ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನ ಜೊತೆ ವಿಮಾನಯಾನ ಮಾಡಿದ ಸೋನು ಗೌಡ
Nov 19, 2024, 09:34 IST
ಸಾಮಾಜಿಕ ಜಾಲತಾಣದ ಮೂಲಕವೇ ಸಮಾಜಕ್ಕೆ ಪರಿಚಯವಾದವರು ಸೋನು ಗೌಡ. ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದ ಸೋನು ಗೌಡ, ಮೊನ್ನೆಯಷ್ಟೇ... ತಮ್ಮ ಕನಸಿನ ಮನೆಯನ್ನು ಪ್ರವೇಶಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಯಲ್ಲಿ ತಮ್ಮ ಹೊಸ ಮನೆ ಕಟ್ಟಿಸಿದ್ದಾರೆ. ಈ ಮೂಲಕ ಯಾವುದು ಅಸಾಧ್ಯವಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಇಂಥಾ ಸೋನು ಗೌಡ ಈಗ ಮಾಜಿ ಮುಖ್ಯಮಂತ್ರಿ ಜೊತೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅನೇಕರ ಕಣ್ಣರಳಿಸಿದ್ದಾರೆ. ಹೌದು, ಅಸಲಿಗೆ ಎಲ್ಲರಿಗೆ ಗೊತ್ತಿರುವಂತೆ ಸೋನು ಗೌಡ ಒಂದು ಕಡೆ ಕೂರುವವರಲ್ಲ. ಸದಾ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲೆಂದರಲ್ಲಿ ಓಡಾಡುತ್ತಾನೇ ಇರುತ್ತಾರೆ ಸೋನು ಗೌಡ.ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸೋನು ಗೌಡ ಪ್ರವಾಸದ ಗುಂಗಿನಲ್ಲಿ ತಾವು ಇರುವ ಕೆಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
<a href=https://youtube.com/embed/DxwK4Lu-kfk?autoplay=1&mute=1><img src=https://img.youtube.com/vi/DxwK4Lu-kfk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆದರೆ ಹೀಗೆ ಹಂಚಿಕೊಳ್ಳಲಾದ ಫೋಟೊ ಗುಚ್ಚದಲ್ಲಿ ಒಂದು ಫೋಟೊ ಎಲ್ಲರ ಗಮನ ಸೆಳೆದಿದೆ. ಆ ಫೋಟೊಗೆ ಹಲವಾರು ಅಭಿಪ್ರಾಯ ಕೂಡ ವ್ಯಕ್ತವಾಗಿವೆ. ಆ ಫೋಟೊ ಬೇರೆ ಯಾರದ್ದು ಅಲ್ಲ ಬದಲಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನ್ನುವುದು ವಿಶೇಷ.ಹೌದು, ಸೋನು ಶ್ರೀನಿವಾಸ್ ಗೌಡ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪಕ್ಕ ಕುಳಿತು ಫೋಟೊ ಕ್ಲಿಕಿಸಿಕೊಂಡಿದ್ದಾರೆ.
ಅವರ ಜೊತೆಯಲ್ಲಿಯೇ ವಿಮಾನ ನಿಲ್ಧಾಣದಲ್ಲಿ ಬಸ್ ನಲ್ಲಿ ಪ್ರಯಾಣವನ್ನು ಮಾಡಿದ್ದಾರೆ. ಸದ್ಯಕ್ಕೆ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂವತ್ತು ಸಾವಿರಕ್ಕೂ ಅಧಿಕ ಇನ್ಸ್ಟಾಗ್ರಾಮ್ ಬಳಕೆದಾರರ ಗಮನವನ್ನೂ ಸೆಳೆದಿದೆ. ಇನ್ನೂ.. ಈ ಫೋಟೊಗೆ ಸೋನು ಗೌಡ ನನ್ನ ಜೀವನದಲ್ಲಿ ಕಂಡಂತ ಮೊದಲ ಮುಗ್ಧ ಮನಸಿನ ಮನುಷ್ಯ ಇವರೆ ಎಂದು ಕ್ಯಾಪ್ಷನ್ ನೀಡಿದ್ದು, ಫೋಟೊ ಕಂಡು ಎಲ್ಲಿಂದ ಎಲ್ಲಿಗೆ ಲಿಂಕ್ ಆಗಿದೆ ಗುರು ಇದು ಎಂದು ಒಬ್ಬರು ಹುಬ್ಬೇರಿಸಿದ್ದಾರೆ. ಇನ್ನೊಬ್ಬರು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.