ಸಂಪೂರ್ಣ ಬದಲಾದ ಸಾನಿಯಾ ಅಯ್ಯರ್; ಪಡ್ಡೆ ಹುಡುಗರಿಗೆ ಡವಡವ

 

ಕನ್ನಡದ ಧಾರವಾಹಿ ಪುಟ್ಟಗೌರಿ ಮದುವೆ ಮೂಲಕ ಫೇಮಸ್ ಆಗಿರುವ ಸಾನ್ಯಾ ಅಯ್ಯರ್ ಈಗ ಸಿನಿಮಾಗಳಲ್ಲಿ ಕೂಡ ಮಿಂಚುತ್ತಿದ್ದಾರೆ.ಕನ್ನಡದ ಬಿಗ್​​ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಸಾನ್ಯ ಅಯ್ಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್​​ಬಾಸ್​​ ಸೀಸನ್ 9ರಿಂದ ಅಪಾರ ಅಭಿಮಾನಿಗಳ ಮನಸನ್ನ ಕದ್ದ ಹುಡುಗಿ ಮತ್ತೊಂದು ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಾ ಇರುತ್ತಾರೆ ಸಾನ್ಯ ಅಯ್ಯರ್.

ಅದರಲ್ಲೂ ಈ ಫೋಟೋ ಶೂಟ್​ನಲ್ಲಿ ಪುಟ್ಟ ಗೌರಿಯ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಗುರುತೇ ಸಿಗದ ಹಾಗೇ ಬದಲಾಗಿದ್ದಾರೆ. ಫೋಟೋದಲ್ಲಿ ಕಪ್ಪು ಬಣ್ಣದ ಮಿನಿ ಸ್ಕರ್ಟ್ ಹಾಗೂ ಶಾರ್ಟ್ಸ್ ಧರಿಸಿಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇನ್ನೂ ನಟಿಯ ಹೊಚ್ಚ ಹೊಸ ಫೋಟೋಸ್​ಗಳನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

ಇಂದ್ರಜಿತ್‌ ಲಂಕೇಶ್‌ ಅವರ ಪುತ್ರ ಸಮರ್ಜಿತ್‌ ಲಂಕೇಶ್‌ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಾನ್ಯಾ ಅಯ್ಯರ್ ಹಾಟ್​ ಅವತಾರ ತಾಳಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್​ಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರೋ ಬೆಡಗಿ ಈಗ ಸಖತ್​ ಗ್ಲಾಮರಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಫೋಟೊಗಳಲ್ಲಿ ಸಾನ್ಯಾ ಹಿಂದೆಂದೂ ಕಂಡಿರದ ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ನಟ ಹಾಗೂ ಬಿಗ್ ಬಾಸ್ ಸಹ ಸ್ಪರ್ಧಿ ರೂಪೇಶ್ ಶೆಟ್ಟಿ ಹಾರ್ಟ್ ಇಮೋಜಿ ಕಾಮೆಂಟ್ ಮಾಡಿದ್ದಾರೆ. ಇನ್ನು ಪಡ್ಡೆ ಹುಡುಗರಂತೂ ಸಾನ್ಯಾ ಹೊಸ ಲುಕ್ ನೋಡಿ, ಮಾಜಿ ನೀಲಿ ಚಿತ್ರ ತಾರೆ ಮಿಯಾ ಖಲೀಫಾರನ್ನು  ನೆನಪಿಸಿಕೊಂಡಿದ್ದಾರೆ. 

ಅಷ್ಟೇ ಅಲ್ಲ ಇನ್ನೂ ಕೆಲವರು ಅರಿಯಾನ ಗ್ರಾಂಡೆ ತರ ಕಾಣಿಸ್ತಿದ್ದಾರೆ ಅಂದ್ರೆ ಮತ್ತೆ ಕೆಲವರು ರಾಖಿ ಸಾವಂತ್ ತರ ಕಾಣಿಸ್ತಿದ್ದೀರಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.