ಕಾಂಗ್ರೆಸ್ ಸರ್ಕಾರದಿಂದ ಹೊಸ 25 ಗ್ಯಾರಂಟಿ; ರಾಹುಲ್ ಗಾಂಧಿ ಮೇಲೆ ಫಿದಾ ಆದ ಕರುನಾಡ ಜನತೆ

 

ಎಲ್ಲೆಲ್ಲೂ ಲೋಕಸಭಾ ಚುನಾವಣೆಯ ಸುದ್ದಿಯೇ ವೈರಲ್ ಆಗ್ತಿರುವ ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳು  ಯಶಸ್ವಿಯಾದ ಹಿನ್ನೆಲೆಯಲ್ಲಿ ಅದೇ ರೀತಿಯ ಸೂತ್ರವನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಮೋದಿ ಸಾಮ್ರಾಜ್ಯವನ್ನು ಕೆಡವಲು ಮುಂದಾಗಿದೆ. ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದೆ.

ಈ ಐದು ನ್ಯಾಯಗಳ ಜೊತೆ 25 ಭರವಸೆಗಳನ್ನು ಕೊಟ್ಟಿದೆ. ಇಂದು ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯ ಕಾತಿಯಾವಾಡದ ಉಸ್ಮಾನ್​ಪುರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘರ್ ಘರ್ ಗ್ಯಾರಂಟಿ ಯೋಜನೆ ಅನಾವರಣಗೊಳಿಸಿದ್ದಾರೆ. ಐದು ನ್ಯಾಯ, ಇಪ್ಪತ್ತೈದು ಗ್ಯಾರಂಟಿಗಳಿರುವ ಕರಪತ್ರಗಳನ್ನು ಹಂಚಿದ್ದಾರೆ.  <a href=https://youtube.com/embed/_yFPzVQHMTA?autoplay=1&mute=1><img src=https://img.youtube.com/vi/_yFPzVQHMTA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಲೋಕಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಗೆಲ್ಲಲು ಹೊರಟಿರುವ ಎನ್​ಡಿಎ ಪ್ರಯತ್ನಕ್ಕೆ ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಮೂಲಕ ತೊಡರುಗಾಲು ಹಾಕಲು ಯಶಸ್ವಿಯಾಗುತ್ತದಾ ಕಾದುನೋಡಬೇಕು.25 ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಿದೆ. ಕರ್ನಾಟಕದಲ್ಲಿ ಮಹಿಳೆಯರನ್ನ ಹೆಚ್ಚು ಟಾರ್ಗೆಟ್ ಮಾಡಲಾಗಿದ್ದು,ಆದರೆ ಲೋಕಸಭಾ ಚುನಾವಣೆಯಲ್ಲಿ ಎಲ್ಲರಿಗೂ ಕೂಡ ಅನುಕೂಲವಾಗುವಂತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. 

ಮಹಿಳೆಯರು ರೈತರು ಶ್ರಮಿಕರು ಎಲ್ಲರಿಗೂ ಕೂಡ ಅನುಕೂಲವಾಗುವಂತೆ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಮಹಾಲಕ್ಷ್ಮಿ ಎನ್ನುವ ಗ್ಯಾರಂಟಿ ಯೋಜನೆಗಲ್ಲಿ 1 ಲಕ್ಷ ಹಣವನ್ನು ನೀಡುವ ಹಾಗೆ ಭರವಸೆಯನ್ನು ನೀಡಿದೆ. ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡವಾರು ಹುದ್ದೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.