ಮಹಾನಟಿ ಶೋನಲ್ಲಿ ಎಡವಟ್ಟು; ರಮೇಶ್ ಹಾಗೂ ಪ್ರೇಮಾ ಅನುಶ್ರೀ ಮೇಲೆ‌ ದೂರು ದಾಖಲು

 

ಆಗಾಗ ಹಲವು ಇಲ್ಲ ಸಲ್ಲದ ಹೇಳಿಕೆಗಳಿಂದ ಗಮನ ಸೆಳೆದಿರುವ ಕಿರುತೆರೆಯಲ್ಲಿ ಮತ್ತೊಮ್ಮೆ ಕನ್ನಡ ಕಿರುತೆರೆ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಆ ಶೋನಲ್ಲಿ ಬಳಸಿದ ಡೈಲಾಗ್ ಶ್ರಮಿಕ ವರ್ಗದವರ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಸಂಬಂಧ ಶೋ ನಿರ್ಮಾಪಕ, ನಿರ್ದೇಶಕ, ತೀರ್ಪುಗಾರರ ವಿರುದ್ಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಗಗನಾ ಸ್ಕಿಟ್ ವೇಳೆ ಹೇಳಿದ್ದ ಡೈಲಾಗ್ ಬಗ್ಗೆ ಫ್ರೆಂಡ್ಸ್ ದ್ವಿಚಕ್ರ ವಾಹನ ವರ್ಕ್‌ಶಾಪ್ ಮಾಲೀಕರು ಹಾಗೂ ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮೆಕಾನಿಕ್ ಕೆಲಸ ಮಾಡುವ ಶ್ರಮಿಕ ವರ್ಗದವನ್ನು ಶೋನಲ್ಲಿ ಕೀಳಾಗಿ ನಿಂದಿಸಿದ್ದಾರೆ, ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.ಶೋನಲ್ಲಿ ತೀರ್ಪುಗಾರದಾದ ರಮೇಶ್ ಅರವಿಂದ್ ಸ್ಪರ್ಧಿಗಳಿಗೆ ಒಂದೊಂದು ಕಾನ್ಸೆಪ್ಟ್ ಕೊಟ್ಟು ಕೂಡಲೇ ನಟನೆ ಮಾಡಿ ತೋರಿಸುವಂತೆ ಹೇಳುತ್ತಾರೆ.

 ಕೂಡಲೇ ಡೈಲಾಗ್ ಸಿದ್ಧಪಡಿಸಿಕೊಂಡು ನಟಿಸಬೇಕು. ಸ್ಪರ್ಧಿ ಗಗನಾಗೆ ಮೆಕ್ಯಾನಿಕ್ ಲೈಫ್ ಬಗ್ಗೆ ಕಾನ್ಸೆಪ್ಟ್ ಕೊಟ್ಟಿದ್ದರು. ನಿಮ್ಮ ತಂಗಿ‌ ಮೆಕ್ಯಾನಿಕ್‌ನ ಲವ್ ಮಾಡುತ್ತಿದ್ದರೆ ಏನು ಮಾಡುತ್ತೀಯಾ? ಎಂದಾಗ ಡೈಲಾಗ್ ಹೇಳುವ ಭರದಲ್ಲಿ ಗ್ರೀಸ್ ತಿಂದು ಬದುಕಬೇಕಾಗುತ್ತದೆ ಎಂದು ಗಗನಾ ಹೇಳಿದ್ದರು. ಆ ಡೈಲಾಗ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಇವರ ಮೇಲೆ ಈಗಾಗಲೇ ದೂರು ದಾಖಲಾಗಿದೆ.