ಮಿತಿ ಇಲ್ಲದೆ ನಡೆಯಿತು ಪ್ರಿ ವೆಡ್ಡಿಂಗ್ ಶೂಟ್, 'ಕನ್ನಡಿಗರಿಂದ ಬಗೆಬಗೆಯ ಕಾಮೆಂಟ್'

 
 ಮೊದಲೆಲ್ಲಾ ಮದುವೆಯಲ್ಲಿ ಫೋಟೊ ತೆಗೆಯುತ್ತಿದ್ದರು. ನಂತರದಲ್ಲಿ ಫ್ರಿ ವೆಡ್ಡಿಂಗ್ ಟ್ರೆಂಡ್ ಆರಂಭವಾಯಿತು.ಮದುವೆ ಮೊದಲು ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಈಗ ಸಾಮಾನ್ಯವಾಗಿದೆ. ಈ ಸಮಯದಲ್ಲಿ ನವಜೋಡಿ ವಿವಿಧ ಥೀಮ್‌ಗಳನ್ನು ಆಧರಿಸಿ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುತ್ತಾರೆ.
 ಇದನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡು ಸಂಭ್ರಮಿಸುವುದು ಕೂಡ ಸಾಮಾನ್ಯ. ಕೆಲವು ಫೋಟೋ ಶೂಟ್ಗಳಿಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಫೋಟೋ ಶೂಟ್ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದೀಗ ಅಂತದ್ದೇ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದ್ದು, ವಿಡಿಯೋ ಕಂಡು ನೆಟ್ಟಿಗರು ಗರಂ ಆಗಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.
ವೈರಲ್​​ ಆಗಿರುವ ವಿಡಿಯೋದಲ್ಲಿ ನವ ಜೋಡಿ ಪಾಶ್ಚಿಮಾತ್ಯ ಶೈಲಿಯಲ್ಲಿ ಚುಂಬಿಸುತ್ತಾ ಇರುವುದನ್ನು ಕಾಣಬಹುದು. ಲಿಪ್​ ಲಾಕ್​ ಮಾಡುತ್ತಾ ಮುಳುಗಿದ್ದ ಜೋಡಿಯನ್ನು ಕಂಡು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿ ಅಸಭ್ಯವಾಗಿ ಮಿತಿ ಮೀರಿದ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಯಾಕೆ ಬೇಕು? ಎಂದು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ @indian_armada ಎಂಬ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1.2 ಮಿಲಿಯನ್​ ಅಂದರೆ 10ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂಥವೇ ಟ್ರೆಂಡ್ ಆಗ್ತಿವೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.