ಒಂದು ಕಾಲದಲ್ಲಿ ಚಿನ್ನದಂತೆ ಮಿಂಚುತ್ತಿದ್ದ ನಿಖಿತಾ; ಇವತ್ತು ಆಕೆ ಹೇಗಿದ್ದಾ ರೆ ಗೊ ತ್ತಾ

 

ಪರಭಾಷಾ ನಟಿಯರು ಕನ್ನಡ ಸಿನಿಮಾಗಳಲ್ಲಿ ಮಿಂಚುವುದು ಹೊಸದೇನು ಅಲ್ಲ. ದಶಕಗಳಿಂದ ಈ ಪರಿಪಾಠ ನಡೆದುಬಂದಿದೆ. ಮುಂಬೈ ಬೆಡಗಿಯರು ಕನ್ನಡ ಸಿನಿಮಾಗಳಲ್ಲಿ ಸೊಂಟ ಬಳುಕಿಸಿದ್ದಾರೆ. ನಿಖಿತಾ ತುಕ್ರಾಲ್ ಸಹ ಕನ್ನಡ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದರು. ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಹುಳಿ ಹಿಂಡಿದ್ದು ನಿಖಿತಾ ತುಕ್ರಾಲ್ ಎಂದು ಇತ್ತೀಚೆಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದರು.

ಬೆರಳೆಣಿಯೆಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದರೂ ಸ್ಯಾಂಡಲ್‌ವುಡ್‌ನಲ್ಲಿ ನಿಖಿತಾ ಕ್ರೇಜ್ ಸೃಷ್ಟಿಸಿಕೊಂಡಿದ್ದರು. ನಟ ದರ್ಶನ್ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘ ನಿಖಿತಾರನ್ನು ಬ್ಯಾನ್ ಮಾಡಿತ್ತು. ಬಳಿಕ ಪಾರ್ವತಮ್ಮ ರಾಜ್‌ಕುಮಾರ್ ಮಧ್ಯಪ್ರವೇಶಿಸಿ ಈ ಬ್ಯಾನ್ ವಾಪಸ್ ಪಡೆಯುವಂತಾಗಿತ್ತು. ನಂತರ ದರ್ಶನ್ ಜೊತೆ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ನಟಿಸಿದ್ದರು.

https://youtube.com/shorts/LQK7llsiIqA?si=s1qwqi2XmzPdU2Ya

ಮುಂಬೈ ಬೆಡಗಿ ನಿಖಿತಾ ತುಕ್ರಾಲ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಆಕೆಗೆ ಶುಭಾಶಯ ಕೋರುತ್ತಿದ್ದಾರೆ. ಸದ್ಯ ಆಕೆ ಮದುವೆ ಆಗಿ ಪತಿ ಹಾಗೂ ಮಗಳ ಜೊತೆ ಜೀವನ ಸಾಗಿಸುತ್ತಿದ್ದಾರೆ. 2018ರಲ್ಲಿ ಬಂದ ಕನ್ನಡದ ರಾಜಸಿಂಹ ಚಿತ್ರದಲ್ಲಿ ಆಕೆ ಕೊನೆಯದಾಗಿ ನಟಿಸಿದ್ದರು. ಆ ಬಳಿಕ ಮತ್ತೆ ಬಣ್ಣ ಹಚ್ಚಲಿಲ್ಲ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟೀವ್ ಆಗಿದ್ದು ಆಗಾಗ್ಗೆ ಫೋಟೊ, ವೀಡಿಯೋ ಶೇರ್ ಮಾಡುತ್ತಿರುತ್ತಾರೆ.

1995ರಲ್ಲಿ ಬಾಲನಟಿಯಾಗಿ ನಿಖಿತಾ ಮೊದಲಿಗೆ ಬಣ್ಣ ಹಚ್ಚಿದ್ದರು. ಬಳಿಕ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಒಮ್ಮೆ ಹೋಟೆಲ್‌ವೊಂದರಲ್ಲಿ ತೆಲುಗು ನಿರ್ಮಾಪಕ ರಾಮಾನಾಯ್ಡು ಕಣ್ಣಿಗೆ ಬಿದ್ದು ಹಾಯ್ ಎನ್ನುವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ತೆಲುಗು, ತಮಿಳಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಕನ್ನಡದಲ್ಲಿ ಸುದೀಪ್ ಜೋಡಿಯಾಗಿ ಮೊದಲಿಗೆ ಮಹಾರಾಜ ಚಿತ್ರದಲ್ಲಿ ಮಿಂಚಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.