ಆ ಕೆಲಸಕ್ಕೆ ಒಪ್ಪಿದರೆ ಮಾತ್ರ ಸಿನಿಮಾದಲ್ಲಿ ಅ ವಕಾಶ; ಮಲಯಾಳಂ ಚಿತ್ರರಂಗದ ಹಣೆಬರಹ ಬೆಳಕಿಗೆ
Aug 21, 2024, 08:34 IST
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಲಾಗಿದೆ. ಮಾಜಿ ಹೈಕೋರ್ಟ್ ಜಡ್ಜ್ ಹೇಮಾ, ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟಿ ಶಾರದಾ ಇನ್ನಿತರರನ್ನು ಈ ಸಮಿತಿಯಲ್ಲಿದ್ದರು. 2019ರಲ್ಲಿಯೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಕೆಲ ಸೂಕ್ಷ್ಮ ವಿಚಾರಗಳು ಇರುವುದರಿಂದ ಸರ್ಕಾರ ಇದನ್ನು ಬಹಿರಂಗಪಡಿಸಿರಲಿಲ್ಲ.
ಮಾಹಿತಿ ನೀಡುವಂತೆ ಹಲವರು ಆರ್ಟಿಐ ಅರ್ಜಿ ಸಲ್ಲಿಸಿದ್ರು. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಕೆಲ ವಿಚಾರಗಳನ್ನು ಬಹಿರಂಗಪಡಿಸಲಾಗಿದೆ.ಯಾರ ಮೇಲಾದ್ರು ಕಂಪ್ಲೇಂಟ್ ಹೇಳಿದ್ರೆ ಅಡ್ಜಸ್ಟ್ ಮಾಡಿಕೊಳ್ಳಿ ಅಂತ ಹೇಳಿ ಬಾಯಿಮುಚ್ಚಿಕೊಳ್ಳುತ್ತಾರೆ. ಆದ್ರೆ ಸೂಪರ್ ಸ್ಟಾರ್‌ಗಳು, ನಿರ್ದೇಶಕರು ಮತ್ತು ನಿರ್ಮಾಪಕರು ಏನು ಬೇಕಾದರೂ ಮಾಡಬಹುದು. ಅವರಿಗೆ ಯಾರೂ ಏನೂ ಹೇಳುವುದಿಲ್ಲ ಎಂದು ಕೆಲವು ಮಹಿಳೆಯರು ಸಮಿತಿ ಮುಂದೆ ತಿಳಿಸಿದ್ದಾರೆ.
<a href=https://youtube.com/embed/tOKj3hK52bw?autoplay=1&mute=1><img src=https://img.youtube.com/vi/tOKj3hK52bw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹಿರಿಯ ನಟಿಯ ಪ್ರಕಾರ ಮಹಿಳೆಯರು ತಮಗಾದ ಕೆಟ್ಟ ಅನುಭವವನ್ನು ಬಾಯ್ಬಿಟ್ರೆ ಚಿತ್ರದಲ್ಲಿ ಅವಕಾಶ ಸಿಗುವುದಿಲ್ಲ ಎಂಬ ಭಯವಿದೆ ಎಂದಿದ್ದಾರೆ.ಮಲಯಾಳಂ ಇಂಡಸ್ಟ್ರಿಯಲ್ಲಿ ವ್ಯಾಪಕ ಲೈಂಗಿಕ ಶೋಷಣೆ ನಡೆಯುತ್ತಿದೆ. ಮುಖ್ಯಪಾತ್ರಗಳಿಗೂ ಶೋಷಣೆಯ ಪಾಲು ಇದೆ. ಹೇಮಾ ಸಮಿತಿ ವರದಿ ಪ್ರಕಾರ ತಪ್ಪು ಕೆಲಸಗಳಿಗೆ ಜನರನ್ನು ಒತ್ತಾಯಿಸುತ್ತಿದ್ದಾರೆ.
ಸಿನಿಮಾ ಸೆಟ್ ಗಳಲ್ಲಿ ಮಹಿಳೆಯರು ತೀವ್ರ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ. ಚಿತ್ರರಂಗ ಹೊರಗೆ ಮಾತ್ರ ಚೆಂದ ಕಾಣುತ್ತೆ. ಅವಕಾಶ ಪಡೆಯಲು ರಾಜಿ ಮಾಡಿಕೊಳ್ಳಲೇಬೇಕಾದ ಸ್ಥಿತಿ ಇದೆ ಎಂದು ಕೆಲ ನಟಿಯರು ಸಮಿತಿಯ ಮುಂದೆ ಹೇಳಿಕೊಂಡಿದ್ದಾರೆ. ವರದಿಯ ಪ್ರಕಾರ, ನಿರ್ದೇಶಕರು ಮತ್ತು ನಿರ್ಮಾಪಕರು ವಿಕೃತ ಕೆಲಸಗಳನ್ನು ಮಾಡಲು ಒತ್ತಾಯಿಸುತ್ತಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.