ಮಾಧ್ಯಮದ ಮುಂದೆ ರಕ್ಷಿತ್ ಪ್ರೇಮ್ ಮೌನ; ದಾಸನ ಅವಸ್ಥೆ ಯಾರಿಗೂ ಬೇಡ

 

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್ ತೂಗುದೀಪ ಅವರು ಸದ್ಯ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಮಧ್ಯೆ ನಟಿ ರಕ್ಷಿತಾ ಪ್ರೇಮ್ ಅವರು ಸೆಂಟ್ರಲ್ ಜೈಲಿಗೆ ಭೇಟಿ ನೀಡಿ, ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದಾರೆ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ ರಕ್ಷಿತಾ ಪ್ರೇಮ್ ದಂಪತಿ.

ದರ್ಶನ್ ಭೇಟಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ರಕ್ಷಿತಾ, ಕಳೆದ 15-20 ದಿನಗಳಿಂದ ಏನೇನು ಆಗಿದೆಯೋ, ಅದು ನಿಜಕ್ಕೂ ದುರದೃಷ್ಟಕರ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನಿನ ಮೇಲೆ ಭರವಸೆ ಇದೆ ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದ ರಕ್ಷಿತಾ ಪ್ರೇಮ್ ದಂಪತಿ, ಕೆಲಹೊತ್ತು ದರ್ಶನ್ ಜೊತೆ ಮಾತುಕತೆ ನಡೆಸಿದ್ದಾರೆ.  <a href=https://youtube.com/embed/J2kYfd0FVoA?autoplay=1&mute=1><img src=https://img.youtube.com/vi/J2kYfd0FVoA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಆದರೆ ಈ ಬಗ್ಗೆ ಮಾಧ್ಯಮಗಳ ಎದುರು ಮಾಹಿತಿ ಹಂಚಿಕೊಳ್ಳಲು ನಟಿ/ನಿರ್ಮಾಪಕಿ ರಕ್ಷಿತಾ ನಿರಾಕರಿಸಿದರು. ನಟ ದರ್ಶನ್ ಮತ್ತು ರಕ್ಷಿತಾ ಅವರದ್ದು ಹಲವು ವರ್ಷಗಳ ಸ್ನೇಹ. ಇಬ್ಬರು ಜೊತೆಗೆ ಕಲಾಸಿಪಾಳ್ಯ, ಅಯ್ಯ, ಮಂಡ್ಯ, ಸುಂಟರಗಾಳಿ ರೀತಿಯ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ದರ್ಶನ್ ಜೈಲಿನಲ್ಲಿ ಇರುವುದನ್ನು ಕಂಡು ನಟಿ ರಕ್ಷಿತಾ ಭಾವುಕರಾಗಿದ್ದರು.

ರಕ್ಷಿತಾ ಜೊತೆಗೆ ಅವರ ಪತಿ, ನಿರ್ದೇಶಕ ಜೋಗಿ ಪ್ರೇಮ್ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ದರ್ಶನ್ ಅವರು ನನಗೂ ಸ್ನೇಹಿತರು, ರಕ್ಷಿತಾಗೂ ಸ್ನೇಹಿತರು, ಎಲ್ಲರಿಗೂ ಸ್ನೇಹಿತರು. ಆದರೆ ಈ ಪ್ರಕರಣ ಕೋರ್ಟ್‌ನಲ್ಲಿದೆ. ಆದ್ದರಿಂದ ನಾವು ಯಾರೂ ಕೂಡ ಏನನ್ನೂ ಮಾತನಾಡುವುದಕ್ಕೆ ಹೋಗಬಾರದು. 

ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಕಾನೂನು ಪ್ರಕಾರ ಏನೆಲ್ಲಾ ಆಗಬೇಕೋ, ಅದು ಆಗ್ತಾ ಇದೆ. ಕಾನೂನಿನ ಎದುರು ನಾವು ಯಾರೂ ದೊಡ್ಡವರಲ್ಲ ಎಂದು ಹೇಳಿಕೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.