ವೈರಲ್ ಸುಂದರಿ ಮೊನಾಲಿಸಾ ಸದ್ಯದ ಪರಿಸ್ಥಿತಿ ಯಾರಿಗೂ ಬೇಡ
Feb 7, 2025, 13:00 IST
ಇದು ಸೋಷಿಯಲ್ ಮೀಡಿಯಾ ಯುಗ. ಅದೆಷ್ಟೋ ಜನರು ರಾತ್ರೋರಾತ್ರಿ ಫೇಮಸ್ ಆದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈ ಲಿಸ್ಟ್ಗೀಗ ಮೊನಾಲಿಸಾ ಎಂಟ್ರಿಯಾಗಿದ್ದಾರೆ. ಮಹಾ ಕುಂಭಮೇಳದ ಜಪಮಾಲೆ ಮಾರುವ ಚೆಲುವೆ ಸಿನಿಮಾಗೆ ಸಹಿ ಹಾಕಿದ್ದಾರೆ. ಹೌದು 2025ರ ಮಹಾ ಕುಂಭಮೇಳದಲ್ಲಿ ತಮ್ಮ ನೇತ್ರಗಳಿಂದಲೇ ಎಲ್ಲರನ್ನೂ ಮೋಡಿ ಮಾಡಿದ್ದ ಮೊನಾಲಿಸಾಗೆ ಅದೃಷ್ಟ ಒದಗಿಬಂದಿದೆ. ಜಪಮಾಲೆಗಳನ್ನು ಮಾರುತ್ತಿದ್ದ ಸಾಮಾನ್ಯ ಹುಡುಗಿ ಮೊನಾಲಿಸಾ ಹೀರೋಯಿನ್ ಆಗಿ ಮಿಂಚಲಿದ್ದಾರೆ.
ಹೌದು, ನಿರ್ದೇಶಕ ಸನೋಜ್ ಮಿಶ್ರಾ ಅವರ 'ದಿ ಡೈರಿ ಆಫ್ ಮಣಿಪುರ'ದಲ್ಲಿ ಚೆಲುವೆ ಮೊನಾಲಿಸಾ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿದ್ದು, ಸಹಿ ಹಾಕಲಾಗಿದೆ. ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರ ಸಹೋದರನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಮಹಾ ಕುಂಭಮೇಳ ಸುಂದರಿ.ಕುಟುಂಬದ ಆರ್ಥಿಕ ಸ್ಥಿತಿ ತೀರಾ ಕೆಳಮಟ್ಟದಲ್ಲಿದ್ದ ಹಿನ್ನೆಲೆ, ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಿರಲಿಲ್ಲ.
ಹೂಮಾಲೆಗಳನ್ನು ಮಾರುತ್ತಾ ಜೀವನ ಸಾಗಿಸುತ್ತಿದ್ದರು. 2025ರ ಮಹಾ ಕುಂಭಮೇಳದಲ್ಲಿಯೂ, ರುದ್ರಾಕ್ಷಿ ಮಾಲೆ ಗಳನ್ನು ಮಾರಾಟ ಮಾಡಿ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.ಮೊನಾಲಿಸಾ ಮಧ್ಯಪ್ರದೇಶದ ಮಹೇಶ್ವರದಲ್ಲಿ ಹಿಂದೂ ಕುಟುಂಬದಲ್ಲಿ ಜನವರಿ 21, 2009ರಂದು ಜನಿಸಿದರು. 16ರ ಹರೆಯದ 'ಮೊನಾಲಿಸಾ' ತುಂಬಾ ಸರಳ ಜೀವನ ಸಾಗಿಸುತ್ತಾ ಬಂದಿದ್ದಾರೆ. ಬಡತನ ಹಿನ್ನೆಲೆ 12ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸ ತೊರೆದು, ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗೋ ನಿಟ್ಟಿನಲ್ಲಿ ಹೂ ಮಾರಲು ನಿರ್ಧರಿಸುತ್ತಾರೆ.
<a href=https://youtube.com/embed/iaSIB8wPn2g?autoplay=1&mute=1><img src=https://img.youtube.com/vi/iaSIB8wPn2g/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಓದೋದನ್ನು ನಿಲ್ಲಿಸಿದ ನಂತರ, ಮೊನಾಲಿಸಾ ತಮ್ಮ ಕುಟುಂಬದ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರಂತೆ, ರುದ್ರಾಕ್ಷಿ ಮಾಲೆ ಮಾರಲು ಮಹಾ ಕುಂಭಮೇಳಕ್ಕೆ ಬಂದಿದ್ದರು. ಅವರ ಕೆಲ ಫೋಟೋ ವಿಡಿಯೋಗಳು ವೈರಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದರು. ಅವರ ಕಣ್ಣುಗಳು ನೆಟ್ಟಿಗರ ಗಮನ ಸೆಳೆದವು. ಜನರು ಮೊನಾಲಿಸಾ ಅವರನ್ನು ಬಾಲಿವುಡ್ ನಾಯಕಿಯರೊಂದಿಗೆ ಹೋಲಿಸಲು ಪ್ರಾರಂಭಿಸಿದರು. ಕೃಷ್ಣ ಸುಂದರಿ ಎಂದೇ ಜನಪ್ರಿಯರಾದರು.
ವಿಡಿಯೋ ವೈರಲ್ ಆದ ಬೆನ್ನಲ್ಲೇ, ಮಹಾಕುಂಭಮೇಳದಲ್ಲಿ ಜನ 'ಮೊನಾಲಿಸಾ' ಅವರನ್ನು ಸುತ್ತುವರೆದರು. ಇದು ಅವರ ವ್ಯಾಪಾರದ ಮೇಲೂ ಪರಿಣಾಮ ಬೀರಿತು. ಇದರಿಂದಾಗಿ ಅಸಮಾಧಾನಗೊಂಡ ಅವರ ತಂದೆ ಮಗಳನ್ನು ಮನೆಗೆ ಕಳುಹಿಸಿ ತೊಂದರೆ ನೀಡಿದ್ರು. ಆರೋಗ್ಯ ಕೆಟ್ಟಿತ್ತು. ಇದರಿಂದ ಸಿಕ್ಕಾಪಟ್ಟೆ ನೋವು ಕಾಡಿತ್ತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.