ಎದೆಯಲ್ಲಿ ಕಲ್ಮಶ ವಿಲ್ಲದ ಏಕೈಕ ವ್ಯಕ್ತಿ ನರೇಂದ್ರ ಮೋದಿಜಿಯಿಂದ ಸಿದ್ದರಾಮಯ್ಯಗೆ ಕನ್ನಡಲ್ಲೇ ಪಾಠ

 
ಉತ್ತರ ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇದೆ. ದಕ್ಷಿಣ ಭಾರತದಲ್ಲಿ ಅಷ್ಟಿಲ್ಲ ಹಾಗಾಗಿ ಜನರ ಮನ ಒಲಿಸಲು ಮೋದಿ ಹೀಗೆ ಮಾಡುತ್ತಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮೋದಿ ಟಕ್ಕರ್ ನೀಡಿದ್ದಾರೆ. ದೇಶದ ಭವಿಷ್ಯಕ್ಕೆ ಧಕ್ಕೆ ತರುವಂಥ ಉತ್ತರ ಮತ್ತು ದಕ್ಷಿಣ ಎಂಬ ವಿಭಜನೆಯ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ತಾಕೀತು ಮಾಡಿದರು. ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನಾ ಧರಣಿಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಮೋದಿ, ಇಂದು ನಾನು ಒಂದು ನಿರ್ದಿಷ್ಟ ವಿಷಯದ ಬಗ್ಗೆ ನನ್ನ ನೋವು ಹಂಚಿಕೊಳ್ಳಲು ಬಯಸುತ್ತೇನೆ. ದೇಶವನ್ನು ಒಡೆಯಲು ಇತ್ತೀಚಿನ ದಿನಗಳಲ್ಲಿ ಬಳಸುವ ಭಾಷೆಯ ರೀತಿ ಮತ್ತು ರಾಜಕೀಯ ಲಾಭಕ್ಕಾಗಿ ಹೊಸ ವ್ಯಾಖ್ಯಾನ ಮಾಡಲಾಗುತ್ತಿದೆ. ದೇಶಕ್ಕೆ ಇದಕ್ಕಿಂತ ಕೆಟ್ಟದ್ದು ಯಾವುದೂ ಇಲ್ಲ. ಇಂತಹ ವ್ಯಾಖ್ಯಾನಗಳು ಒಳ್ಳೆಯದಲ್ಲ. ದೇಶದ ಭವಿಷ್ಯವನ್ನು ಅಪಾಯಕ್ಕೆ ತಳ್ಳಬಹುದು ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದ ಒಂದು ಭಾಗದಲ್ಲಿ ಲಸಿಕೆ ತಯಾರಿಸಲಾಗುತ್ತದೆ. ಅದನ್ನು ಬೇರೆ ಕಡೆ ನೀಡಲು ಸಾಧ್ಯವಿಲ್ಲ ಎಂದು ಯಾರಾದರೂ ಹೇಳಲು ಸಾಧ್ಯವೇ?. ಇದು ಯಾವ ಆಲೋಚನೆ?, ಅಂತಹ ಭಾಷೆಯು ರಾಷ್ಟ್ರೀಯ ಪಕ್ಷದಿಂದ ಹೊರಹೊಮ್ಮುತ್ತಿರುವುದು ತುಂಬಾ ನೋವಿನ ಸಂಗತಿ ಮತ್ತು ದುಃಖಕರ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು. <a href=https://youtube.com/embed/8Gk1P4pgleQ?autoplay=1&mute=1><img src=https://img.youtube.com/vi/8Gk1P4pgleQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದೇ ವೇಳೆ, ಈ ರಾಷ್ಟ್ರ ನಮಗೆ ಕೇವಲ ತುಂಡು ಭೂಮಿ ಅಲ್ಲ. ಇದು ಮಾನವನ ದೇಹದಂತೆ. ಎಲ್ಲೋ ನೋವು ಉಂಟಾದರೆ, ಕಾಲಿನಲ್ಲಿ ಮುಳ್ಳಿದೆ ಎಂದು ಕೈ ಹೇಳುವುದಿಲ್ಲ. ಅದು ನನಗೆ ಸಂಬಂಧಿಸಿಲ್ಲ ಎಂದೂ ಹೇಳುವುದಿಲ್ಲ. ಈ ದೇಶದಲ್ಲಿ ಎಲ್ಲಿಯೇ ಆದರೂ ನೋವುಗಳಿದ್ದರೆ, ಆ ನೋವನ್ನು ಎಲ್ಲರೂ ಅನುಭವಿಸಬೇಕು. ದೇಹದ ಒಂದು ಭಾಗ ಕೆಲಸ ಮಾಡದಿದ್ದರೆ ಇಡೀ ದೇಹವನ್ನು ಅಂಗವಿಕಲತೆ ಎಂದು ಕರೆಯಲಾಗುತ್ತದೆ. ದೇಶದ ಯಾವುದೇ ಭಾಗವು ಅಭಿವೃದ್ಧಿಯಾಗದಿದ್ದರೆ, ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ನಾವು ದೇಶವನ್ನು ಪ್ರತ್ಯೇಕ ಭಾಗಗಳಾಗಿ ನೋಡದೆ ಒಂದೇ ಎಂದು ನೋಡಬೇಕು ಎಂದು ಸಲಹೆ ನೀಡಿದರು.
ಮುಂದುವರೆದು ಮಾತನಾಡಿದ ಪ್ರಧಾನಿ, ನದಿಗಳು ಎಲ್ಲಿಂದಲೋ ಹರಿದು ಬರುತ್ತದೆ. ನದಿ ನೀರನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಲು ಪ್ರಾರಂಭಿಸಿದರೆ ಏನಾಗುತ್ತದೆ?. ಕಲ್ಲಿದ್ದಲು ಹೊಂದಿರುವ ರಾಜ್ಯಗಳು ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದರೆ ದೇಶ ಹೇಗೆ ಕಾರ್ಯನಿರ್ವಹಿಸುತ್ತದೆ?. ಹಾಗೆಯೇ ಪೂರ್ವ ರಾಜ್ಯಗಳು ನಾವು ಆಮ್ಲಜನಕವನ್ನು ಇತರ ಪ್ರದೇಶಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದರೆ ಏನಾಗುತ್ತಿತ್ತು?. ಇಂದು ದೇಶವನ್ನು ಒಡೆಯಲು ಎಂತಹ ವ್ಯಾಖ್ಯಾನ ನೀಡಲಾಗುತ್ತಿದೆ?. 'ನನ್ನ ತೆರಿಗೆ, ನನ್ನ ಹಕ್ಕು' ಎಂದು ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ? ಎಂದು ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.