ಶಾಲಾ ಮಕ್ಕಳ ಬಿಸಿಊಟ ಮಾಡಿದ ನವಿಲು; ಫಿದಾ ಆದ ಕನ್ನಡಿಗರು
Sep 6, 2024, 15:25 IST
ಬೇರೆಲ್ಲೂ ಊಟ ಕಾಣದೆ ಹಸಿವಿನಿಂದ ಸರ್ಕಾರಿ ಶಾಲೆಗೆ ಆಗಮಿಸಿದ ರಾಷ್ಟ್ರಪಕ್ಷಿ ನವಿಲು, ಅಕ್ಷರ ದಾಸೋಹ ಯೋಜನೆಯಲ್ಲಿ ಮಕ್ಕಳೊಂದಿಗೆ ಕೂಡಿ ಬಿಸಿಯೂಟ ಸವಿದು ಅಚ್ಚರಿ ಮೂಡಿಸಿದೆ. ಶಾಲಾ ಆವರಣದಲ್ಲಿ ಪಂಕ್ತಿ ಸಾಲಿನಲ್ಲಿ ಕುಳಿತು ಮಕ್ಕಳು ಬಿಸಿಯೂಟ ಸೇವಿಸುವ ಮುನ್ನ ಪ್ರಾರ್ಥನೆ ಸಲ್ಲಿಸುವಾಗ ಆಹಾರ ಅರಸಿ ಅಲ್ಲಿಗೆ ಹಾರಿ ಬಂದ ನವಿಲು ಮಕ್ಕಳ ಅನ್ನದ ತಟ್ಟೆಯತ್ತ ಸಾಗಿದೆ.
<a href=https://youtube.com/embed/3WybwZASEB4?autoplay=1&mute=1><img src=https://img.youtube.com/vi/3WybwZASEB4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರಾಷ್ಟ್ರೀಯ ಪಕ್ಷಿ ನವಿಲೊಂದು ಸರ್ಕಾರಿ ಶಾಲೆಗೆ ಹಾಜರಾಗಿತ್ತು. ಹಾಜರಾಗೋದು ಅಷ್ಟೇಯಲ್ಲ, ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನೂ ಸವಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ಕೆರೂರು ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣಕ್ಕೆ ಇಂದು ರಾಷ್ಟ್ರ ಪಕ್ಷಿ ಆಗಮಿಸಿತ್ತು.
ಶಾಲಾ ಆವರಣದಲ್ಲಿ ಓಡಾಡಿ ತರಗತಿಗಳಿ ಬಳಿ ಸುಳಿದಾಡಿತ್ತು. ಬಳಿಕ ಮಧ್ಯಾಹ್ನ ಅಕ್ಷರ ದಾಸೋಹ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಬಿಸಿ ಊಟವನ್ನು ಸವಿದು ಖುಷಿ ಪಟ್ಟಿತು. ಮಕ್ಕಳೊಂದಿಗೆ ಕೂಡಿ ಬಿಸಿಯೂಟ ಸವಿದ ಮಯೂರಿ, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಶಾಲಾ ಆವರಣದಲ್ಲಿ ಪಂಕ್ತಿ ಸಾಲಿನಲ್ಲಿ ಕುಳಿತು ಮಕ್ಕಳ ಜೊತೆ ಬಿಸಿಯೂಟ ಸೇವಿಸುವ ಮುನ್ನ ಪ್ರಾರ್ಥನೆ ಸಲ್ಲಿಸುವಾಗ ಮಕ್ಕಳ ಬಳಿಯೇ ಓಡಾಡಿತ್ತು.
ಬಳಿಕ ವಿದ್ಯಾರ್ಥಿಗಳ ತಟ್ಟೆಯತ್ತ ಸಾಗಿತ್ತು. ಆಗ ಶಿಕ್ಷಕರ ಸಲಹೆ ಮೇರೆಗೆ ಓರ್ವ ವಿಧ್ಯಾರ್ಥಿನಿ ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ತಾನು ಬೇರೊಂದು ತಟ್ಟೆ ಪಡೆದು ಊಟ ಮಾಡಿದ್ದಾಳೆ. ಇದನ್ನು ಕಂಡ ಮಕ್ಕಳು ಸಂತೋಷದಿಂದ ಚಪ್ಪಾಳೆ ತಟ್ಟಿದ್ದಾರೆ. ಈ ಸಂದರ್ಭದಲ್ಲಿ ಊಟ ಸವಿಯುತ್ತಾ ಮುಖ್ಯೋಪಾಧ್ಯಾಯ ಪಿ. ಪಿ ನಾಯಿಕ, ಸಹಶಿಕ್ಷಕಿ ಎನ್. ವೈ ರಾಠೋಡ್ ಮಕ್ಕಳಿಗೆ ರಾಷ್ಟ್ರಪಕ್ಷಿಯ ಕುರಿತು ಸಂಪೂರ್ಣ ವಿವರ ನೀಡಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.