ಧಾರಾವಾಹಿಯಿಂದ ಹೊರಬಂದ ಒಂದೇ ದಿನಕ್ಕೆ ಗಳಗಳನೇ ಕ ಣ್ಣೀರು ಹಾಕಿದ ಸ್ನೇಹ
Nov 16, 2024, 19:13 IST
ಮಹಿಳೆಯರ ಮೆಚ್ಚಿನ ಸೀರಿಯಲ್ ಪುಟ್ಟಕ್ಕನ ಮಕ್ಕಳು ಇದೀಗ ಬೇಸರ ಮೂಡಿಸುತ್ತಿದೆ. ಕಾರಣ ಸ್ನೇಹಾ ಸಾವು. ಹೌದು ಪುಟ್ಟಕ್ಕನ ಮಕ್ಕಳು ಸೀರಿಯಲ್ನ ನಾಯಕಿ ಎಂದೇ ಬಿಂಬಿತವಾಗಿದ್ದ ಸ್ನೇಹಾ ಪಾತ್ರವನ್ನು ಸಾಯಿಸಲಾಗಿದೆ. ನಟಿ ಸಂಜನಾ ಬುರ್ಲಿ ಅವರು ಸೀರಿಯಲ್ ಬಿಡಬೇಕಾಗಿದ್ದ ಹಿನ್ನೆಲೆಯಲ್ಲಿ ಕಥೆಯನ್ನು ಬದಲಿಸಿ ಆ ಪಾತ್ರಕ್ಕೆ ಬೇರೊಬ್ಬರನ್ನು ತರದೇ ಪಾತ್ರವನ್ನೇ ಸಾಯಿಸಲಾಗಿದೆ.
ಸ್ನೇಹಾಳ ಹೃದಯವನ್ನು ಇನ್ನೊಬ್ಬಳು ಸ್ನೇಹಾಕ್ಕೆ ಅಳವಡಿಸಲಾಗಿದ್ದು, ಇದೀಗ ಈ ಸ್ನೇಹಾಳ ರೂಪದಲ್ಲಿ ಆ ಸ್ನೇಹಾ ಮುಂದೆ ಬರುತ್ತಿದ್ದಾಳೆ. ಆದರೆ ಕೆಲವು ವರ್ಷ ಒಂದು ಪಾತ್ರವನ್ನು ನೋಡಿದ ಅಭಿಮಾನಿಗಳಿಗೆ ಆ ಪಾತ್ರ ಇನ್ನಿಲ್ಲ ಎಂದು ಗೊತ್ತಾದಾಗ ನೋವಾಗುವುದು ಸಹಜ. ಅದೇ ರೀತಿ ಸಂಜನಾ ಬುರ್ಲಿ ಅವರು ಸೀರಿಯಲ್ ಬಿಟ್ಟು ಹೋಗಿರುವುದಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ.
ನಟಿ ಸೀರಿಯಲ್ ಬಿಟ್ಟ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿದ್ದಾರೆ. ಮೊದಲಿನಿಂದಲೂ ಸಂಜನಾ ಅವರು ರೀಲ್ಸ್, ವಿಡಿಯೋ, ಡಾನ್ಸ್ ಎಲ್ಲಾ ಮಾಡುತ್ತಲೇ ಇದ್ದರು. ಈಗ ಸೀರಿಯಲ್ ಬಿಟ್ಟ ಮೇಲೆ ಮತ್ತಷ್ಟು ಆಯಕ್ಟೀವ್ ಆಗಿದ್ದಾರೆ. ಅಂದಹಾಗೆ ಈಗ ಇನ್ನೊಂದು ವಿಡಿಯೋ ಅನ್ನು ಸಂಜನಾ ಬುರ್ಲಿ ಅವರು ಶೇರ್ ಮಾಡಿದ್ದಾರೆ. ನಟಿಯ ವಿಡಿಯೋ ಶುರು ಮಾಡುವ ಮೊದಲು ಅವರ ಮುಖ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಆಮೇಲೆ ಈ ವಿಡಿಯೋ ಪ್ಲೇ ಮಾಡಿದ ಮೇಲೆ ನಟಿ ಸಂಜನಾ ಬುರ್ಲಿ ಅವರು ರೀಲ್ಸ್ ಮಾಡುತ್ತಿರುವುದು ತಿಳಿದಿದೆ. ಮಿನುಗುತಾರೆ ಕಲ್ಪನಾ ಅವರ ಸಿನಿಮಾದ ಡೈಲಾಗ್ ಅನ್ನು ಡಬ್ಮ್ಯಾಷ್ ಮಾಡಿ ಸಕತ್ ಆಕ್ಟಿಂಗ್ ಮಾಡಿದ್ದಾರೆ ನಟಿ. ಇದನ್ನು ನೋಡಿ ಅಭಿಮಾನಿಗಳು ಸೂಪರ್ ಎನ್ನುತ್ತಿದ್ದಾರೆ.
ನೀವು ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಿಟ್ಟ ಮೇಲೆ ಆ ಸೀರಿಯಲ್ ನೋಡೋದನ್ನೇ ಬಿಟ್ಟಿದ್ದೇವೆ ಎಂದು ಕೆಲವರು ಕಮೆಂಟ್ ಮೂಲಕ ಹೇಳುತ್ತಿದ್ದಾರೆ. ಮತ್ತೆ ಸೀರಿಯಲ್ಗೆ ವಾಪಸ್ ಬನ್ನಿ ಎಂದು ಕೆಲವರು ಹೇಳುತ್ತಿದ್ದರೆ, ಬೇರೆ ಸೀರಿಯಲ್ನಲ್ಲಾದರೂ ಕಾಣಿಸಿಕೊಳ್ಳಿ ಎಂದು ಮತ್ತೆ ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.