ಇದ್ದಕ್ಕಿದ್ದಂತೆ ಶ್ರೀರಾಮನ ಪುಣ್ಯ ಭೂಮಿ ನೋಡಲು ಸಾವಿರಾರು ಮುಸ್ಲಿಮರು ಅಯೋಧ್ಯೆಗೆ ಭೇಟಿ
Aug 19, 2024, 18:17 IST
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಲೋಕಾರ್ಪಣೆ ಮಾಡಿದ್ದಾರೆ. ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
.
ಇದರ ಬೆನ್ನಲ್ಲೇ, ಶ್ರೀರಾಮನ ದರ್ಶನಕ್ಕಾಗಿ ಮುಂಬೈನ ಮುಸ್ಲಿಂ ಯುವತಿ ಶಬನಮ್ ಶೇಖ್ ಅವರು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಹೌದು ಅಪ್ಪಟ ರಾಮನ ಭಕ್ತೆಯಾಗಿರುವ, ತನ್ನನ್ನು ತಾನು ಸನಾತನಿ ಎಂದು ಕರೆದುಕೊಳ್ಳುವ ಶಬನಮ್ ಶೇಖ್ ಅವರು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಶ್ರೀರಾಮನ ಧ್ವಜ ಹಿಡಿದುಕೊಂಡು ಸಾಗುತ್ತಿರುವ ಯುವತಿಯು ಈಗಾಗಲೇ ನೂರಕ್ಕೂ ಅಧಿಕ ಕಿಲೋಮೀಟರ್ ಮಾರ್ಗವನ್ನು ನಡೆದುಕೊಂಡೇ ಕ್ರಮಿಸಿದ್ದಾರೆ.
<a href=https://youtube.com/embed/tdYMrcUSaC8?autoplay=1&mute=1><img src=https://img.youtube.com/vi/tdYMrcUSaC8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಮಾರ್ಗದ ಮಧ್ಯೆ ಶ್ರೀರಾಮನ ಭಕ್ತರನ್ನು ಭೇಟಿಯಾಗುತ್ತ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಸಾಗುತ್ತಿರುವ ಇವರ ವಿಡಿಯೊಗಳು ಭಾರಿ ವೈರಲ್ ಆಗಿವೆ. ನಿತ್ಯವೂ ಪಾದಯಾತ್ರೆಯ ವಿಡಿಯೊಗಳನ್ನು ಶಬನಮ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಜೈ ಶ್ರೀರಾಮ್. ಶ್ರೀರಾಮನ ದರ್ಶನ ಮಾಡುವುದೇ ನನ್ನ ಜೀವನದ ಗುರಿಯಾಗಿದೆ. ಇದಕ್ಕಾಗಿ ನಾನು ಅಯೋಧ್ಯೆಗೆ ನಡೆದುಕೊಂಡೇ ಸಾಗುತ್ತಿದ್ದೇನೆ ಎಂದು ಶಬನಮ್ ಶೇಖ್ ಹೇಳಿದ್ದಾರೆ.
ಇವರಿಗೆ ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ. ಇನ್ನು ಇಸ್ಲಾಂ ಧರ್ಮದಲ್ಲಿ ಜನಿಸಿ, ರಾಮನ ದರ್ಶನಕ್ಕೆ ತೆರಳುತ್ತಿರುವ ಯುವತಿಗೆ ಮಾರ್ಗದುದ್ದಕ್ಕೂ ಹಿಂದುಗಳು, ಹಿಂದು ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ. ಅಲ್ಲದೇ 10000 ಮುಸ್ಲಿಂಮರು ಈಗಾಗಲೇ ರಾಮ ಮಂದಿರಕ್ಕೆ ಬೆಂಬಲ ಸೂಚಿಸಿದ್ದು ಅಯೋಧ್ಯೆಗೆ ಭೇಟಿ ನೀಡುವ ಹಂಬಲದಲ್ಲಿದ್ದಾರೆ.