ಕಾಡಿನ ನಡುವೆ ತುಂಬಾ ಪ್ರಶಾಂತವಾಗಿದೆ ಎಂದ ಸಮಂತಾ; ನಾಗ ಚೈತನ್ಯಗೆ ಟಾಂಗ್
Aug 19, 2024, 15:32 IST
ಬಾಲಿವುಡ್ ನಟಿ ಸಮಂತಾ ಋತು ಪ್ರಭು ಮಲೇಷ್ಯಾದ ಲಂಕಾವಿಯಲ್ಲಿದ್ದಾರೆ. ತನ್ನ ಮಲೇಷ್ಯಾ ಪ್ರವಾಸದ ಸಂದರ್ಭದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಬಿಕಿನಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಕಿನಿ ಫೋಟೋ ಮಾತ್ರವಲ್ಲದೆ ಧ್ಯಾನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಲೇಷ್ಯಾದ ನಿಸರ್ಗದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ಸಮಂತಾ ಸಿನಿಮಾಗಳಿಂದ ಬಿಡುವು ಪಡೆದು ಆರೋಗ್ಯದ ಕಡೆಗೆ ಗಮನ ಕೊಡುತ್ತಿದ್ದಾರೆ. ರಜೆಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.ರೆಸಾರ್ಟ್ಗೆ ಭೇಟಿ ನೀಡಿರುವ ಸಮಂತಾ, ಅಲ್ಲಿ ನಿಸರ್ಗದ ನಡುವೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.ನೈಸರ್ಗಿಕ ಕೊಳವೊಂದರಲ್ಲಿ ಸಮಂತಾ ಈಜಾಡಿ ಕಾಲ ಕಳೆದಿದ್ದು, ಆ ಖುಷಿಯ ಸಮಯದ ಕೆಲವು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ.
ಫಿಟ್ನೆಸ್ ಹಾಗೂ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಿರುವ ಸಮಂತಾ. ಇದೇ ಕಾರಣಕ್ಕೆ ಮನಸ್ಸಿಗೆ ನೆಮ್ಮದಿ ನೀಡುವ ಪ್ರಕೃತಿ ನಡುವೆ ಸಮಯ ಕಳೆಯುತ್ತಿದ್ದಾರೆ. ಸಮಂತಾ ಕೆಲವು ಆರೋಗ್ಯ ಸಮಸ್ಯೆಗಳನ್ನು ಕಳೆದ ಎರಡು ವರ್ಷಗಳ ಕಾಲ ಎದುರಿಸಿದ್ದರು. ಹಾಗಾಗಿ ಕಳೆದ ಕೆಲ ತಿಂಗಳುಗಳಿಂದ ಆರೋಗ್ಯ ಸುಧಾರಣೆ ಕಡೆ ಗಮನ ನೀಡುತ್ತಿದ್ದಾರೆ.
<a href=https://youtube.com/embed/COxYPHkqH84?autoplay=1&mute=1><img src=https://img.youtube.com/vi/COxYPHkqH84/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಸಮಂತಾ ಕೊನೆಯದಾಗಿ ವರುಣ್ ಧವನ್ ಜೊತೆಗೆ ‘ಸಿಟಾಡೆಲ್’ ವೆಬ್ ಸರಣಿಯಲ್ಲಿ ನಟಿಸಿದರು. ಅದಾದ ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.ಸಮಂತಾ ಆರೋಗ್ಯ ಸಾಕಷ್ಟು ಚೇತರಿಕೆ ಕಂಡಿದ್ದು ಆದಷ್ಟು ಶೀಘ್ರವೇ ಮತ್ತೆ ಚಿತ್ರರಂಗಕ್ಕೆ ಮರಳುವುದಾಗಿ ಇತ್ತೀಚೆಗಷ್ಟೆ ಸಮಂತಾ ಹೇಳಿಕೊಂಡಿದ್ದರು.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಸಮಂತಾ ತನ್ನ ಪ್ರಾಜೆಕ್ಟ್‌ನಿಂದ ಬ್ರೇಕ್ ತೆಗೆದುಕೊಂಡಿದ್ದರು. ತನ್ನ ಆಟೋಇಮ್ಯುನ್ ಆರೋಗ್ಯ ಸ್ಥಿತಿಯಾದ ಮಯೋಸಿಟಿಸ್‌ಗೆ ಚಿಕಿತ್ಸೆ ಪಡೆಯುವ ಸಲುವಾಗಿ ಮತ್ತು ವಿಶ್ರಾಂತಿ ಪಡೆಯುವ ಸಲುವಾಗಿ ಕರಿಯರ್‌ನಿಂದ ಬ್ರೇಕ್ ತೆಗೆದುಕೊಂಡಿದ್ದರು. ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದ ಅವರು ಜಗತ್ತಿನ ವಿವಿಧೆಡೆ ಸುತ್ತುತ್ತ ಇದೀಗ ಮಲೇಷ್ಯಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.