ಸಿನಿಮಾಗಾಗಿ ತನ್ನ ಅದನ್ನೇ ಬದಲಾಯಿಸಿದ್ದ ರಮ್ಯಾ, ಈ ನಿರ್ಧಾರಕ್ಕೆ ಪರ್ವತಮ್ಮ ರಾಜ್ ಕುಮಾರ್ ಫುಲ್ ಫಿದಾ ಆಗಿದ್ದರು
Jun 30, 2025, 17:41 IST
ಕನ್ನಡ ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗದ ಅನೇಕ ನಟ-ನಟಿಯರು ಸಿನಿಮಾಗೆ ಬಂದ ನಂತರ ತಮ್ಮ ಮೂಲ ಹೆಸರುಗಳನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಜೊತೆಗೆ, ಅನೇಕ ನಟ-ನಟಿಯರು ಒಳ್ಳೆಯ ಬಿರುದುಗಳನ್ನು ಕೂಡ ಪಡೆದಿಕೊಂಡಿದ್ದಾರೆ. ಅನೇಕ ನಟಿಯರಿಗೆ ಪಾರ್ವತಮ್ಮ ರಾಜ್ ಕುಮಾರ್ ಅವರು ಸಿನಿಮಾಗೆ ಅಗತ್ಯವಾಗಿರುವ ಹೆಸರುಗಳನ್ನು ಇಟ್ಟಿದ್ದಾರೆ. ಕನ್ನಡ ಸಿನಿಮಾ ನಟಿ ರಮ್ಯ ಅವರ ಮೂಲ ಹೆಸರು ದಿವ್ಯ ಸ್ಪಂದನ ಅಗಿದೆ. ಅಭಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕ ಕಾಲಿಟ್ಟ ದಿವ್ಯ ಸ್ಪಂದನಾಗೆ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ರಮ್ಯ ಎಂದು ಹೆಸರು ಬದಲಾಯಿಸಿದರು. ಆದರೆ, ಸರ್ಕಾರಿ ದಾಖಲೆಗಳಲ್ಲಿ ಈಗಲೂ ದಿವ್ಯ ಸ್ಪಂದನ ಎಂಬ ಹೆಸರಿದೆ
ನಟಿ ರಮ್ಯಾ ಸುಮಾರು 40 ಚಿತ್ರಗಳಲ್ಲಿ ನಟಿಸಿದ್ದಾರೆ. ದಿವ್ಯಾ ಸ್ಪಂದನಾ ಎಂಬುದು ರಮ್ಯಾ ಮೂಲ ಹೆಸರು. ಸ್ಯಾಂಡಲ್ವುಡ್ ಗೆ 2003 ರಲ್ಲಿ ಅಭಿ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸುವ ಮೂಲಕ ರಮ್ಯಾ ಆಗಿ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆಗ ಪುನಿತ್ ರಾಜ್ ಕುಮಾರ್ ತಾಯಿ ಅಂದರೆ ರಾಜ್ ಕುಮಾರ್ ಪತ್ನಿ ನಿರ್ಮಾಪಕಿ ಪಾರ್ವತಮ್ಮ ಅವರು ದಿವ್ಯ ಸ್ಪಂದನ ಹೆಸರು ಬೇಡ ಎಂದು ರಮ್ಯಾ ಎನ್ನುವ ಹೆಸರಿನೊಂದಿಗೆ ಲಾಂಚ್ ಮಾಡಿದ್ದರು.
ನಟಿ ರಮ್ಯಾ ಕನ್ನಡ ಮಾತ್ರವಲ್ಲದೇ ತಮಿಳು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ. ರಾಜಕೀಯದಲ್ಲಿಯೂ ಆಸಕ್ತಿ ಹೊಂದಿದ್ದ ರಮ್ಯಾ ಚುನಾವಣೆಗೆ ಸ್ಪರ್ಧಿಸಿದ್ದರು. ಮಂಡ್ಯ ಕ್ಷೇತ್ರದಿಂದ ಗೆದ್ದು ಸಂಸದೆ ಆಗಿದ್ದರು.ಕನ್ನಡದ ಟಾಪ್ ಹೀರೋಯಿನ್ ಆಗಿದ್ದ ರಮ್ಯಾ ಕೆಲ ದಿನಗಳ ಕಾಲ ಸಿನಿರಂಗ ಮಾತ್ರವಲ್ಲ ಭಾರತದಿಂದಲೇ ದೂರ ತೆರಳಿದ್ದರು. ಬಳಿಕ ಮತ್ತೆ ಕರ್ನಾಟಕಕ್ಕೆ ಮರಳಿದರು.
ತಮ್ಮದೇ ಪ್ರೊಡಕ್ಷನ್ ಹೌಸ್ ತೆಗೆದರು. ಸಿನಿಮಾ ನಿರ್ಮಾಪಕಿ ಆಗಿಯೂ ನಟಿ ರಮ್ಯಾ ಕೆಲಸ ಮಾಡುತ್ತಿದ್ದಾರೆ.ನಟನೆ ಜೊತೆ ರಾಜಕೀಯ ಹಾಗೂ ಈಗ ನಿರ್ಮಾಪಕಿಯೂ ಆಗಿರುವ ನಟಿ ರಮ್ಯಾ ಆಸ್ತಿ 5 ರಿಂದ 6 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ರಮ್ಯಾ ಅವರು ಕೇವಲ ಸಿನಿಮಾ ರಂಗದಲ್ಲಿ ಅಷ್ಟೇ ಅಲ್ಲ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. 2013ರಲ್ಲಿ ರಮ್ಯಾ ಮಂಡ್ಯದಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಘಟಕದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.