ಮಗನನ್ನು ಬಿಟ್ಟು ದಿಡೀರ್ ಮನೆ ಖಾಲಿ ಮಾಡಿದ ರಾಘು, ಕಾರಣ ಕೇಳಿ ದಂಗಾದ ಕನ್ನಡಿಗರು
ಯಾರ ಬದುಕು ಎಲ್ಲಿ ತಿರುವು ಪಡೆಯುತ್ತದೆ ಗೊತ್ತಿಲ್ಲ. ಹಾಗೆಯೇ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಬದುಕು ಕೂಡಾ ಹಾಗೆಯೇ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಅಗಲಿಕೆಯ ನೋವಲ್ಲಿದ್ದಾರೆ. ಉಸಿರಲ್ಲಿ ಉಸಿರಾಗಿ ಬೆರತು ಹೋಗಿದ್ದ, ಜೀವಜ್ಜೀವವಾಗಿದ್ದ ಹೆಂಡ್ತಿನಾ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.
ಸ್ಪಂದನಾ ಮರೆಯಾಗಿ ಒಂದು ವರ್ಷವೇ ಕಳೆದಿದೆ. ಆದರೆ, ವಿಜಯ್ ಮನಸ್ಸಿಗೆ ಆಗಿರುವ ಆಘಾತ, ದುಃಖ, ನೋವು, ಸಂಕಟ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ಈ ಕ್ಷಣಕ್ಕೂ ಸ್ಪಂದನಾ ಉಸಿರು ಚೆಲ್ಲಿರುವ ನೋವನ್ನು ವಿಜಯ್ ಅವ್ರ ಕೈಲಿ ಭರಿಸೋದಕ್ಕೆ ಆಗ್ತಿಲ್ಲ. ಸಾರ್ವಜನಿಕ ವಲಯದಲ್ಲಿರುವುದರಿಂದ, ಸ್ಟಾರ್ ಆಗಿರುವುದರಿಂದ ಜನರೊಟ್ಟಿಗೆ ಬೆರೆಯುತ್ತಿದ್ದಾರೆ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಾಗ ಸ್ಮೈಲ್ ಮಾಡುತ್ತಿದ್ದಾರೆ ಬಿಟ್ಟರೆ ಮೊದಲಿನ ಕಳೆ ಚಿನ್ನಾರಿ ಮೊಗದಲ್ಲಿ ಕಾಣುತ್ತಿಲ್ಲ.
ಸ್ಪಂದನಾ ಬದುಕಿದ್ದಾಗ ವಿಜಯ್ ಮೊಗವನ್ನು ಅಲಂಕರಿಸಿದ್ದ ಆ ಹಸನ್ಮುಖ ನಗು, ಮಂದಹಾಸ ಈಗ ವಿಜಯ್ ಮುಖದಲ್ಲಿಲ್ಲ. ಆದರೆ, ಮಗನಿಗೋಸ್ಕರ ನಗು ಬೀರಬೇಕಿದೆ. ಸ್ಪಂದನಾ ಕೊಟ್ಟು ಹೋದ ಕುಡಿಯನ್ನು ದೀಪದಂತೆ ಕಾಯಬೇಕಿದೆ. ಹೀಗಾಗಿಯೇ ನಟ ವಿಜಯ್ ಮೈಕೊಡವಿಕೊಂಡು ಎದ್ದುನಿಂತಿದ್ದಾರೆ. ಒಳಗೊಳಗೆ ನೋವು ಅನುಭವಿಸುತ್ತಿರುವುದಾದರೂ ಯಾರ ಮುಂದೆಯೂ ತೋರಿಸಿಕೊಳ್ಳದೇ ಎಂದಿನಂತೆ ಕಾಯಕ ಮುಂದುವರೆಸಿದ್ದಾರೆ. ಈ ನಡುವೆ ಮನೆ ಬದಲಿಸಿದ್ದಾರೆ. ಮಗನ ಜೊತೆ ಹೊಸ ಮನೆ ಪ್ರವೇಶ ಮಾಡಿದ್ದಾರೆ.
ಹೌದು, ನಟ ವಿಜಯ್ ರಾಘವೇಂದ್ರ ಹಳೆಯ ಮನೆ ಖಾಲಿ ಮಾಡಿದ್ದಾರೆ. ಪತ್ನಿ ಸ್ಪಂದನಾ ಜೊತೆ ವಾಸ ಮಾಡಿದ್ದ ಜಕ್ಕೂರು ನಿವಾಸವನ್ನು ತೊರೆದು ಈಗ ಹೊಸ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇದಕ್ಕೆ ಕಾರಣ ಕಾಡುತ್ತಿರುವ ಪತ್ನಿ ಸ್ಪಂದನಾರ ನೆನಪುಗಳು. ಹೌದು, ಜಕ್ಕೂರು ಮನೆಯಲ್ಲಿ ವಿಜಯ್ ಹಾಗೂ ಸ್ಪಂದನಾ ಸುಮಾರು ಎಂಟು ವರ್ಷ ಸಂಸಾರ ಮಾಡಿದ್ದಾರೆ. ಹೀಗಾಗಿ ಸಹಸ್ರಾರು ನೆನಪುಗಳು ಈ ಮನೆಯಲ್ಲಿಡಗಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಅಂದದ ಅರಮನೆಯಲ್ಲಿ ವಿಜಯ್ ಎಲ್ಲಿ ಕುಂತ್ರೂ, ನಿಂತ್ರೂನು ಸ್ಪಂದನಾ ನೆನಪಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.