ದ್ವಾರಕೀಶ್ ಸಾ.ವಿನ ವಿಚಾರ ತಿಳಿದು ಎದ್ದು ಬಿದ್ದು ಕೂಗಾಡಿದ ರಮೇಶ್;

 

ನಟ ದ್ವಾರಕೀಶ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ನಟ, ನಿರ್ಮಾಪಕ ಹಾಗೂ ನಿರ್ದೇಶನರಾಗಿ ದ್ವಾರಕೀಶ್ ಕನ್ನಡ ಚಿತ್ರೋದ್ಯಮಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ವಿದೇಶಗಳಲ್ಲಿ ಮೊದಲ ಸಲ ಕನ್ನಡ ಸಿನಿಮಾಗಳ ಶೂಟಿಂಗ್‌ ಆರಂಭಿಸಿದ್ದೂ ಇದೇ ಕರ್ನಾಟಕದ ಕುಳ್ಳ. ಈಗ ಇದೇ ಹಿರಿಯ ನಟನ ಬಗ್ಗೆ ನಟ ರಮೇಶ್‌ ಅರವಿಂದ ಮಾತನಾಡಿದ್ದಾರೆ.

ಕಾಲೇಜು ದಿನಗಳಲ್ಲಿ ದ್ವಾರಕೀಶ್ ನಿನಿಮಾಗಳನ್ನು ನೋಡಿ ಇಂಪ್ರೆಸ್ ಆಗಿದ್ದ ರಮೇಶ್ ಅರವಿಂದ್ ಅಂದಿನ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇವತ್ತು ದ್ವಾರಕೀಶ್​ ಅವರು ನಮ್ಮ ಜೊತೆ ಇಲ್ಲ. ಆದರೆ ಎಂದೂ ಮರೆಯದ ಸಿನಿಮಾಗಳನ್ನು ನಮಗೆ ಕೊಟ್ಟು ಹೋಗಿದ್ದಾರೆ. ಅದಕ್ಕಾಗಿ ದ್ವಾರಕೀಶ್​ ಅವರಿಗೆ ಧನ್ಯವಾದಗಳು ಎಂದು ನಟ, ನಿರ್ದೇಶಕ ರಮೇಶ್​ ಅರವಿಂದ್​ ಹೇಳಿದ್ದಾರೆ.  <a href=https://youtube.com/embed/wXk4-RQi7JQ?autoplay=1&mute=1><img src=https://img.youtube.com/vi/wXk4-RQi7JQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಹಿರಿಯ ಕಲಾವಿದನ ಅಗಲಿಕೆಗೆ ಅವರು ಸಂತಾಪ ಸೂಚಿಸಿದ್ದಾರೆ. ಆಪ್ತಮಿತ್ರ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ದಿನಗಳನ್ನು ರಮೇಶ್​ ಅರವಿಂದ್​ ಅವರು ನೆನಪು ಮಾಡಿಕೊಂಡಿದ್ದಾರೆ.ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ‘ಕಳ್ಳ ಕುಳ್ಳ’, ‘ಸಿಂಗಾಪುರದಲ್ಲಿ ರಾಜಾ ಕುಳ್ಳ’, ‘ಕಿಟ್ಟು ಪುಟ್ಟು’ ಮುಂತಾದ ಸಿನಿಮಾಗಳನ್ನು ನೋಡಿ ನಮಗೆ ಬಹಳ ಇಷ್ಟ ಆಗಿತ್ತು. ದ್ವಾರಕೀಶ್​ ಅವರ ಮನೆ ನಮ್ಮ ಮನೆ ಬಳಿಯೇ ಇತ್ತು. 

ಎನ್​.ಆರ್​. ಕಾಲೋನಿಯಲ್ಲಿ ಇರುವ ಅವರ ಮನೆಯ ಸುತ್ತ ನಾವು ಸೈಕಲ್​ನಲ್ಲಿ ರೌಂಡ್​ ಹೊಡೆಯುತ್ತಿದ್ದೆವು. ಇದೇ ದ್ವಾರಕೀಶ್​ ಅವರ ಮನೆ ಎಂದು ಹೇಳಿಕೊಂಡು ಹೋಗುತ್ತಿದ್ದೆವು. ಕೆಲವು ವರ್ಷಗಳ ನಂತರ, ನಾವು ಕಾಲೇಜಿಗೆ ಬಂದಾಗ ಆ ಮನೆಯನ್ನು ದ್ವಾರಕೀಶ್​ ಸರ್​ ಮಾರಿಬಿಟ್ಟಿದ್ದರು ಅಂತ ಕೇಳಿದೆವು. ನಮಗೆ ಆಗ ಅಯ್ಯೋ ಎನಿಸಿತು ಎಂದು ರಮೇಶ್​ ಅರವಿಂದ್​ ಅವರ ಸಾವಿಗೆ ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.