'ನೀನು ದಪ್ಪ ಇದಿಯಾ ಅಂದರೆ ಯಾರದೋ ಜೊತೆ ಏನೂ ನಡೆಯುತ್ತಿದೆ ಅಂತಾರೆ ಎಂದ ನೀತು

 

ಕನ್ನಡ ಚಿತ್ರರಂಗದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಅದೆಷ್ಟೋ ನಾಯಕಿಯರು ಕೆಲವೇ ಕೆಲವು ಸಿನಿಮಾಗಳನ್ನು ಕೊಟ್ಟು ತೆರೆಮರೆಗೆ ಸರಿದಿದ್ದಾರೆ. ಆದರೆ ಅವರು ಅಭಿನಯಿಸಿದ ಚಿತ್ರಗಳು ಸೂಪರ್‌ ಹಿಟ್‌ ಹಾಗೂ ಜನರ ಮನಸ್ಸಿನಲ್ಲಿ ಸದಾ ಉಳಿಯುವ ಚಿತ್ರಗಳು. ಅಂತವರ ಪೈಕಿ ನಟಿ ನೀತು ಶೆಟ್ಟಿ ಕೂಡ ಒಬ್ಬರು. 

ಪೂಜಾರಿ, ಗಾಳಿಪಟದಂತಹ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದ ನೀತು ಶೆಟ್ಟಿ ಸದ್ಯ ಬೆಳ್ಳಿ ತೆರೆಯಿಂದ ಅಂತರದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ನೀಡುವಾಗಲೇ ತಮ್ಮ ವೈಯಕ್ತಿಕ ಜೀವನದಲ್ಲಿ ಆದ ಬದಲಾವಣೆಗಳಿಂದ ನೀತು ತೆರೆಮರೆಗೆ ಸರಿದಿದ್ದರು. ಆದರೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ.

ಪಟಪಟ ಮಾತಿನ ಮಲ್ಲಿ ಎನಿಸಿಕೊಂಡಿದ್ದ ನೀತು ತಮ್ಮ ಜೀವನದಲ್ಲಾದ ಬದಲಾವಣೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು ತಮ್ಮ ದೇಹದ ಬಗ್ಗೆ ಕಮೆಂಟ್‌ ಮಾಡುವವರ ಬಗ್ಗೆ ನೀನು ದಪ್ಪ ಎಂದು ಕಾಲೆಳೆಯುವರ ಬಗ್ಗೆ ನೀತು ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಮಾತನಾಡಿದ್ದು, ಕೆಲವು ಜನರ ಆಲೋಚನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ನಟಿ ನೀತು ದಪ್ಪ ಇದಿಯಾ ಅಂದ್ರೆ ನೀನು ದಿನ ಯಾರೋ ಜೊತೆಗೆ ಇದಿಯಾ ಎನ್ನುವ ಕೆಟ್ಟ ಆಲೋಚನೆ ಇದೆ ಜನರಲ್ಲಿ. ಆ ಸಮಯದಲ್ಲಿ ನಿಮಗೆ ಬಾಯ್‌ಫ್ರೆಂಡ್‌ ಕೂಡ ಇರದೇ ಇರಬಹುದು. ದಪ್ಪ ಇದೀಯಾ ಅಂದ್ರೆ ಮಜಾ ಮಾಡ್ತಿದ್ದೀಯಾ ಎನ್ನುವಂತದ್ದು ಇದೆ. ಇದು ನನಗೆ ತುಂಬಾ ನೋವು ಕೊಟ್ಟ ಮಾತುಗಳು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.