ಈ ವಾರ ಮನೆಯಿಂದ ಹೊರ ಹೊಗಲು ಫಿಕ್ಸ್ ಆದ ಪ್ರತಾಪ್, ಎಲಿಮಿನೇಷನ್ ಪ್ರಕ್ರಿಯೆ ಹೇಗಿತ್ತು ಗೊ ತ್ತಾ

 

ಬಿಗ್‌ಬಾಸ್‌ ಇದೀಗ ಫಿನಾಲೆಗೆ ಪ್ರವೇಶಿಸುವ ಹಂತದಲ್ಲಿದೆ. ಈ ಸಮಯದಲ್ಲಿ ಮನೆಯಿಂದ ಹೊರಕ್ಕೆ ಹೋಗಲು ಯಾವುದೇ ಸ್ಪರ್ಧಿಯೂ ಬಯಸುತ್ತಿಲ್ಲ. ಫಿನಾಲೆಯವರೆಗೆಯಾದರೂ ಬರಬೇಕು ಎಂಬ ಕನಸು ಎಲ್ಲರಲ್ಲಿಯೂ ಕಾಣುತ್ತಿದೆ. ಇದೇ ಸಮಯದಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ತಾವು ಸ್ಟ್ರಾಂಗ್‌ ಎಂದುಕೊಂಡವರು ಎಡವುತ್ತಿದ್ದಾರೆ. 

ಮಾತಿನ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಡ್ರೋನ್‌ ಪ್ರತಾಪ್‌ನಂತೆ ಕೆಲವರು ತಮ್ಮ ಮೇಲೆ ನಿಗಾ ಇಟ್ಟುಕೊಂಡು ಎಚ್ಚರಿಕೆಯಿಂದ ಆಡುತ್ತಿದ್ದಾರೆ.
ಹೀಗೆ ಹಿಂದೊಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಜಗಳದ ಕಿಡಿ ಮತ್ತೆ ಹೊತ್ತಿಕೊಂಡಿದೆ. ಇದರ ಪರಿಣಾಮ ಏನಾಗುತ್ತದೆ? ವಾರಾಂತ್ಯದ ಹೊತ್ತಿಗೆ ಫಿನಾಲೆಗೆ ಪ್ರವೇಶ ಪಡೆದುಕೊಳ್ಳಲಿರುವ ಸದಸ್ಯ ಯಾರು ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೆ ಕಾಯಬೇಕು.  <a href=https://youtube.com/embed/HOK2dzgRLWY?autoplay=1&mute=1><img src=https://img.youtube.com/vi/HOK2dzgRLWY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಒಬ್ಬರನ್ನು ಆಟದಿಂದ ಹೊರಗಿಡುವ ಅಧಿಕಾರ ಸಂಗೀತಾ ಅವರಿಗೆ ಸಿಕ್ಕಂತಿದೆ. ವಿನಯ್ ಅವರು ಸಂಗೀತಾಗೆ ನಿನಗೆ ಒಬ್ಬರನ್ನು ತೆಗೆದು ಒಬ್ಬರನ್ನು ಸೇರಿಸುವುದಕ್ಕೆ ಅಡ್ವಾಂಟೇಜ್ ಬರುತ್ತದೆ ಎಂದು ಹೇಳಿದಾಗ ಸಂಗೀತಾ, ನಾನು ಫಸ್ಟ್ ಕಾರ್ತಿಕ್‌ನನ್ನೇ ತೆಗೆಯುವುದುಎಂದು ಹೇಳಿದ್ದಾರೆ. ಇನ್ನು ಈ ವಾರದ ಬೆಸ್ಟ್ ಸ್ಪರ್ಧಿ ಎಂದು ಪ್ರತಾಪ್ ಅವರು ಕರೆಸಿಕೊಂಡರೆ ಕಳಪೆ ಪಟ್ಟ ತುಕಾಲಿ ಸಂತೋಷ್ ಅವರಿಗೆ ದೊರೆತಿದೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಇಂದಿನ ಸಂಚಿಕೆಯಲ್ಲಿ ಟಿಕೆಟ್‌ ಟು ಫಿನಾಲೆ ಟಾಸ್ಕ್‌ಗಳು ಆರಂಭವಾಗಿವೆ. ಟಿಕೆಟ್ ಟು ಫಿನಾಲೆ ಟಾಸ್ಕ್‌ಗಳು ಬಿಗ್‌ಬಾಸ್ ಮನೆಯೊಳಗೆ ಸಾಕಷ್ಟು ಚಕಮಕಿ ಹುಟ್ಟಿಸುತ್ತಿದೆ.

ಇನ್ನು  ಈ ವಾರ ಕೂಡ ಸಿಂಗಲ್ ಸಿಂಹಿಣಿ ಎಂದು ಕರೆಸಿಕೊಂಡಿರುವ ಸಂಗೀತಾ ಶೃಂಗೇರಿ ಅವರೇ ಕ್ಯಾಪ್ಟನ್ ಪಟ್ಟ ಏರಿದ್ದಾರೆ. ಸಂಗೀತಾ ಅವರು ಈ ವಾರದ ಕ್ಯಾಪ್ಟನ್​ ಆಗಿ  ಆಯ್ಕೆಯಾದ ಖುಷಿಗೆ ಅವರ ಫ್ಯಾನ್ಸ್ ಸಕತ್ ಥ್ರಿಲ್ ಆಗಿದ್ದಾರೆ.ಸಂಗೀತಾ ಬಿಗ್​ ಬಾಸ್​ ವಿನ್​ ಆಗಲಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಕಮೆಂಟ್​​ ಬರುತ್ತಿದೆ. ಸದ್ಯ ಅವರಿಗೆ ಜನರ ಬೆಂಬಲವೂ ಹೆಚ್ಚಿದೆ ಎನ್ನಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.