ಕ.ಣ್ಣೀರು ಹಾಕುತ್ತಾ ಚೆನೈ ಏರ್ಪೋರ್ಟ್ಗೆ ಕಾಲಿಟ್ಟ ಸಿರಿ
ಈ ವಾರ ಬಿಗ್ ಬಾಸ್ ಮನೆಯಲ್ಲಿ ಪ್ರತಿವಾರದಂತೆ ಇಂದು ಕೂಡ ಎಲಿಮಿನೇಶನ್ ಆಗಲಿದೆ. ಆದ್ರೆ ಯಾರು ಎಲಿಮಿನೇಟ್ ಆಗಬಹುದು ಎಂಬ ಕುತೂಹಲ ನೋಡುಗರಲ್ಲಿ ಹೆಚ್ಚಾಗಿದೆ.ಇನ್ನು ಬಿಗ್ಬಾಸ್ 10 ಕನ್ನಡ ಸೀಸನ್ ಈ ಬಾರೀ ಅದ್ಭುತವಾಗಿ ಮೂಡಿಬರುತ್ತಿದೆ. ಇದೀಗ 12 ವಾರಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.
ಇನ್ನು 11 ನೇ ವಾರದಲ್ಲಿ ಪ್ರತೀ ವೀಕೆಂಡ್ನಂತೆ ಕಿಚ್ಚ ಸುದೀಪ್ ಬಂದಿರಲಿಲ್ಲ. ಆದ್ರೆ 12ನೇ ವಾರದ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಬಂದಿದ್ದರು. ಇನ್ನು ನಿನ್ನೆಯ ಎಪಿಸೋಡ್ನಲ್ಲಿ ನಾಮಿನೇಟ್ ಆದವರಲ್ಲಿ ಮೊದಲು ತುಕಾಲಿ ಸಂತೋಷ್ ಮತ್ತು ನಂತರ ವಿನಯ್ ಗೌಡ ಸೇಫ್ ಆಗಿದ್ದಾರೆ.
ಇನ್ನು ನಾಮಿನೇಶನ್ ಪಟ್ಟಿಯಲ್ಲಿ ಕಾರ್ತಿಕ್ ಮಹೇಶ್, ತನಿಷಾ, ಸಂಗೀತಾ, ವರ್ತೂರ್ ಸಂತೋಷ್, ಮೈಕಲ್, ಸಿರಿ ಅವರು ಉಳಿದಿದ್ದಾರೆ.ಆದ್ರೆ ಈ ಪಟ್ಟಿಯಲ್ಲಿ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಮಿಂಚುತ್ತಿರುವ ಸಿರಿ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಿರಿ ಅವರು ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಸೀರಿಯಲ್ ಮುಖಾಂತರ ಬಹಳಷ್ಟು ಜನಮನ್ನಣೆಯನ್ನು ಗಳಿಸಿದ್ದಾರೆ.
ಬಿಗ್ಬಾಸ್ ಸೀಸನ್ 10 ರ ಟಾಪ್ 10 ಸ್ಪರ್ಧಿಗಳಲ್ಲಿ ಇವರೂ ಒಬ್ಬರು. ಆದ್ರೆ 12 ವಾರದಲ್ಲಿ ಇವರು ಮನೆಯಿಂದ ಹೊರಗೆ ಬಂದಿದ್ದಾರೆಂದು ಕೆಲವೊಂದು ಸೋಷಿಯಲ್ ಮೀಡಿಯಾದಲ್ಲಿ ಸಹ ಪೋಸ್ಟ್ ಮಾಡಲಾಗುತ್ತಿದೆ. ಯಾವುದಕ್ಕೂ ಇಂದಿನ ಎಪಿಸೋಡ್ ನೋಡಬೇಕಾಗಿದೆ ಅಷ್ಟೇ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.