ನನ್ನ ಆಸ್ತಿ ಹೊಡೆಯೋಕೆ ಮಗು ಮಾಡಿದ್ದಾಳೆ ನನ್ನ ಹೆಂಡತಿ, ವರ್ತೂರ್ ‌ಸಂತೋಷ್ ಕುಟುಂಬ ವಿಚಾರ ಬೀದಿಗೆ ಬಿತ್ತು

 
ಮಾಜಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ದೊಡ್ಮನೆಗೆ ಕಾಲಿಟ್ಟಾಗಿನಿಂದಲೂ ಭಾರೀ ವಿವಾದಗಳಿಂದಲೇ ಸದ್ದು ಮಾಡಿದ್ರು. ಅಲ್ಲದೇ ವರ್ತೂರು ಸಂತೋಷ್ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿ ಆಗಿತ್ತು. ಇತ್ತೀಚಿಗಷ್ಟೇ ವರ್ತೂರು ಸಂತೋಷ್‌ ಅವರು ಎರಡನೇ ಮದುವೆ ಆಗ್ತೀನಿ ಅಂದಿದ್ದು, ಇದೀಗ ಲೈಫ್‌ನಲ್ಲಿ ನಡೆದಿದ್ದು ಮದುವೆನೇ ಅಲ್ಲ ಡೊಂಬರಾಟ ಎಂದು ಹೆಂಡತಿ ಹಾಗೂ ಹೆಣ್ಣು ಕೊಟ್ಟ ಮಾವನಿಗೆ ತೀವ್ರ ವಾಗ್ದಾಳಿ ನಡೆಸುವ ಮೂಲಕ ಚಳಿ ಬಿಡಿಸಿದ್ದಾರೆ.
ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ವರ್ತೂರು ಸಂತೋಷ್‌ಗೆ ಹೆಸರು, ಹಣ ಎಲ್ಲವೂ ಇದೆ. ಆದರೆ, ಅವರ ಕೌಟುಂಬಿಕ ಜೀವನ ಮಾತ್ರ ಯಶಸ್ವಿಯಾಗಿಲ್ಲ. ಬಿಗ್‌ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಅವರ ವೈವಾಹಿಕ ಜೀವನದ ಬಗ್ಗೆ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಇದೀಗ ಯಶಸ್ ಟಾಕೀಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಪತ್ನಿ ಹಾಗೂ ಅವರ ಮನೆಯವರಿಗೆ ಟಾರ್ಚರ್ ಅನುಭವಿಸಿದ ಕುರಿತುಇ ವರ್ತೂರು ಸಂತೋಷ್ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. <a href=https://youtube.com/embed/BkrH6eQ1jP0?autoplay=1&mute=1><img src=https://img.youtube.com/vi/BkrH6eQ1jP0/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನನ್ನ ಜೀವನದಲ್ಲಿ ಕೆಲವನ್ನು ಒದ್ದು ಹೊರಗೆ ಹಾಕುತ್ತಿದ್ದೇನೆ. ಕೆಲವೊಂದನ್ನು ಇಟ್ಟುಕೊಂಡಿದ್ದೆ. ನನಗೆ ಅದು ಅವಶ್ಯಕತೆನೇ ಇರಲಿಲ್ಲ. ಆದರೂ ಮಾನವೀಯತೆ, ಧರ್ಮ ಅನ್ನೋದು ಇದೆಯಲ್ಲ. ನಾನು ಅಂತಲ್ಲ. ನನ್ನಂಥ ಯುವಕರು ಅದೆಷ್ಟು ಮಂದಿ ಎಷ್ಟು ನೋವು ತಿನ್ನುತ್ತಿದ್ದಾರೋ ಗೊತ್ತಿಲ್ಲ. ನೂರಕ್ಕೆ 90 ಪರ್ಸೆಂಟ್ ಯುವಕರೇ ಸಾಯೋದು. ಯಾಕಂದ್ರೆ, ಜವಾಬ್ದಾರಿ ಇರುತ್ತೆ. ಮಾನ ಮರ್ಯಾದೆಗೆ ಅಂಜುತ್ತಾರೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ನಾನು ಮದುವೆ ಆಗುತ್ತೇನೆ ಅಂತ ಸುಮಾರು ವಿಡಿಯೋಗಳನ್ನು ಬಿಟ್ಟೆ. ನ್ಯಾಯ, ಧರ್ಮ, ಸತ್ಯ ಟೈಮ್‌ಗೆ ಮರೆ ಮಾಚುತ್ತವೆ. ಸುಳ್ಳು ಕುಣಿಯುತ್ತಿರುತ್ತೆ. ನಾನು ಅತ್ತು ಮಾತಾಡಿರುವುದರಲ್ಲಿ ನೋವಿರುತ್ತೆ. ಅಲ್ಲಿ ನಾಟಕ ಬರುವುದೇ ಇಲ್ಲ ಎಂದಿದ್ದಾರೆ. ಪತ್ನಿಗಾಗಿ ತಂದು ಕೊಟ್ಟಿದ್ದ ವಸ್ತುಗಳನ್ನು ತೋರಿಸಿದ್ದಾರೆ. ಜೊತೆಗೆ ಮನೆಯಲ್ಲಿ ಅವರ ವಸ್ತುಗಳು ಏನೇನಿವೆ ಎನ್ನುವುದನ್ನೂ ತೋರಿಸಿದ್ದಾರೆ. ಅದೆಲ್ಲವೂ ಮನೆಯಿಂದ ಹೊರಗೆ ಹಾಕುತ್ತೇನೆ ಎಂದು ವರ್ತೂರು ಸಂತೋಷ್‌ ಅವರು ಗರಂ ಆಗಿದ್ದಾರೆ. ತಂದೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.