ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗಲು ರಾತ್ರಿ ಹಗಲು ಕಸರತ್ತು ಮಾಡುತ್ತಿರುವ ಮೇಘ ಶೆಟ್ಟಿ
Aug 11, 2024, 22:09 IST
ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಬೇಡಿಕೆ ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನಟಿ ಮೇಘಾ ಶೆಟ್ಟಿ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಜಿಮ್ ನಲ್ಲಿ ಬೆವರಿಳಿಸಿವ, ವೀಕೆಂಡ್‌ನಲ್ಲಿ ಸಖತ್ ಆಕ್ಟಿವ್ ಇರುವ ನಟಿಯ ಜಿಮ್ ವಿಡಿಯೋ ಹರಿದಾಡುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ದರ್ಶನ್ ಅಭಿಮಾನಿಗಳು ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಕನ್ನಡದ ಧಾರವಾಹಿ ಜೊತೆ ಜೊತೆಯಲಿ ಯಲ್ಲಿ ನಟಿಸಿ, ನಂತರ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ 'ಅನು ಸಿರಿಮನೆ' ಪಾತ್ರದಿಂದ ಹೆಚ್ಚು ಜನಪ್ರಿಯತೆ ಪಡೆದ ನಟಿ ಮೇಘಾ ಶೆಟ್ಟಿಯವರು ಫಿಟ್ ನೆಸ್ ಮೆಂಟೈನ್ ಮಾಡುತ್ತಿದ್ದಾರೆ. ತಮ್ಮ ಸೌಂದರ್ಯ, ಹೊಸ ಫೋಟೋಗಳು, ಸಿನಿಮಾಗಳ ಮೂಲಕ ಸದ್ದು ಮಾಡುವ ನಟಿ, ಸಾಮಾಜಿಕ ಜಾತಲಾಣಗಳಲ್ಲಿ ಸಕ್ರಿಯವಾಗಿರುತ್ತಾರೆ.
ಇದೀಗ ಅವರು ವೀಕೆಂಡ್ ಜಿಮ್ ಮೂಡ್‌ನಲ್ಲಿದ್ದಾರೆ. ಜಿಮ್ ನಲ್ಲಿ ಕಸರತ್ತು ಮಾಡುವ ವಿಡಿಯೋ ಅನ್ನು ಹಂಚಿಕೊಂಡು ಒಂದೊಳ್ಳೆ ಸ್ಮೈಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ವಿವಿಧ ರೀತಿಯ ವರ್ಕೌಟ್ ಮಾಡುತ್ತಿರುವ ವಿಡಿಯೋದಲ್ಲಿ ಪಿಂಕ್ ಆಂಡ್ ಬ್ಲಾಕ್ ಶಾರ್ಟ್ ಕಾಂಬಿನೇಷನ್ ಡ್ರೆಸ್‌ನಲ್ಲಿ ಸಖತ್ ಹಾಟಾಗಿ ಕಾಣಿಸಿಕೊಂಡಿದ್ದಾರೆ.
<a href=https://youtube.com/embed/Lv_Z-72Xwpw?autoplay=1&mute=1><img src=https://img.youtube.com/vi/Lv_Z-72Xwpw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಮೇಘಾ ಅವರ ಅಭಿಮಾನಿಗಳು ತಮ್ಮ ನಟಿಯು, ದೇಹವನ್ನು ಹುರಿಗೊಳಿಸುವ ಜಿಮ್ ವರ್ಕೌಟ್ ವಿಡಿಯೋ ನೋಡಿ ಫಿದಾ ಆಗಿದ್ದಾರೆ. ಎಲ್ಲ ಸೆಲೆಬ್ರೆಟಿಗಳಂತೆ ಮೇಘಾ ಶೆಟ್ಟಿ ಸಹ ತಮ್ಮ ಸೌಂದರ್ಯ, ಫಿಟ್ ಆಂಡ್ ಹೆಲ್ತಿ ದೇಹವಾಗಿಟ್ಟುಕೊಳ್ಳಲು ಹೆಚ್ಚು ಆದ್ಯತೆ ನೀಡುತ್ತಾರೆ. ಆಗಾಗ ಸಾಂಪ್ರದಾಯಿಕ ಮತ್ತು ಹಾಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸುತ್ತಾರೆ.
ವಿಶೇಷವೆಂದರೆ ಮೇಘಾ ಶೆಟ್ಟಿಯವರಿಗೆ ನಟ ದರ್ಶನ್ ಅಚ್ಚುಮೆಚ್ಚಿನ ನಟ. ಅಲ್ಲದೇ ಇವರು ಸಹ ಪವಿತ್ರಾ ಗೌಡ ಸ್ನೇಹಿತೆಯರಲ್ಲಿ ಒಬ್ಬರಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅವರು ಬರ್ತಡೇ ಕಾರ್ಯಕ್ರಮದಲ್ಲಿ, ಸಿನಿಮಾ ಪ್ರಿ ಇವೆಂಟ್ ಇನ್ನಿತರ ಕಾರ್ಯಕ್ರಮಗಳಲ್ಲಿ ನಟ ದರ್ಶನ್ ಜೊತೆಗೆ ಕಾಣಿಸಿಕೊಂಡಿದ್ದರು.