ಮಗನ ವಿಚಾರಕ್ಕೆ‌ ಸೀರಿಯಲ್ ‌ಲೋಕದಿಂದ ದೂರ ಉಳಿದ ಮಾನ್ಯ

 
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶಾಂಭವಿ ಅಂದರೆ ಬಹುಬೇಗ ನೆನಪಾಗಲಿಕ್ಕಿಲ್ಲಾ.ಆದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿಗೂಢರಾತ್ರಿ, ಪಾರು, ಲಕ್ಷ್ಮಿ, ಗೀತಾಂಜಲಿ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಇತ್ತೀಚಿಗೆ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಗೌತಮ್ ದಿವಾನ್‌ ಮಾಜಿ ಪ್ರೇಯಸಿ ಮಾನ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹುತೇಕ ನೆಗೆಟಿವ್‌ ಶೇಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾ ಬಿಡುವುಲ್ಲದೇ ನಟಿಸುತ್ತಿದ್ದ ಶಾಂಭವಿ ಕಳೆದ ಕೆಲವು ವರ್ಷಗಳಿಂದ ನಟನೆಗೆ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು.
ನಟಿ ಶಾಂಭವಿಗೆ ಅವಳಿ ಮಕ್ಕಳಾಗಿದ್ದು, ಇಬ್ಬರ ಆರೈಕೆಗಾಗಿ ಶಾಂಭವಿ ತಮ್ಮೆಲ್ಲಾ ಸಮಯವನ್ನು ಮೀಸಲಿಟ್ಟಿದ್ದರು. ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಶಾಂಭವಿ ಇಬ್ಬರು ಟ್ವಿನ್ಸ್‌ ಮಕ್ಕಳ ಕ್ಯೂಟ್‌ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಅದೇ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಬದುಕಿಗೆ ಬಡಿದಿರುವ ಬರ ಸಿಡಿಲಿನ ಬಗ್ಗೆ ನಟಿ ಶಾಂಭವಿ ಹಂಚಿಕೊಂಡಿದ್ದಾರೆ.
ನಟಿ ಶಾಂಭವಿಗೆ ಮೂರು ವರ್ಷದ ದುರ್ಗಾ ಮತ್ತು ದುಶ್ಯಂತ್ ಎನ್ನುವ ಮಕ್ಕಳಿದ್ದು, ಈ ಪೈಕಿ ಗಂಡು ಮಗು ದುಶ್ಯಂತ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ದುಶ್ಯಂತ್‌ನ ಕೂದಲು ಉದುರುವ ಹಾಗೂ ಆತನ ತಲೆ ಬೋಳಿಸುವ ಸಮಯ ಬಂದಿದೆ ಎಂದು ವಿಡಿಯೋ ಮೂಲಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಕೆಲವು ಮಗುವಿನ ಆರೋಗ್ಯದ ಸಮಸ್ಯೆ ಬಗ್ಗೆ ಗೆಸ್‌ ಮಾಡಿದ್ದರೂ ಕೂಡ ಬಹುತೇಕರಿಗೆ ಯಾಕೆ ಎನ್ನುವುದು ಅರ್ಥವಾಗಿರಲಿಲ್ಲ. <a href=https://youtube.com/embed/yEdG9nR8ZJM?autoplay=1&mute=1><img src=https://img.youtube.com/vi/yEdG9nR8ZJM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಭಾವುಕ ಪೋಸ್ಟ್ ಹಂಚಿಕೊಂಡಿರುವ ನಟಿ ಶಾಂಭವಿ ‘ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ 3rd ಸ್ಟೇಜ್ ಬ್ಲಡ್ ಕ್ಯಾನ್ಸರ್ ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ ಇದು ಕ್ಯಾನ್ಸರ್ ಆಗಿರದೆ ಇರಲಿ ಅಂತಾ ಪ್ರಾರ್ಥಿಸ್ತಾ ಇದ್ವಿ. 
ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರೆಗಳೆಲ್ಲ ಯಾಕೆ ಅನ್ಸತ್ತೆ!!! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ. ಬೇರೆ ಆಪ್ಷನ್ ಆದ್ರೂ ಏನಿದೆ?? ಇದು 95% ಕ್ಯೂರೇಬಲ್ ಅಂತಾ ಡಾಕ್ಟರ್ ಭರವಸೆ ಕೊಟ್ಟಿದ್ದಾರೆ. ಆದ್ರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. 
ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ. ಎಂದು ಪೋಸ್ಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.