ಧನಂಜಯ್ ಅವರಿಗೆ ಮದುವೆ ವಿಚಾರದ ಕುರಿತು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಡಾಲಿ ಮದ್ವೆಯಾಗುತ್ತಿದ್ದಾರೆ ನಿಮಗೆ ಹೇಗೆ ಅನ್ಸುತ್ತಿದೆ ಎಂದು ಅಮೃತಾ ಅಯ್ಯಂಗಾರ್ ಅವರನ್ನು ಪ್ರಶ್ನೆ ಮಾಡಲಾಗುತ್ತಿದೆ.
ಈ ಪ್ರಶ್ನೆಗಳಿಗೆ ಸಾಧ್ಯವಾದಷ್ಟು ನಗುಮುಖದೊಂದಿಗೆ ಉತ್ತರವನ್ನು ಕೊಡುತ್ತಿರುವ ಅಮೃತಾ ಅಯ್ಯಂಗಾರ್ ನನಗೆ ಧನಂಜಯ್ ಮದುವೆಯಾಗುತ್ತಿರುವ ವಿಚಾರ ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ. ಈಗಲೂ ಹೇಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.