ಕರುನಾಡಿನ ಹೆಮ್ಮೆಯ ಪುತ್ರ ಮನೋಹರ್ ಇನ್ನ್ ಇಲ್ಲ; ಓಡೋಡಿ ಬಂದ ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದ ಹಲವಾರು ಕಲಾವಿದರು ಇತ್ತೀಚಿನ ದಿನಗಳಲ್ಲಿ ಇನಿಲ್ಲವಾಗಿದ್ದಾರೆ ಇದೀಗ ಅವರ ಸಾಲಿಗೆ ಖ್ಯಾತ ಕಲಾವಿದರೊಬ್ಬರು ಸೇರಿದ್ದಾರೆ. ಮತದಾನ ಮಾಡಲು ಹೋಗಿದ್ದ ವ್ಯಕ್ತಿಯೋರ್ವರು ಮತದಾನ ಮಾಡಿ ಮತ ಕೇಂದ್ರದಿಂದ ಹೊರಬಂದ ತಕ್ಷಣವೇ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿ.ಶೇಟಿಗೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಖ್ಯಾತ ಚಂಡೆ ವಾದಕ ಪದಾರ್ಥಿ ಮನೋಹರ್ ಮತದಾನ ಕೇಂದ್ರಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಮತದಾನ ಮಾಡುವ ವೇಳೆಯಲ್ಲೇ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಸುಸ್ತಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ನಂತರ ಮತದಾನ ಕೇಂದ್ರದ ಒಳಗೆ ಹೋಗಿ ಮತದಾನ ಮಾಡಿ ಬಂದ ತಕ್ಷಣವೇ ಮತದಾನ ಕೇಂದ್ರದ ಅವರಣದಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಸಾಯುವ ಮುನ್ನ ತಮ್ಮ ಕರ್ತವ್ಯ ಮುಗಿಸಿ ಮನೋಹರ್ ಮೃತಪಟ್ಟಿದ್ದಾರೆ. ಸುತ್ತಮುತ್ತಲಿನ ಊರುಗಳಲ್ಲಿ ಮನೋಹರ್ ಅವರು ಚಂಡೆ ವಾದ್ಯದ ಮೂಲಕವೇ ಖ್ಯಾತಿಗಳಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಮೃತೇಶ್ವರಿ,ಇಡಗುಂಜಿ, ಸಾಲಿಗ್ರಾಮ, ಶಿರಸಿ, ಪೆರ್ಡೂರು, ಕುಮಟ, ಸೌಕೂರು, ಗೋಳಿಗರಡಿ, ಹಾಲಾಡಿ, ನೀಲಾವರ, ಮಡಾಮಕ್ಕಿ ಮೇಳದಲ್ಲಿ ಸೇವೆಸಲ್ಲಿಸಿದ್ದರು. ಭಾಗವತಿಕೆ, ಮದ್ದಳೆ ಹಾಗೂ ವೇಷಗಾರಿಕೆಯಲ್ಲೂ ಪರಿಣತಿ ಪಡೆದು ಸರ್ವಾಂಗೀಣ ಕಲಾವಿದರಾಗಿದ್ದರು.
ಶ್ರೇಷ್ಠ ಪರಪಂಪರೆಯ ಚಂಡೆಗಾರರಾಗಿ, ಸ್ವಾಭಿಮಾನಿ ಕಲಾವಿದನಾಗಿ ಬದುಕಿದ ಇವರ ನಿಧನದಿಂದ ಚಂಡೆ ಮದ್ದಳೆ ವಾದಕರು ಮತ್ತು ಹಾಸ್ಯ ಕಲಾವಿದರ ಕೊರತೆಯಿಂದ ಬಳಲುತ್ತಿರುವ ಬಡಗುತಿಟ್ಟಿನ ಹಿಮ್ಮೇಳರಂಗಕ್ಕೆ ತುಂಬಲಾರದ ನಷ್ಟವೇ ಸರಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.