ಬಿಗ್ ಬಾಸ್ ಮನೆಗೆ ಮೈಕಲ್ ಎಂಟ್ರಿ, ಎದ್ದು ಬಿದ್ದು ಕೂಗಾಡಿದ ಇಶಾನಿ

 

ಬಿಗ್‌ಬಾಸ್‌ ಕನ್ನಡ ಗ್ರ್ಯಾಂಡ್‌ ಫಿನಾಲೆ ಹೊಸ್ತಿಲಲ್ಲಿ ಇದೆ. ಇದೇ ಸಮಯದಲ್ಲಿ ಮನೆಯೊಳಗೆ ಸ್ಪರ್ಧಿಗಳಿಗೆ ಹಲವು ಅನುಭವಗಳೂ ಆಗುತ್ತಿವೆ. ಇಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಹಾರರ್‌ ಅನುಭವ ಆಗಿದೆ. ಬಿಗ್‌ಬಾಸ್ ಮನೆಯ ಸದಸ್ಯರಿಗೆ ಬಿಗ್‌ಬಾಸ್ ಒಂದು ಹಾರರ್ ಸರ್ಪೈಸ್ ನೀಡಿದ್ದಾರೆ. ಹೌದು ಈಗಾಗಲೇ ಮನೆಯಿಂದ ಆಚೆಗೆ ಹೋಗಿದ್ದ ಸ್ಪರ್ಧಿಗಳು ಮತ್ತೆ ಬಂದಿದ್ದಾರೆ.

ನಿಮಗಾಗಿ ಒಂದು ಸರ್ಪೈಸ್ ಕಾದಿದೆ. ಗಾರ್ಡನ್ ಏರಿಯಾಗೆ ಹೋಗಿ’ ಎಂದು ಬಿಗ್‌ಬಾಸ್ ಮನೆಯ ಸದಸ್ಯರಿಗೆ ಆದೇಶಿಸಿದ್ದಾರೆ. ಅಲ್ಲಿ ಒಂದು ಟೇಬಲ್ ಮೇಲೆ ಬಲೂನ್, ಕೇಕ್ ಜೊತೆಗೆ ಎರಡು ಬಾಕ್ಸ್‌ಗಳನ್ನು ಇರಿಸಲಾಗಿದೆ. ತುಕಾಲಿ ಸಂತೋಷ್ ಅವರು ಒಂದು ಬಾಕ್ಸ್ ಅನ್ನು ಎತ್ತಿದ್ದೇ ಬೆಚ್ಚಿ ಹಿಂದಕ್ಕೆ ಜಿಗಿದಿದ್ದಾರೆ. ಉಳಿದವರು ಭಯದಿಂದ ಕಿರುಚಿದ್ದಾರೆ. ಯಾಕೆಂದರೆ ಆ ಬಾಕ್ಸ್ ಒಳಗಿರುವುದು ಒಂದು ತಲೆ. <a href=https://youtube.com/embed/GGGNLDdgpSY?autoplay=1&mute=1><img src=https://img.youtube.com/vi/GGGNLDdgpSY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದೇನು ಬಿಗ್‌ಬಾಸ್ ಮನೆಯೊಳಗೆ ಕ್ರೈಂ ಸೀನ್ ಎಂದು ಕಣ್ಣುಜ್ಜಿಕೊಂಡು ನೋಡಿದರೆ ತಲೆ ಅಲುಗಾಡುತ್ತಿದೆ. ಕಣ್ಣುಗಳು ತೆರೆಯುತ್ತಿವೆ. ಮುಖದಲ್ಲಿ ನಗುವಿದೆ. ಅದು ಮತ್ಯಾರೂ ಅಲ್ಲ, ಬಿಗ್‌ಬಾಸ್ ಹಳೆಯ ಸ್ಪರ್ಧಿ ಇಶಾನಿ! ಟೇಬಲ್ ಕೆಳಗೆ ಅವಿತಿಟ್ಟುಕೊಂಡು ಬರೀ ತಲೆಯನ್ನಷ್ಟೇ ಟೆಬಲ್ ನಿಂದ ಹೊರಗೆ ಹಾಕಿ ಸಖತ್ ಶಾಕ್ ಕೊಟ್ಟಿದ್ದಾರೆ ತನಿಶಾ. ಅವರ ಜೊತೆಗೆ ರಕ್ಷಿತ್, ಸ್ನೇಹಿತ್ ಮತ್ತು ನೀತು  ಮೈಕಲ್ ಕೂಡ ಬಿಗ್‌ಬಾಸ್ ಮನೆಯೊಳಗೆ ರೀ ಎಂಟ್ರಿ ಕೊಟ್ಟಿದ್ದಾರೆ.

ಮೈಕಲ್ ಕಂಡು ಇಶಾನಿ ಇರಿಸು ಮುರಿಸು ಆದರೆ ಸ್ನೇಹಿತ್ ಕಂಡು ನಮೃತಾ ಸಂತೋಷ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಹಳೆ ಸ್ಪರ್ಧಿಗಳ ಎಂಟ್ರಿ ಮನೆಯೊಳಗೆ ಸಖತ್ ವೈಬ್ರೇಷನ್ ಕ್ರಿಯೇಟ್ ಮಾಡಿದೆ. ಇದರಿಂದ ಯಾರಿಗೆ ಅನುಕೂಲ, ಯಾರಿಗೆ ಅನಾನುಕೂಲ ಎಂಬುದು ಈ ವಾರಾಂತ್ಯದ ಹೊತ್ತಿಗೆ ತಿಳಿಯಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.