ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ದೇವಾಲಯ ನಿರ್ಮಾಣ ಮಾಡಿದ ಅಭಿಮಾನಿ; ಅಶ್ವಿನಿ ಗರಂ
Aug 26, 2024, 09:10 IST
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಕನ್ನಡಿಗರ ಕಣ್ಮಣಿ ಪುನೀತ್ ರಾಜ್ ಕುಮಾರ್ ಅವರು ಆದರ್ಶಪ್ರಿಯ ಬದುಕು ಬಾಳಿದವರು. ಅವರ ಕೋಟ್ಯಾನು ಕೋಟಿ ಅಭಿಮಾನಿಗಳ ಮನದಲ್ಲಿ ಅಪ್ಪು ಸದಾ ಜೀವಂತವಾಗಿದ್ದಾರೆ. ಮುಂದಿನ ಅಕ್ಟೋಬರ್ 29ಕ್ಕೆ ಅವರು ನಮ್ಮೆಲ್ಲರನ್ನು ಅಗಲಿ ಮೂರು ವರ್ಷ ತುಂಬಲಿದೆ. ಆದರೆ ಫ್ಯಾನ್ಸ್‌ಗಳಿಗೆ ಅಪ್ಪು ಅವರ ಮೇಲಿನ ಪ್ರೀತಿ ಚೂರು ಕಡಿಮೆ ಆಗಿಲ್ಲ.
ಇದಕ್ಕೆ ಅವರ ಅಭಿಮಾನಿ ಅಪ್ಪು ದೇವಾಲಯ ಕಟ್ಟಿರುವುದೇ ಸಾಕ್ಷಿಯಾಗಿದೆ.ಆರಂಭದಲ್ಲಿ ಅಪ್ಪು ಅವರ ಸಣ್ಣ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿದ್ದ ಅಭಿಮಾನಿ ಪ್ರಕಾಶ್, ಸ್ವಂತ ಜಾಗದಲ್ಲಿ ಕೆಲಸ ಆರಂಭಿಸಿದ್ದ, ಅದು ಕ್ರಮೇಣ ದೇವಸ್ಥಾನದ ಮಟ್ಟದಲ್ಲಿ ದೊಡ್ಡದಾಗಿ ನಿರ್ಮಾಣವಾಗಿದೆ. ಸ್ವಂತ ಖರ್ಚಿನಲ್ಲಿ ದೇಗುಲ ನಿರ್ಮಿಸಿದ್ದಾರೆ. ಇಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 5.6ಅಡಿ ಎತ್ತರ ಕಂಚಿನ ಮೂರ್ತಿಯನ್ನು ಸೆಪ್ಟಂಬರ್ 26ರಂದು ಗುರುವಾರ ಅನಾವರಣಗೊಳಿಸಲು ಪ್ಲಾನ್ ಮಾಡಿಕೊಂಡಿರುವ ಅಭಿಮಾನಿ ಪ್ರಕಾಶ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಎರಡು ಬಾರಿ ಬೇಟಿ ಮಾಡಿದ್ದಾರೆ.
ಅಪ್ಪು ಅವರ ದೇವಾಲಯ ಉದ್ಘಾಟನೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಪ್ರಕಾಶ್ ಆಹ್ವಾನಿಸಿದ್ದಾರೆ. ಈ ನಿಮಿತ್ತ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಭಿಮಾನಿಯ ಆಶಯದಂತೆ ದೇವಾಲಯ ಉದ್ಘಾಟಿಸಲು ಒಪ್ಪಿಕೊಂಡಿದ್ದಾರೆ. ಅದರಂತೆ ಸೆಪ್ಟಂಬರ್ 26ರಂದು ಗುರುವಾರ ಹಾವೇರಿ ಯಲಗಚ್ಚ ಗ್ರಾಮಕ್ಕೆ ಅವರು ಆಗಮಿಸಲಿದ್ದಾರೆ.
<a href=https://youtube.com/embed/Ux4VM8OEbTU?autoplay=1&mute=1><img src=https://img.youtube.com/vi/Ux4VM8OEbTU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಪ್ಪು ಅವರ ಸರಳತೆ, ಡಾನ್ಸ್, ಸಾಮಾಜಿಕ ಸೇವೆ, ಅವರ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವಿಲ್ಲ. ಅಪ್ಪು ಎಂದರೆ ನನಗೆ ಪಂಚಪ್ರಾಣ. ಆರಂಭದಲ್ಲಿ ಸಣ್ಣ ಮೂರ್ತಿ ಪ್ರತಿಷ್ಠಾಪಿಸಲು ಸಜ್ಜಾಗಿದೆ. ಅದು ಬರುಬರುತ್ತಾ ದೇವಸ್ಥಾನ ರೂಪ ಪಡೆದುಕೊಳ್ಳತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಸದ್ಯ ದೇವಸ್ಥಾನ ನಿರ್ಮಾಣ ಕಾಮಗಾರಿ ಮುಗಿದಿದೆ. ಈವರೆಗೆ 5.5 ಲಕ್ಷ ರೂಪಾಯಿ ಖರ್ಚಾಗಿದೆ.
ಉದ್ಘಾಟನೆಗೆ ಸುಮಾರು 02 ಲಕ್ಷ ರೂಪಾಯಿ ಖರ್ಚಾಗಬಹುದು. ಜಾಗ ಹಾಗೂ ನಿರ್ಮಾಣ ವೆಚ್ಚ ಎಲ್ಲ ಸೇರಿ ಒಟ್ಟು ಸುಮಾರು 11 ಲಕ್ಷ ರೂ. ಆಗುತ್ತದೆ ಎಂದು ಅಭಿಮಾನಿ ಪ್ರಕಾಶ್ ಹೇಳಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.