ಪರ್ವತಮ್ಮ ರಾಜ್ ಕುಮಾರ್ ಅನುಪ್ರಭಾಕರ್ ಬಳಿ ಆ ಕೆಲಸ ಮಾಡಬೇಡ ಎಂದಿದ್ದರು;

 
ಚಿತ್ರರಂಗದಲ್ಲಿ ನಟ, ನಟಿಯರು ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವುದು ಗೊತ್ತೇಯಿದೆ. ಹಲವರು ಹೆಸರು ಬದಲಿಸಿಕೊಂಡು ಸೂಪರ್ ಸಕ್ಸಸ್ ಕಂಡಿದ್ದಾರೆ. ಕೆಲವೊಮ್ಮೆ ನಿರ್ದೇಶಕ, ನಿರ್ಮಾಪಕರು ತಮ್ಮ ಚಿತ್ರದ ನಟ-ನಟಿಯರ ಹೆಸರು ಬದಲಿಸುವುದು ಇದೆ.ಒಂದೇ ಹೆಸರಿನವರು ಇಬ್ಬರೂ ಮೂವರು ಇದ್ದಾಗ ಅಥವಾ ಮೊದಲಿನ ಹೆಸರು ಕರೆಯಲು ಅಷ್ಟು ಸುಲಭವಿಲ್ಲ ಎಂದಾಗ ಈ ರೀತಿ ಹೆಸರು ಬದಲಿಸಿಕೊಳ್ಳುತ್ತಾರೆ. 
ಕೆಲವರು ಜಾತಕ, ಸಂಖ್ಯಾಶಾಸ್ತ್ರ ಅಂತೆಲ್ಲಾ ತಡಕಾಡಿ ಹೆಸರು ಬದಲಿಸಿಕೊಂಡಿದ್ದಾರೆ. ಕನ್ನಡ ನಟಿ ಅನು ಪ್ರಭಾಕರ್ 'ಹೃದಯ ಹೃದಯ' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಬಂದರು. ಆಗ ಪಾರ್ವತಮ್ಮ ಆಕೆಯ ಹೆಸರು ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ.ಎಂ. ವಿ ಪ್ರಭಾಕರ್ ಹಾಗೂ ಗಾಯತ್ರಿ ಪ್ರಭಾಕರ್ ಪುತ್ರಿ ಅನು ಪ್ರಭಾಕರ್ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು.
 ಚಪಲ ಚೆನ್ನಿಗರಾಯ ಚಿತ್ರದಲ್ಲಿ ಮೊದಲಿಗೆ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. 'ಹೃದಯ ಹೃದಯ' ಆಕೆ ನಾಯಕಿಯಾಗಿ ನಟಿಸಿದ ಚೊಚ್ಚಲ ಚಿತ್ರ. ಶ್ರೀ ವೈಷ್ಣವಿ ಕಂಬೈನ್ಸ್‌ ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಈ ಸಿನಿಮಾ ನಿರ್ಮಿಸಿದ್ದರು.ಹೃದಯ ಹೃದಯ' ಬಳಿಕ ಅನು ಪ್ರಭಾಕರ್ ಮತ್ತೆ ತಿರುಗಿ ನೋಡಲಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. 
ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದರು. ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅನು ಮಾತನಾಡಿದ್ದಾರೆ. ತಮ್ಮ ಬಾಲ್ಯ, ಸಿನಿಮಾ ಹೀಗೆ ಸಾಕಷ್ಟು ಸಂಗತಿ ಹಂಚಿಕೊಂಡಿದ್ದಾರೆ.ಪಾರ್ವತಮ್ಮ ನೋಡು ನಿಮ್ಮ ಅಕ್ಕ ನೀತುಗೆ ಆಶಾರಾಣಿ ಅಂತ ಹೆಸರಿಟ್ಟೆ. ಜಯಶ್ರೀಗೆ ಸುಧಾರಾಣಿ ಅಂತ ಇಟ್ಟೆ. ನಿನಗೆ ಅನುಶ್ರೀ ಅಂತ ಹೆಸರಿಡ್ತೀನಿ ಅಂದ್ರು. ಮಾಲಾಶ್ರೀ ಆಯ್ತು ಈಗ ಅನುಶ್ರೀ ಅಂದ್ರು. ಪ್ರೇಮಾ ಹೆಸರು ಚೇಂಜ್ ಮಾಡಿಕೊಳ್ಳಲಿಲ್ಲ. ನೀನು ಚೇಂಜ್‌ ಮಾಡ್ಕೊ ಅಂತ ಟೈಟಲ್ ಕಾರ್ಡ್ ಮಾಡಿಸುವ ದಿನ ಕೂಡ ಕೇಳಿದ್ರು.
ನಾನು ಅಮ್ಮ ಪ್ಲೀಸ್ ಬೇಡ ಎಂದೆ. ಗಾಯತ್ರಿ ಪ್ರಭಾಕರ್ ಅಂತ್ಲೇ ನಮ್ಮಮ್ಮ ಪರಿಚಯ. ಹಾಗಾಗಿ ನಮ್ಮ ತಂದೆ ಹೆಸರು ಇರಲಿ, ಅನುಪ್ರಭಾಕರ್ ಅಂತ. ಬೇಡ್ವಾ? ಅಂತ ಪದೇ ಪದೇ ಕೇಳಿದ್ರು. ನಾನು ಬೇಡ ಎಂದು ಮನವಿ ಮಾಡಿಕೊಂಡೆ. 'ಹೃದಯ ಹೃದಯ' ಆದ್ಮೇಲೆ ಅನುಪ್ರಭಾಕರ್ ಅಂತ ಅಧಿಕೃತವಾಗಿ ಬದಲಿಸಿಕೊಂಡೆ. ನನ್ನ ಹೆಸರು ಅನ್ನಪೂರ್ಣ ಪ್ರಭಾಕರ್" ಎಂದು ಅನು ವಿವರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.