ತರುಣ್ ಅವರನ್ನು ಕ್ರೈಸ್ತರ ಪವಿತ್ರ ಜಾಗಕ್ಕೆ ಕರೆದುಕೊಂಡು ಹೋದ ಸೋನಲ್; ಮತಾಂತರಕ್ಕೆ ಒಪ್ಪಿಕೊಂಡ್ರ ನಿರ್ಮಾಪಕ

 
ಬೆಂಗಳೂರಿನಲ್ಲಿ ಆಗಸ್ಟ್ 10, 11ರಂದು ಹಿಂದು ಧರ್ಮದ ಪ್ರಕಾರ ಮದುವೆಯಾಗಿದ್ದ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಅವರು ಮಂಗಳೂರಿನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಕಾರ ಮದುವೆ ಆಗುತ್ತಿದ್ದಾರೆ. ಈಗಾಗಲೇ ಮಂಗಳೂರಿನಲ್ಲಿ ವಿವಾಹ ಪೂರ್ವ ಶಾಸ್ತ್ರಗಳು ಶುರುವಾಗಿವೆ. 
ಮಂಗಳೂರಿನ ಮದುವೆ ಫೋಟೋಗಳನ್ನು ಸೋನಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿರಂಜೀವಿ ಸರ್ಜಾ-ಮೇಘನಾ ಸರ್ಜಾ ಅವರು ಹಿಂದು-ಕ್ರಿಶ್ಚಿಯನ್ ಧರ್ಮದ ಪ್ರಕಾರವೂ ಮದುವೆಯಾಗಿದ್ದರು. ಈಗ ಸೋನಲ್, ತರುಣ್ ಅವರು ಎರಡು ಧರ್ಮದ ಪ್ರಕಾರ ಮದುವೆ ಆಗಿದ್ದಾರೆ.
ಈಗಾಗಲೇ ಅತ್ಯಾಪ್ತರಿಗೆ ಈ ಜೋಡಿ ವಿವಾಹದ ಆಮಂತ್ರಣ ನಡೆದಿದೆ. ಮಂಗಳೂರಿನ ಸೋನಲ್ ಕುಟುಂಬಸ್ಥರು, ಆತ್ಮೀಯರು, ತರುಣ್ ಅವರ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆಯಲಿದೆ.ಕ್ರಿಶ್ಚಿಯನ್ ಧರ್ಮದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಾಗ ಅವರನ್ನು ವಿವಾಹಿತರು ಅಂತಲೇ ಕರೆಯಲಾಗುತ್ತದೆ. <a href=https://youtube.com/embed/3A3Vgl_4QAU?autoplay=1&mute=1><img src=https://img.youtube.com/vi/3A3Vgl_4QAU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಕ್ರಿಶ್ಷಿಯನ್ ಧರ್ಮದಲ್ಲಿ ಓರ್ವ ಗುರುಗಳ ಮುಂದೆ ಅಥವಾ ಗುರುಗಳ ಪ್ರತಿನಿಧಿಯ ಮುಂದೆ ಹೆಣ್ಣು ಬಹಿರಂಗವಾಗಿ ಮದುವೆಗೆ ತನ್ನ ಸಮ್ಮತಿಯನ್ನು ವ್ಯಕ್ತಪಡಿಸಬೇಕು.ಆಗಸ್ಟ್​​ 10, 11, 12ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್​ನಲ್ಲಿ ಆರತಕ್ಷತೆ, ಮದುವೆ ಶಾಸ್ತ್ರಗಳು ನಡೆದಿದ್ದವು. ಸಮಾರಂಭಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. 
ಇದೀಗ ಮಂಗಳೂರಿನಲ್ಲಿ ಕ್ರಿಶ್ಚಿಯನ್​ ಶೈಲಿಯಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು, ಕನ್ನಡ ಚಿತ್ರರಂಗದ ಹಲವರು ಕಾಣಿಸಿಕೊಂಡಿದ್ದಾರೆ. ತರುಣ್ ಸುಧೀರ್ ಬ್ಲ್ಯಾಕ್​​ ಆ್ಯಂಡ್​ ವೈಟ್​​ ಸೂಟ್‌ನಲ್ಲಿ ಕಾಣಿಸಿಕೊಂಡರೆ, ಸೋನಾಲ್ ಮೊಂತೆರೋ ವೈಟ್​​​ ಶೈನಿಂಗ್​​ ಗೌನ್​​ನಲ್ಲಿ ಗೊಂಬೆಯಂತೆ ಕಂಗೊಳಿಸಿದ್ದಾರೆ. ಸೆಲೆಬ್ರಿಟಿಗಳೂ ಸಹ ಕ್ರಿಶ್ಚಿಯನ್​ ಶೈಲಿಯ ವೆಡ್ಡಿಂಗ್ ಔಟ್​ಫಿಟ್​​​ನಲ್ಲಿ ಮಿಂಚಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.