ಪ್ರದೀಪ್ ಈಶ್ವರ್ ಈಕೂಡಲೇ ರಾಜೀನಾಮೆ ನೀಡಬೇಕು ಎಂದ ರಂಗಣ್ಣ;

 
ಪ್ರದೀಪ್ ಈಶ್ವರ್ VS ಡಾ. ಕೆ. ಸುಧಾಕರ್ ಅವರ ನಡುವೆ ಮಾತಿನ ಯುದ್ಧ ಬಲು ಜೋರಾಗಿ ನಡೆಯುತ್ತಾ ಬಂದಿದೆ. ಅದ್ರಲ್ಲೂ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರದೀಪ್ ಈಶ್ವರ್ ಅವರು ಗೆದ್ದ ನಂತರ, ಡಾ. ಕೆ. ಸುಧಾಕರ್ ಅವರಿಗೆ ಸವಾಲು ಎಸೆದಿದ್ದರು. ಹೀಗಿದ್ದಾಗ ಲೋಕಸಭೆ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ. ಕೆ. ಸುಧಾಕರ್ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ಪಡೆದಾಗ, ಇದೇ ಪ್ರದೀಪ್ ಈಶ್ವರ್ ಸವಾಲು ಒಂದನ್ನ ಹಾಕಿದ್ರು. 
ಈಗ ಅದೇ ಸವಾಲು ಪ್ರದೀಪ್ ಈಶ್ವರ್‌ಗೆ ಕಂಟಕ ತಂದಿದೆ.ಹೌದು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ ಒಂದೇ ಒಂದು ಮತ ಹೆಚ್ಚಾಗಿ ಪಡೆದರೂ, ಆ ಕ್ಷಣ ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದರು ಪ್ರದೀಪ್ ಈಶ್ವರ್. ಹೀಗಿದ್ದಾಗ ಡಾ. ಕೆ. ಸುಧಾಕರ್ ಅವರು ಇಂದು ಬರೋಬ್ಬರಿ 1,12,866 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಗೆಲುವಿನ ನಂತರ ಇದೀಗ ಪ್ರದೀಪ್ ಈಶ್ವರ್ ಅವರ ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ನಡೆಯುವಾಗಲೇ, ಮಾಜಿ ಸಂಸದ ಪ್ರತಾಪ್ ಸಿಂಹ ಹೊಸ ಆರೋಪದ ಬಾಂಬ್ ಸಿಡಿಸಿದ್ದಾರೆ. ಪ್ರತಾಪ್ ಸಿಂಹ ಇದೀಗ ಪ್ರದೀಪ್ ಈಶ್ವರ್ ಅವರ ಚಾಲೆಂಜ್ ಕುರಿತು ಟ್ವೀಟ್ ಒಂದನ್ನ ಮಾಡಿ ಹಳೆಯ ವಿಡಿಯೋ ಶೇರ್ ಮಾಡಿದ್ದು 'Breaking News: ಇನ್ನು ಕೆಲವೇ ಗಂಟೆಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ!' ಅಂತಾ ಇದೀಗ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ. <a href=https://youtube.com/embed/Qlm-D0iDDgw?autoplay=1&mute=1><img src=https://img.youtube.com/vi/Qlm-D0iDDgw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ಟ್ವೀಟ್ ಹಾಗೂ ಪ್ರದೀಪ್ ಈಶ್ವರ್ ಈ ಹಿಂದೆ ನೀಡಿದ್ದ ಹೇಳಿಕೆ ಇದೀಗ ಮತ್ತೊಮ್ಮೆ ಭಾರಿ ವೈರಲ್ ಆಗುತ್ತಿದೆ. ಅಲ್ಲದೆ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಕೂಡ ಆರಂಭ ಆಗಿದೆ.ಡಾ. ಕೆ. ಸುಧಾಕರ್ ಅವರು ಬಿಜೆಪಿ ಟಿಕೆಟ್ ಪಡೆದ ನಂತರ, ಭರ್ಜರಿ ಗೆಲುವು ಸಾಧಿಸುವ ಎಲ್ಲಾ ಸಾಧ್ಯತೆಗಳ ಬಗ್ಗೆ ಮೊದಲೇ ಚರ್ಚೆ ಶುರುವಾಗಿತ್ತು. ಅದರಲ್ಲೂ ಗ್ರೌಂಡ್ ರಿಯಾಲಿಟಿ ಕೂಡ ಡಾ. ಕೆ. ಸುಧಾಕರ್ ಅವರ ಪರವಾಗಿಯೇ ಇತ್ತು. 
ಹೀಗಾಗಿ ಸುಧಾಕರ್ ಅವರು ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದಿದ್ದಾರೆ. ಈ ಗೆಲುವು ಡಾ. ಕೆ. ಸುಧಾಕರ್ ಅವರಿಗೆ ಬಲ ತುಂಬಿದ್ದರೆ, ಪ್ರದೀಪ್ ಈಶ್ವರ್ ಅವರು ರಾಜೀನಾಮೆ ನೀಡುತ್ತಾರಾ? ಎಂಬ ಪ್ರಶ್ನೆಯು ಈಗ ಉದ್ಭವಿಸಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೇಳಿರುವ ಪ್ರಶ್ನೆಗೆ ಪ್ರದೀಪ್ ಈಶ್ವರ್ ಅವರೇ ಉತ್ತರ ನೀಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.