ಬಿಗ್ ಬಾಸ್ ಮನೆಯಲ್ಲಿ ರಜತ್ ಗೌತಮಿ ಜಗಳ, ಕಿಚ್ಚನ ಮಾತಿಗೆ ಬೆಲೆನೇ ಕೊಡಲಿಲ್ಲ

 
ಬಿಗ್ ಬಾಸ್ ಮನೆಯಲ್ಲಿ ಇವತ್ತಿನ ಆಟದ ಸಮಯ ಗೌತಮಿ ಹಾಗೂ ರಜತ್ ರೊಚ್ಚಿಗೆದ್ದು ಜಗಳ‌ ಮಾಡಿಕೊಂಡು ಇಲ್ಲಸಲ್ಲದ ಪದಬಳಕೆ ಮಾಡಿದ್ದಾರೆ. ಹೌದು, ಮೊನ್ನೆಯಷ್ಟೆ ಕಿಚ್ಚ ಸುದೀಪ್ ಅವರು ರಜತ್ ಅವರಿಗೆ ತಮ್ಮ ಮಾತಿನ ಬಗ್ಗೆ ಸ್ಪಷ್ಟತೆ ಇರಲಿ ಅಂತ ಖಡಕ್ ಸೂಚನೆ ಮಾಡಿದ್ದರು‌. ಆದರೆ ಇದಕ್ಕೆ ಓಕೆ‌ ಎಂದಿದ್ದ ಈತ ಇದೀಗ ಮತ್ತೆ ರೊಚ್ಚಿಗೆದ್ದು ಗೌತಮಿ ಜೊತೆ ವಾದವಿವಾದ ಮಾಡಿಕೊಂಡಿದ್ದಾರೆ.
ಈತನ ಮಾತಿಗೆ ಸರಿಯಾಗಿ ಗೌತಮಿ ಕೂಡ ಟಕ್ಕರ್ ಕೊಟ್ಟಿದ್ದಾರೆ. ಈ ಇಬ್ಬರ ಜಗಳಕ್ಕೆ ಮೂಲ ಕಾರಣ ಇವತ್ತಿನ ಬಿಗ್ ಬಾಸ್ ಟಾಸ್ಕ್. ಹೌದು, ಇವತ್ತಿನ ದಿನ ಬಿಗ್ ಬಾಸ್ ಮನೆಯಲ್ಲಿ ಮನೆ Cleaning ಮಾಡಲು‌ ಬಿಗ್ ಬಾಸ್ ಆದೇಶ ಬಂದಿತ್ತು. ಇದರ ಜವಾಬ್ದಾರಿ ಹೊಂದಿದ್ದ ಗೌತಮಿ ಅವರು ಮನೆ ಸ್ಪರ್ಧಿಗಳಿಗೆ ಜವಾಬ್ದಾರಿ ವಹಿಸಿಕೊಂಡಿದ್ದರು. 
ಆದರೆ, ಈ ರಜತ್ ಅವರು ಯಾವುದೇ ಕೆಲಸ ಮಾಡದೇ ಮನೆಯಲ್ಲಿರುವ ಹಣ್ಣುಗಳು ತಿನ್ನುತ್ತಾ ಮಲಗಿದ್ದರು. ಇದನ್ನು ಗಮನಿಸಿದ ಗೌತಮಿ ಅವರು ರಜತ್ ಅವರಿಗೆ ನೇರ ಪ್ರಶ್ನೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ರಜತ್ ಅವರು ಬಿಗ್ ಬಾಸ್ ಮನೆ ನಿನ್ನ ಮನೆಯಲ್ಲ ಅಂತ ರಜತ್ ಅವರು ಗೌತಮಿಗೆ ಸಿಟ್ಟಿನಿಂದ ಮಾತನಾಡಿದ್ದಾರೆ. <a href=https://youtube.com/embed/ArU91QrZrZU?autoplay=1&mute=1><img src=https://img.youtube.com/vi/ArU91QrZrZU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಗೌತಮಿ ಅವರು ಈ ಮನೆ ನನ್ನದಲ್ಲ, ಆದರೆ ಇದು ನಮ್ಮೆಲ್ಲರ ಮನೆ, ಇಲ್ಲಿ ಬಿಗ್ ಬಾಸ್ ಕೊಟ್ಟ ಟಾಸ್ಕ್ ಮಾಡುವುದಷ್ಟೆ ನಮ್ಮ ಕೆಲಸ. ಯಾವುದೇ ಕೆಲಸ ಮಾಡದೆ ತಿನ್ನುವುದು ಮಲಗುವುದು ನಿಮ್ಮ ಕೆಲಸ ಅಲ್ಲ ಅಂತ ವಾರ್ನ್ ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರ ನಡುವೆ ಮಹಾಯುದ್ಧವೇ ನಡೆಯಿತು.