50ನೇ ವಯಸ್ಸಿನಲ್ಲಿ 33ರ ಮಹಿಳೆಯನ್ನು ಮದುವೆ ಆದ ರಸಿಕ ತಾತಾ
Nov 3, 2024, 15:01 IST
ಪ್ರೀತಿ ಮಾಯೆ,ಪ್ರೀತಿಗೆ ವಯಸ್ಸಿಲ್ಲ ಅನ್ನೋದು ಲೋಕಾರೂಢಿ ಮಾತು. ಯಾವ ವಯಸ್ಸಿನಲ್ಲಾದರೂ ಕೂಡ ಈ ಪ್ರೀತಿ ಮೊಳಕೆಯೊಡೆಯಬಹುದು. ಮುಂದುವರೆಯಬಹುದು. ಮನದ ಮೂಲೆಯಲ್ಲೆಲ್ಲೋ ಗಟ್ಟಿಯಾಗಿ ಬೇರೂರಬಹುದು. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಮಲಯಾಳಂನ ಜನಪ್ರಿಯ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ ತಮ್ಮ 49ನೇ ವಯಸ್ಸಿನಲ್ಲಿ ದಿವ್ಯಾ ಶ್ರೀಧರ್ ಅವರನ್ನು ಮದುವೆಯಾಗಿದ್ದಾರೆ.
ಗುರುವಾಯೂರು ದೇವಸ್ಥಾನದಲ್ಲಿ ಸರಳವಾಗಿ ನಡೆದ ಇವರಿಬ್ಬರ ಮದುವೆ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಭಾಗಿಯಾಗಿ ಶುಭ ಕೋರಿದ್ದಾರೆ. ಇನ್ನೂ ಕ್ರಿಸ್ ಕೇವಲ ಮಲಯಾಳಂ ಕಿರುತೆರೆಯ ಕಲಾವಿದ ಮಾತ್ರ ಅಲ್ಲ ಹದಿಹರೆಯದ ಯುವಕ ಯುವತಿಯರಲ್ಲಿ ಸ್ಫೂರ್ತಿಯನ್ನು ತುಂಬುವ ಮಾತುಗಾರ ಕೂಡ ಹೌದು. ಕ್ರಿಸ್ ಅವರನ್ನು ಮದುವೆಯಾದ ದಿವ್ಯಾ ಅವರಿಗೆ ಮಲಯಾಳಂ ಕಿರುತೆರೆಯಲ್ಲಿ ವಿಶೇಷ ಸ್ಥಾನ ಮಾನ ಇದೆ. ಅಭಿಮಾನಿಗಳ ಬಳಗ ಇದೆ. ಅದರಲ್ಲಿಯೂ ಖಳನಾಯಕಿಯ ಪಾತ್ರಕ್ಕೆ ದಿವ್ಯಾ ಕೇರಳದಲ್ಲಿ ಹೆಸರುವಾಸಿಯಾಗಿದ್ದಾರೆ.
ಇಂಥಾ ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಧಾರಾವಾಹಿಯ ಚಿತ್ರೀಕರಣದಲ್ಲಿ ಮೊದಲ ಬಾರಿ ಪರಿಚಯವಾದರು. ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಹತ್ತಿರವಾದರು. ಆಪ್ತ ಸ್ನೇಹಿತರಾದರು. ಆ ನಂತರ ಸ್ನೇಹ ಪ್ರೇಮದ ಸ್ವರೂಪ ಪಡೆಯಿತು. ಇನ್ನೂ ಇದೇ ಸಂದರ್ಭದಲ್ಲಿ ದಿವ್ಯಾ ಅವರ ಬಗ್ಗೆ ಹೆಚ್ಚೆಚ್ಚು ವಿಷಯಗಳನ್ನು ತಿಳಿದುಕೊಳ್ಳುವಂತೆ ಕ್ರಿಸ್ ಅವರಿಗೆ ಅವರ ಸಂಬಂಧಿಯೊಬ್ಬರು ಸಲಹೆಯನ್ನು ನೀಡಿದರು.
ಸದ್ಯ ಕ್ರಿಸ್ ಮತ್ತು ದಿವ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಶುಭ ಕೋರುತ್ತಿದ್ದಾರೆ. ಇನ್ನೂ ಕೆಲವರು ಎಂದಿನಂತೆ ತಮ್ಮ ಮನಸ್ಥಿತಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. 67 ವಯಸ್ಸಿನ ಮುದುಕನ ಜೊತೆ ಮದುವೆಯಾಗುವ ಅವಶ್ಯಕತೆಯಾದರೂ ಏನಿತ್ತು ಎಂದು ಕಿಡಿ ಕಾರುತ್ತಿದ್ದಾರೆ.
ದಿವ್ಯಾ ಶ್ರೀಧರ್ ಅವರನ್ನು ವ್ಯೆಯಕ್ತಿಕವಾಗಿ ನಿಂದನೆ ಮಾಡಿ ತೀರಾ ಕೀಳಾಗಿ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಕ್ರಿಸ್ ವೇಣುಗೋಪಾಲ್ ಅವರನ್ನು ದಿವ್ಯಾ ಶ್ರೀಧರ್ ಮದುವೆಯಾಗಿದ್ದು ಕೇವಲ ಹಣದ ಆಸೆಯಿಂದ ಮಾತ್ರ ಎನ್ನುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.