ರಚ್ಚು ನನ್ನ ಮದುವೆ ಆಗ್ತೀಯಾ, ದಿನನಿತ್ಯ ಸುಖದಿಂದ ನೋಡಿಕೊಳ್ಳುತ್ತೇನೆ ಎಂದ ಯುವಕ
Jun 29, 2025, 08:44 IST
ನಟಿ ರಚಿತಾ ರಾಮ್ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಆಕೆಯ ವಿರುದ್ಧ ಎರಡು ಆರೋಪಗಳು ಕೇಳಿಬಂದಿದ್ದವು. ಎರಡಕ್ಕೂ ಆಕೆ ಪ್ರತಿಕ್ರಿಯಿಸಿದ್ದರು. ನಾನು ತಪ್ಪು ಮಾಡಿಲ್ಲ, ಒಂದು ವೇಳೆ ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತೇನೆ. ತಪ್ಪು ಮಾಡದೇ ಇದ್ದರೆ ಕ್ಷಮೆ ಕೇಳುವ ಮಾತೇಯಿಲ್ಲ ಎಂದಿದ್ದರು.
ಲವ್ ಮಿ ಆರ್ ಹೇಟ್ ಮಿ,ಅಯೋಗ್ಯ-2,ಕಲ್ಟ್, ಲ್ಯಾಂಡ್‌ಲಾರ್ಡ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ಕಿರುತೆರೆ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿಯೂ ಗುರ್ತಿಸಿಕೊಂಡಿದ್ದಾರೆ. ಭರ್ಜರಿ ಬ್ಯಾಚುಲರ್ಸ್-2 ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ರಚ್ಚು ಮದುವೆ ಯಾವಾಗ? ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ.
<a href=https://youtube.com/embed/k7OhaScvL8k?autoplay=1&mute=1><img src=https://img.youtube.com/vi/k7OhaScvL8k/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಟಿ ರಚಿತಾ ರಾಮ್ ಮದುವೆ ಬಗ್ಗೆ ಮೌನ ವಹಿಸಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಹಾಗಾಗಿ ಸದ್ಯಕ್ಕೆ ಮದುವೆ ಬಗ್ಗೆ ಚಿಂತಿಸಿದಂತೆ ಕಾಣುತ್ತಿಲ್ಲ. ಇದೆಲ್ಲದರ ನಡುವೆ ರಚಿತಾ ಮದುವೆ ಪ್ರಪೋಸ್ ಮಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಭರ್ಜರಿ ಬ್ಯಾಚುಲರ್ಸ್ ಶೋ ವೇದಿಕೆಯಲ್ಲಿ ಸ್ಪರ್ಧಿ ಭುವನೇಶ್ ಹಾಸನ್ ಎದುರು ನನ್ನ ಮದುವೆ ಆಗ್ತೀಯಾ? ಎಂದು ರಚ್ಚು ಕೇಳಿದ್ದಾರೆ.
ರಚ್ಚು ದಿಢೀರನೆ ಹೀಗೆ ಕೇಳುತ್ತಿದ್ದಂತೆ ಭುವನೇಶ್ ಫಿದಾ ಆಗಿ ಶಾಕ್ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗುತ್ತಿದೆ. ಶೋನಲ್ಲಿ ಬ್ಯಾಚುಲರ್ಸ್ ಹಾಗೂ ಮೆಂಟರ್ಸ್ ಭಿನ್ನ ವಿಭಿನ್ನ ಕಾನ್ಸೆಪ್ಟ್ ಹಾಗೂ ಟಾಸ್ಕ್‌ಗಳ ಜೊತೆ ನೋಡುಗರನ್ನು ರಂಜಿಸುತ್ತಿದ್ದಾರೆ. ಈ ವಾರ ಪ್ರಪೋಸಲ್ ರೌಂಡ್ ಇದೆ. ಅದರ ಚಿತ್ರೀಕರಣ ಸಹ ನಡೆದಿದ್ದು ಪ್ರೋಮೊಗಳನ್ನು ಬಿಟ್ಟು ಕುತೂಹಲ ಕೆರಳಿಸುತ್ತಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.