ಕರೀನಾ ಕಪೂರ್ ಗೆ ಸೈಫ್ ಡಿವೋರ್ಸ್ ಬಿಸಿ; ಅತ್ತಿಗೆ ಕರಿಷ್ಮಾ ಕಾರಣ

 

ಅದ್ಯಾಕೋ ಏನೋ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ವಿಚ್ಛೇದನ ವಿಚಾರಗಳು ಭಾರೀ ಸುದ್ದಿ ಆಗ್ತಿದೆ. ಹಾರ್ದಿಕ್- ನತಾಶಾ ವಿಚ್ಛೇದನ್, ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ರೂಮರ್ಸ್, ನಡುವೆ ಇದೀಗ ಕರೀನಾ-ಸೈಫ್ ಕೂಡ ವಿಚ್ಛೇದನದ ಬಗ್ಗೆ ಮಾತಾಡಿದ್ದಾರೆ. ಹೌದು ಬಾಲಿವುಡ್ ನಟಿ ಕರೀನಾ ಕಪೂರ್ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿದೆ. ತನ್ನ ಇತ್ತೀಚಿನ ಸಂದರ್ಶನದಲ್ಲಿ ಕರೀನಾ ತನ್ನ ಮತ್ತು ಸೈಫ್ ಅಲಿ ಖಾನ್ ನಡುವೆ ಸಾಕಷ್ಟು ಜಗಳಗಳು ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ.

ಸೈಫ್ ಅಲಿ ಖಾನ್-ಕರೀನಾ ಕಪೂರ್ ಐದು ವರ್ಷಗಳ ಡೇಟಿಂಗ್ ಬಳಿಕ ನಂತರ ವಿವಾಹವಾದ್ರು. ಅನ್ಯಧರ್ಮವಾದ ವಿವಾಹವಾದ್ರಿಂದ ಕೆಲ ಅಡೆತಡೆಗಳು ಕೂಡ ಇದ್ದವು ಬಳಿಕ ಈ ಜೋಡಿ 2012 ರಲ್ಲಿ ವಿವಾಹವಾದ್ರು. ಇವರಿಬ್ಬರೂ ಈಗಲೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ದಂಪತಿಗೆ ಈಗ ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟು 12 ವರ್ಷಗಳ ನಂತರ ಕರೀನಾ ದಾಂಪತ್ಯದಲ್ಲಿ ಜಗಳಗಳ ಬಗ್ಗೆ ಮಾತಾಡಿದ್ದಾರೆ. 

https://youtube.com/shorts/JH0H4W9lNIk?si=CtH0uVk-BzFVheyZ

ಕರೀನಾ ಕಪೂರ್ ಇತ್ತೀಚೆಗೆ ‘ದಿ ವೀಕ್’ ಜೊತೆಗೆ ತಮ್ಮ ವೈಯಕ್ತಿಕ ಮತ್ತು ಸಿನಿ ಕೆರಿಯರ್ ಕುರಿತ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡ್ರು. ಜೀವನದ ಬಗ್ಗೆ ಕೂಡ ಮಾತಾಡಿದ್ದಾರೆ. ಸೈಫ್ ಅಲಿ ಖಾನ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕರೀನಾ ತಮ್ಮ ಪ್ರೀತಿಯ ಸಹೋದರಿ ಕರಿಷ್ಮಾ ಕಪೂರ್ ಮನೆಗೆ ಬಂದಾಗ ಅವರ ಮನೆಯಲ್ಲಿ ಯಾವ ರೀತಿಯ ವಾತಾವರಣ ಬದಲಾಗುತ್ತದೆ ಎಂದು ಹೇಳಿದ್ದಾರೆ.

ಬಳಿಕ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ನಡುವೆ ಯಾವಾಗಲೂ ಎಸಿ ತಾಪಮಾನದ ವಿಚಾರಕ್ಕೆ ಜಗಳವಾಡುತ್ತಾರೆ ಎಂದು ಹೇಳಿದ್ದಾರೆ. ಸೈಫ್ ಗೆ 16 ಡಿಗ್ರಿ ಸೆಲ್ಸಿಯಸ್ನಲ್ಲಿ ಎಸಿ ಬೇಕು. ಇದಕ್ಕಿಂತ ಸ್ವಲ್ಪ ಕಡಿಮೆಯಾದ್ರೆ ನಟ ಸಹಿಸೋದಿಲ್ಲವಂತೆ. ಆದರೆ ಕರೀನಾ 20 ಡಿಗ್ರಿ ಸೆಲ್ಸಿಯಸ್ ಸಾಮಾನ್ಯ ತಾಪಮಾನದಲ್ಲಿ ಇರಿಸುತ್ತಾರೆ. ಇಬ್ಬರು ಜಗಳವಾಡಿದ ಬಳಿಕ ಅಂತಹ ಪರಿಸ್ಥಿತಿಯಲ್ಲಿ, ಇಬ್ಬರೂ 19 ಡಿಗ್ರಿ ಸೆಲ್ಸಿಯಸ್ ಎಸಿಗೆ ರಾಜಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.