ಇಡೀ ಬ್ರಹ್ಮಾಂಡದ ಜ್ಞಾನ ಹೊಂದಿರುವ ಸದ್ಗುರುವಿಗೆ ತಲೆ ಒಳಗಡೆ ರಕ್ತಸ್ರಾವ ಆಗಿದ್ದು ಯಾಕೆ ಗೊತ್ತಾಗಿಲ್ಲ

 

ಸದ್ಗುರು ಎಂದೇ ಪ್ರಸಿದ್ಧರಾಗಿರುವ ಜಗ್ಗಿ ವಾಸುದೇವ್ ಅವರು ಇಶಾ ಫೌಂಡೇಶನ್ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಅವರಿಗೆ ವಿಶ್ವದ ಮೂಲೆ ಮೂಲೆಯಲ್ಲಿ ಅಭಿಮಾನಿಗಳಿದ್ದಾರೆ. ಅಷ್ಟೆ ಅಲ್ಲ ಭಾರದತ ಶ್ರೇಷ್ಠ ಸಿನಿಮಾ ತಾರೆಯರು, ರಾಜಕೀಯ ನಾಯಕರು ಅವರನ್ನು ಅನುಸರಿಸುತ್ತಾರೆ, ಅವರ ಫಾಲೋ ಮಾಡುತ್ತಾರೆ. ಆದ್ರೆ ಈಗ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೆಲುಗು ಕುಟುಂಬದಲ್ಲಿ ಜನಿಸಿದ ಜಗದೀಶ್ ವಾಸುದೇವ್ ಅವರು ಬಿ.ವಿ ವಾಸುದೇವ್ ಮತ್ತು ಸುಶೀಲಾ ವಾಸುದೇವ್ ಅವರ ಐದು ಮಕ್ಕಳಲ್ಲಿ ಕಿರಿಯರಾಗಿದ್ದರು. ಸದ್ಗುರುಗಳ ತಂದೆ ಮೈಸೂರು ರೈಲ್ವೆ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರಜ್ಞರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಜಗ್ಗಿ ವಾಸುದೇವ್ ಅವರು ಇಂಗ್ಲೀಷ್ ಭಾಷೆಯಲ್ಲಿ ಪದವಿ ಪಡೆದಿದ್ದಾರೆ. ಅವರು 1984ರಲ್ಲಿ ವಿಜಿಕುಮಾರಿ ಅವರನ್ನು ವಿವಾಹವಾಗಿದ್ದರು. ಜೊತೆಗೆ ಇವರಿಗೆ ಒಬ್ಬಳು ಮಗಳಿದ್ದಾಳೆ. ಅವರ ಪತ್ನಿ ಜನವರಿ 1997ರಲ್ಲಿ ನಿಧನರಾದರು ಮತ್ತು ಅವರ ಮಗಳು ರಾಧೆ 2014 ರಲ್ಲಿ ಭಾರತೀಯ ಶಾಸ್ತ್ರೀಯ ಗಾಯಕ ಸಂದೀಪ್ ನಾರಾಯಣ್ ಅವರನ್ನು ವಿವಾಹವಾದರು.

 ಮೈಸೂರಲ್ಲಿ ಕೋಳಿ ಫಾರಂ ತೆರೆದಿದ್ದ ಸದ್ಗುರು ಆರಂಭದಲ್ಲಿ ಅವರು ಹಲವು ರೀತಿ ಕಷ್ಟಗಳ ಕಂಡು ಮೈಸೂರಿನಲ್ಲಿ ಕೋಳಿ ಫಾರಂ ತೆರೆದಿದ್ದರು. ಆದರೆ ಇದನ್ನು ನೋಡಿಕೊಳ್ಳಲು ಅವರಲ್ಲಿ ಸಮಯದ ಕೊರತೆ ಕಾಡುತ್ತಿತ್ತು. ಆಧ್ಯಾತ್ಮದ ಕಡೆ ಅವರ ಒಲವು ಹೆಚ್ಚುತ್ತಲೇ ಇತ್ತು. ಹೀಗಾಗಿ ಕುಟುಂಬಸ್ಥರು ಈ ಕೋಳಿ ಫಾರಂ ಮುಚ್ಚಲು ಮುಂದಾದರು. ಇದಾದ ಬಳಿಕ ಅವರು ಯೋಗ ಕಲಿಸಲು ಮುಂದಾದರು. ಹಲವು ವರ್ಷಗಳ ಕಾಲ ಯೋಗ ತರಬೇತಿ ನೀಡಿದರು.  <a href=https://youtube.com/embed/3M0HgA_BVHQ?autoplay=1&mute=1><img src=https://img.youtube.com/vi/3M0HgA_BVHQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

1982 ರಂದು ಜಗ್ಗಿ ವಾಸುದೇವ್ ಚಾಮುಂಡಿ ಬೆಟ್ಟದ ಬಂಡೆಯ ಮೇಲೆ ಧ್ಯಾನದಲ್ಲಿ ಕುಳಿತಿದ್ದಾಗ, ಅವರು ಆಧ್ಯಾತ್ಮಿಕ ಜಾಗೃತಿಯನ್ನು ಹೊಂದಿದ್ದರು ಅದು ಅವರ ಜೀವನದ ಹಾದಿಯನ್ನು ಶಾಶ್ವತವಾಗಿ ಬದಲಾಯಿಸಿತು. 1983ರಲ್ಲಿ ಅವರು ಮೈಸೂರಿನಲ್ಲಿ ತಮ್ಮ ಮೊದಲ ಯೋಗ ತರಬೇತಿ ಶಾಲೆ ತೆರೆದರು. ಆದರೆ ಆಧ್ಯಾತ್ಮದ ಕಡೆಗಿನ ಒಲವು ಹಚ್ಚಿಸಿಕೊಂಡ ಅವರು ಆಶ್ರಮ ಕಟ್ಟಲು ಮುಂದಾದರು. ಇದಾದ ಬಳಿಕ ಅವರು ಇಶಾ ಫೌಂಡೇಶನ್ ತೆರೆದರು. ನಂತರ ಲಕ್ಷ ಲಕ್ಷ ಭಕ್ತರು, ಅನುಯಾಯಿಗಳು ಅವರನ್ನು ಹಿಂಬಾಲಿಸಿದರು. ಈಗ ಈಶಾ ಫೌಂಡೇಶನ್ ಬೃಹತ್ ಆಗಿ ಬೆಳೆದಿದ್ದಿ, ಜಗ್ಗಿ ವಾಸುದೇವ್ ಅವರು ಸದ್ಗುರು ಆಗಿ ಬೆಳೆದಿದ್ದಾರೆ. 

ಸದ್ಯ ಅವರ ಅನಾರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದ್ದರೆ. ಸದ್ಗುರು ಜಗ್ಗಿ ವಾಸುದೇವ್ ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ನೋವಿನ ತೀವ್ರತೆಯ ಹೊರತಾಗಿಯೂ, ಅವರು ತಮ್ಮ ವೇಳಾಪಟ್ಟಿ ಮತ್ತು ಚಟುವಟಿಕೆಗಳನ್ನು ಮುಂದುವರೆಸಿದರು ಮತ್ತು 8 ಮಾರ್ಚ್ 2024 ರಂದು ಮಹಾಶಿವರಾತ್ರಿ ಆಚರಣೆಗಳಲ್ಲಿ ಕೂಡ ಪಾಲ್ಗೊಂಡಿದ್ದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.