ಮೈಚಳಿ ಬಿಟ್ಟು ಮೈಕುಣಿಸಿ ಪಡ್ಡೆ ಹುಡುಗರ ನಿದ್ದೆ ಕದ್ದ ಪ್ರಿಯಾಮಣಿ
ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪ್ರಿಯಾಮಣಿ ಸದ್ಯ ಮುಸ್ತಫಾ ರಾಜ್ ಜೊತೆ ವೈವಾಹಿಕ ಬದುಕಿನಲ್ಲಿ ಖುಷಿಪಟ್ಟಿದ್ದಾರೆ. 2017 ರಲ್ಲಿ ಉದ್ಯಮಿ ಮುಸ್ತಫಾ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಿರುವಾಗ ಇದೀಗ ತಮ್ಮ ಡ್ಯಾನ್ಸ್ ಒಂದರಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
ಈ ಹಿಂದೆ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ “ಚೆನ್ನೈ ಎಕ್ಸಪ್ರಸ್’ ಸಿನಿಮಾದಲ್ಲಿ ನಟಿ ಪ್ರಿಯಾಮಣಿ “ಒನ್.. ಟು… ತ್ರಿ… ಫೋರ್…’ ಎಂಬ ಹಾಡಿಗೆ ಸೊಂಟ ಬಳುಕಿಸಿ, ಮಸ್ತ್ ಆಗಿ ಹೆಜ್ಜೆ ಹಾಕಿದ್ದು ನಿಮಗೆ ನೆನಪಿರಬಹುದು. ಈಗ ಪ್ರಿಯಾಮಣಿ ಮತ್ತೂಮ್ಮೆ ಶಾರುಖ್ ಖಾನ್ ಜೊತೆ ನಟಿಸುವ ಬಿಗ್ ಚಾನ್ಸ್ ಗಿಟ್ಟಿಸಿಕೊಂಡು ನಟಿಸಿದ್ದಾರೆ ಕೂಡ.
ಮದುವೆಯ ಅನಂತರ ಸಿನಿಮಾ ಆಯ್ಕೆಯಲ್ಲಿ ಬಹಳ ಚ್ಯೂಸಿಯಾಗಿದ್ದಾರೆ. ಫ್ಯಾಮಿಲಿ ಮ್ಯಾನ್ ಬಾಲಿವುಡ್‌ನ ಹಿಟ್ ವೆಬ್ ಸಿರೀಸ್. ಇದರಲ್ಲಿ ಮನೋಜ್ ಬಾಜಪೇಯಿ ಅವರ ಹೆಂಡತಿಯಾಗಿ ನಟಿಸಿದ ಪ್ರಿಯಾಮಣಿ ಅವರ ಪಾತ್ರಕ್ಕೆ ಬಹಳ ಪ್ರಶಂಸೆ ದೊರಕಿದೆ. ಮಹಿಳಾ ಪ್ರಧಾನ ಪಾತ್ರದಲ್ಲಿ ಇತ್ತೀಚೆಗೆ ಪ್ರಿಯಾಮಣಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಮದುವೆಯಾದ ನಂತರ ಎಲ್ಲಾ ನಟಿಯರ ಹಾಗೇ ಸಿನಿಮಾ ಸೆಲೆಕ್ಷನ್ ವಿಷಯದಲ್ಲಿ ಚ್ಯೂಸಿಯಾಗುವುದು ಸಾಮಾನ್ಯ.
ಕೆಲವರು ಸಿನಿಮಾ ರಂಗ ತೊರೆದರೆ, ಇನ್ನು ಕೆಲವರು ತಮ್ಮ ನಟನಾ ವೃತ್ತಿಯಲ್ಲಿ ಆಯ್ಕೆಯ ಪಾತ್ರಗಳನ್ನು ಸೆಲೆಕ್ಟ್ ಮಾಡಿ ಮುಂದುವರಿಯುತ್ತಿರುವುದು ಗಮನಾರ್ಹ. ಅದರಲ್ಲೂ ಇದೀಗ ಧೀ ಜೋಡಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿ ಕೊಳ್ಳುತ್ತಿರುವ ಇವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರುವ ವೀಡಿಯೋ ಒಂದು ವೈರಲ್ ಆಗಿದೆ. ಸಕತ್ತಾಗಿ ಡ್ಯಾನ್ಸ್ ಮಾಡುತ್ತಿರುವ ಪ್ರಿಯಾಮಣಿ ಅವರ ನೋಡಿ ನೆಟ್ಟಿಗರು ಭೇಷ್ ಎಂದಿದ್ದಾರೆ.