'ಅವಳು ಈ ಕುಳ್ಳನಿಂದ ಸುಖ ಕಂಡಾಳ' ಸಂಜು ಬಸಯ್ಯ ದಂಪತಿ ಬಗ್ಗೆ ಅಪಹಾಸ್ಯ

 
ಜನ ಏನಿದ್ದರೂ ಏನಿಲ್ಲದಿದ್ದರು ಆಡಿಕೊಳ್ಳುತ್ತಾರೆ. ಹೌದು ದಪ್ಪ, ಕಪ್ಪು, ಸಣ್ಣ, ಉದ್ದ ಹೀಗೆ ಆಡಿಕೊಳ್ಳುತ್ತಾರೆ.ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ನಾಡಿನ ಮನೆಮಾತಾದ ನಟ ಸಂಜು ಬಸಯ್ಯ, ತಮ್ಮ ಹಾಸ್ಯದಿಂದಲೇ ಎಲ್ಲರ ಮನಸೆಳೆದವರು. ಕಾಮಿಡಿ ಕಿಲಾಡಿಗಳು ಮುಗಿದ ಬಳಿಕ ಸಿನಿಮಾ, ನಾಟಕ ಹೀಗೆ ಅವರ ಕಲಾ ಜರ್ನಿ ಮುಂದುವರಿಯುತ್ತಿದೆ. 
ಹೀಗಿರುವಾಗಲೇ ಇದೀಗ ಸದ್ದಿಲ್ಲದೆ, ತಮ್ಮ ಬಹುಕಾಲದ ಪ್ರೇಯಸಿಯನ್ನು ಮದುವೆಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಮೂಲಕವೇ ನಾಡಿನ ಜನರನ್ನು ನಗಿಸಿದವರು ನಟ ಸಂಜು ಬಸಯ್ಯ. ಉತ್ತರ ಕರ್ನಾಟಕ ಮೂಲದ ಸಂಜು, ವೃತ್ತಿ ಮತ್ತು ಪ್ರವೃತ್ತಿಯಿಂದ ನಟನೆಯನ್ನೇ ನಂಬಿದವರು. ಬೆಳಗಾವಿ ಜಿಲ್ಲೆಯ ಮುರುಗೋಡು ಗ್ರಾಮದ ಸಂಜು, ಆರಂಭದಲ್ಲಿ ನಾಟಕ ಕಂಪನಿಗಳಲ್ಲಿ ಗುರುತಿಸಿಕೊಂಡಿದ್ದರು.
ಕುಳ್ಳ ಮಿಂಡ್ರಿ, ಮೆಣಸಿನಕಾಯಿ ಬಸ್ಯಾ, ಸಂಜು ಬಸಯ್ಯ ಹೀಗೆ ಹಲವು ಹೆಸರುಗಳಿಂದಲೇ ಇವರು ಫೇಮಸ್.ಜೀ ಕನ್ನಡದಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಮೂಲಕ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ ಸಂಜು. ಉತ್ತರ ಕರ್ನಾಟಕ ಭಾಗದಲ್ಲಿ ನಾಟಕಗಳಲ್ಲಿ, ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಸಂಜು ಬಸಯ್ಯ‌ ಇತ್ತೀಚೆಗಷ್ಟೇ ರಿಜಿಸ್ಟರ್‌ ಮದುವೆಯಾಗಿದ್ದಾರೆ. <a href=https://youtube.com/embed/5ALUZRkvICQ?autoplay=1&mute=1><img src=https://img.youtube.com/vi/5ALUZRkvICQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಂದಹಾಗೆ, ಸಂಜು ಅವರು ಮದುವೆ ಆಗಿದ್ದು ನಟಿ ಪಲ್ಲವಿ ಬಳ್ಳಾರಿ ಎಂಬುವವರನ್ನು. ನಾಟಕ ಕಲಾವಿದೆಯಾಗಿರುವ ಪಲ್ಲವಿ, ಮಲ್ಲು ಜಮಖಂಡಿ, ಶಿವಪುತ್ರ ಯಶಾರದಾ ಸೇರಿ ಹಲವು ಯೂಟ್ಯೂಬರ್‌ಗಳ ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಏಳೆಂಟು ವರ್ಷಗಳ ಹಿಂದೆಯೇ ಸಂಜು ಬಸಯ್ಯ ಮತ್ತು ಪಲ್ಲವಿ ಅವರ ಪರಿಚಯವಾಗಿತ್ತು. 
ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಸದ್ಯ ರಿಜಿಸ್ಟರ್‌ ಮದುವೆ ಆಗಿರುವ ಈ ಜೋಡಿ ಹಲವರ ಟೀಕೆ ಎದುರಿಸಿ ಸಪ್ತಪದಿ ತುಳಿದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.