ಇನ್ನು ಇಷ್ಟು ವಷ೯ ಹೊರಬರಲ್ಲ, ದಶ೯ನ್ ಬೇಲ್ ಬಗ್ಗೆ ಕೋಡಿಶ್ರೀ ಬೆಚ್ಚಿಬೀಳಿಸುವ ಹೇಳಿಕೆ

 
 ಮಹಾಭಾರತದಲ್ಲಿ ಶ್ರೀ ಕೃಷ್ಣ ಇದ್ಧ ಹೀಗಾಗಿ ಭೀಮ ಗೆದ್ದ. ಈಗ ಶ್ರೀ ಕೃಷ್ಣ ಇಲ್ಲ ದುರ್ಯೋಧನ ಗೆಲ್ಲುತ್ತಾನೆ. ಪಾಪದ ಪಾಷಣ ಕಳೆಯಬೇಕು. ಮಾಡಿದ ಪಾಪವನ್ನ ಅನುಭವಿಸಲೇಬೇಕು ಹೀಗಂತ ಕೋಡಿಶ್ರೀ ಗಳು ಚಿಕ್ಕಬಳ್ಳಾಪುರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ದರ್ಶನ್ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ನಗರದ ಗರಿಗರೆಡ್ಡಿ ಎಂಬ ಭಕ್ತರ ಮನೆಗೆ ಆಗಮಿಸಿದ್ದ ಕೊಡಿ ಶ್ರೀಗಳು ಸಿದ್ದರಾಮಯ್ಯ ಹಾಗೂ ನಟ ದರ್ಶನ್ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ.
 ಈ ಹಿಂದೆ ಹಲವು ಭಾರಿ ಕೋಡಿಮಠ ಶ್ರೀಗಳು ಹೇಳಿದ್ದ ಭವಿಷ್ಯನ ನಿಜವಾಗಿತ್ತು. ಅಳೆಯ ಅಬ್ಬರವಿರಲಿದೆ, ಭೂಕುಸಿತವಾಗಲಿದೆ ಎಂದು ಭವಿಷ್ಯ ನುಡಿದಿದ್ದಾಗ, ಅಂಕೋಲಾದ ಶಿರೂರು ಹಾಗೂ ಕೇರಳದ ವಯನಾಡಿನಲ್ಲಿ ಆಘಾತ ಸಂಭವಿಸಿತ್ತು.ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಮುಡಾ ನಿವೇಶನ ವಾಪಾಸ್‌ ನೀಡಿದ್ದರೂ, ಅವರಿಗೆ ದೈವಬಲವಿಲ್ಲ ಎನ್ನುವ ಮೂಲಕ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎನ್ನುವ ಸೂಚನೆ ನೀಡಿದ್ದಾರೆ.  <a href=https://youtube.com/embed/dkRnv0sfWIo?autoplay=1&mute=1><img src=https://img.youtube.com/vi/dkRnv0sfWIo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
    ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಕೋಡಿಶ್ರೀಗಳು ಮಾತನಾಡುತ್ತಾ,ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಮೋಸದಿಂದ ಕರ್ಣನ ಕೈಯಲ್ಲಿ ಕಟ್ ಮಾಡಿಸುತ್ತಾರೆ.  ಆಗ ಅವನ ಹೆಂಡತಿ ರಣರಂಗ ಪ್ರವೇಶ ಮಾಡುತ್ತಾಳೆ.ಮಹಾಭಾರತದಲ್ಲಿ ಶ್ರೀ ಕೃಷ್ಣ ಇದ್ದ ಹೀಗಾಗಿ ಬೀಮ ಗೆಲ್ಲುತ್ತಾನೆ.
 ಇಲ್ಲಿ ಕೃಷ್ಣ ಇಲ್ಲ ದುರ್ಯೋಧನ ಗೆಲ್ಲುತ್ತಾನೆ' ಎಂದು ಹೇಳಿದರು. ಸಿದ್ದರಾಮಯ್ಯನವರ ಪತ್ನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ  ಹೇಳುತ್ತಿದ್ದರು ಆಕೆ ಎಲ್ಲಿಗೂ ಬರುವುದಿಲ್ಲ ಅಂತ, ಆದರೆ ಈಗ ಏನಾಯ್ತು.
 ಇತ್ತೀಚೆಗೆ ಮಠಕ್ಕೆ ಬಂದಿದ್ದ  ಸಿದ್ದರಾಮಯ್ಯನವರೇ ನನಗೆ ಹೇಳಿದರು, ಇಡೀ ದೇಶಕ್ಕೆ ನನ್ನ ಹೆಂಡತಿ ಕಾಣಿಸಿಕೊಂಡರು ಅಂತಾ ಈಗ ಮೂಡ ಕೇಸ್ನಲ್ಲಿ ಪ್ರವೇಶ ನೀಡಿದ ಅವರ ಪತ್ನಿ,  ಖುದ್ದಾಗಿ ಬಂದು ನನಗೆ ನಿವೇಶನಗಳು ಬೇಡ ಅಂತ ವಾಪಸ್ಸು ಬರೆದು ಕೊಟ್ಟಿದ್ದಾರೆ.. ಇದೆಲ್ಲ ಹೀಗೆ ಆಗುತ್ತೆ ಅಂತ ನಾನು ಕಳೆದ ಮೂರು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ.. ಎಂದು ಹೇಳಿದ್ದಾರೆ.
ಈ ವೇಳೆ ನಟ ದರ್ಶನ್ ಬಗ್ಗೆ ಮಾತನಾಡಿದ ಕೊಡಿಶ್ರೀಗಳು ಮಾಡಿದ ಪಾಪವನ್ನು ಅನುಭವಿಸಲೇಬೇಕು. ಪುಣ್ಯದ ಕೆಲಸ ಮಾಡಲು ಭಯಪಡಬಾರದು, ಜನರು ಅದ್ಯಾಕೋ ಭಯಪಡುತ್ತಿದ್ದಾರೆ, ಪಾಪದ ಪಾಷಾಣ ಕಳೆಯಬೇಕು,ಪಾಪದ ಕೆಲಸ ಮಾಡುವ ಮುಂಚೇಯೇ ಹೆದರಬೇಕಿತ್ತು ಎಂದರು, ಅಲ್ಲದೇ ದೊಡ್ಡ ದೊಡ್ಡವರೆಲ್ಲ ಜೈಲಿಗೆ ಹೋಗ್ತಾರೆ ಅಂತ ನಾನು ಈ ಹಿಂದೆಯೇ ಹೇಳಿದ್ದೆ. ಮುಂದೆ ಮತ್ತಷ್ಟು ಗಂಡಾಂತರಗಳು ಕಾದಿವೆ ಸದ್ಯಕ್ಕೆ ಅದನ್ನ ಹೇಳುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.