ಸುದೀಪ್ ಸರ್ ನನ್ನ ಜೀವನವನ್ನೇ ಹಾಳು ಮಾಡಿ ಬಿಟ್ರು, ಕಿಚ್ಚನ ಆ ಒಂದು ‌ಮಾತಿನಿಂದ ಇವತ್ತು ಅವಕಾಶ ಸಿಗುತ್ತಿಲ್ಲ‌ ಎಂದ ತುಕಾಲಿ

 

ಬಿಗ್ ಬಾಸ್ ಕನ್ನಡ ಶೋ ಎಂದರೆ ಕೇವಲ ಮನರಂಜನೆ ಮಾತ್ರವಲ್ಲ, ಸ್ಪರ್ಧಿಗಳ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ಹಾಸ್ಯ ನಟ ತುಕಾಲಿ ಸಂತೋಷ್ ಕೂಡ ಅದರಲ್ಲಿ ಒಬ್ಬರು. ಅವರು ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಭಾಗವಹಿಸಿದ್ದರು. ಈಗ ಸೀಸನ್ 12 ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ, ಸಂತೋಷ್ ತಮ್ಮ ಹಳೆಯ ಅನುಭವವನ್ನು ನೆನಪಿಸಿಕೊಂಡಿದ್ದಾರೆ.

ಮೊದಲ ವಾರ ನಾನು ನಿರಂತರವಾಗಿ ಕಾಮಿಡಿ ಮಾಡುತ್ತಿದ್ದೆ. ನಾನೇ ಮನೆಯ ಕಿಂಗ್ ಎಂದುಕೊಂಡಿದ್ದೆ. ಆದರೆ ಕಿಚ್ಚ ಸುದೀಪ್ ಸರ್ ಬಂದು ಇದು ಕಾಮಿಡಿ ಅಲ್ಲ, ಜನರನ್ನು ಹುರಿಯುತ್ತಿದೆ ಎಂದು ಹೇಳಿದರು. ಆ ಮಾತು ನನಗೆ ದೊಡ್ಡ ಹೊಡೆತವಾಗಿತ್ತು. ಆಮೇಲೆ ಎಲ್ಲರೂ ನನ್ನನ್ನು ನಾಮಿನೇಟ್ ಮಾಡಿದರು. ನನಗೆ ತುಂಬಾ ಶಾಕ್ ಆಯ್ತು ಎಂದು ಸಂತೋಷ್ ಹೇಳಿದ್ದಾರೆ.

ಆದರೆ ಇದೇ ಟೀಕೆ ಅವರ ಬದುಕಿನಲ್ಲಿ ತಿರುವು ತಂದುಕೊಟ್ಟಿತು. ಆಟದ ಶೈಲಿಯನ್ನು ಬದಲಿಸಿ, ವಿಭಿನ್ನವಾಗಿ ಆಡಲು ಶುರುಮಾಡಿದರು. ನಂತರ ಸುದೀಪ್ ಅವರ ಈ ಹೊಸ ಪ್ರಯತ್ನವನ್ನು ಮೆಚ್ಚಿದರು. ನಂತರ ಸುದೀಪಣ್ಣ ನನಗೆ ಇಷ್ಟಪಟ್ಟರು, ಪ್ರೋತ್ಸಾಹಿಸಿದರು. ಅದು ನನಗೆ ದೊಡ್ಡ ಬೆಂಬಲವಾಯಿತು ಎಂದು ಸಂತೋಷ್ ಹೇಳಿದ್ದಾರೆ. <a style="border: 0px; overflow: hidden" href=https://youtube.com/embed/k_DmOksFom8?autoplay=1&mute=1><img src=https://img.youtube.com/vi/k_DmOksFom8/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಬಿಗ್ ಬಾಸ್ ಕನ್ನಡದಲ್ಲಿ ಕೇವಲ ಮನರಂಜನೆ ಮಾತ್ರವಲ್ಲ, ಸಹನಶೀಲತೆ, ಹೊಂದಿಕೊಳ್ಳುವ ಗುಣ, ಹಾಗೂ ಸಂಬಂಧಗಳ ಸಮತೋಲನ ಕಲಿಯುವ ಅವಕಾಶ ದೊರೆಯುತ್ತದೆ. ಸಂತೋಷ್ ಅವರ ಅನುಭವದಿಂದ ಒಂದು ಪಾಠ ಸ್ಪಷ್ಟ – ಕಠಿಣ ಟೀಕೆ ಕೂಡ ಒಬ್ಬರನ್ನು ಬಲಿಷ್ಠನನ್ನಾಗಿ ರೂಪಿಸಬಹುದು.ಸೀಸನ್ 12 ಹೊಸ ಮುಖಗಳು, ಹೊಸ ಸವಾಲುಗಳೊಂದಿಗೆ ಆರಂಭವಾಗುತ್ತಿದ್ದಂತೆ, ತುಕಾಲಿ ಸಂತೋಷ್ ಅವರ ಕಥೆ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ.