ಸುಹಾನಾ ಸೈಯದ್ ಮದುವೆ ಆಗೋ ಹಿಂದೂ ಹುಡುಗ ಮಾತ್ರ ಕೋಟಿಯ ಕುಬೇರ, ಮದುವೆ ದಿನ ಇಡೀ ಕರ್ನಾಟಕಕ್ಕೆ ಬಾಡೂಟ

 

ಝೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಶ್ರೀಕರನೇ ಶ್ರೀನಿವಾಸನೇ ಹಾಡು ಹಾಡಿ ಕಲಾಭಿಮಾನಿಗಳ ಮನಸ್ಸು ಕದ್ದಿದ್ದ ಸುಹಾನಾ ಸೈಯದ್ ಅವರನ್ನು ನೆನಪಿಸಿಕೊಳ್ಳದವರು ಯಾರೂ ಇಲ್ಲ. ಆ ಸಮಯದಲ್ಲಿ ಸುಹಾನಾ ಮುಸ್ಲಿಂ ಮೌಲ್ವಿಗಳ ಟೀಕೆಗೆ ಗುರಿಯಾದರೂ, ತಮ್ಮ ಪ್ರತಿಭೆ ಮತ್ತು ಧೈರ್ಯದಿಂದ ಜನಮನ ಗೆದ್ದುಕೊಂಡಿದ್ದರು.

ಅವರ ಬೋಲ್ಡ್ ಲುಕ್ ಹಾಗೂ ಡೋಂಟ್ ಕೇರ್ ಅಟ್ಟಿಟ್ಯೂಡ್ ಅವರನ್ನು ಇನ್ನಷ್ಟು ಜನಪ್ರಿಯಗೊಳಿಸಿತು. ಇದೀಗ ಈ ಪ್ರತಿಭಾವಂತ ಗಾಯಕಿ ತಮ್ಮ ಜೀವನದ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಬಹುಕಾಲದ ಗೆಳೆಯ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ಸುಹಾನಾ ಮದುವೆಯಾಗುತ್ತಿದ್ದಾರೆ.

ನಿನಾಸಂ ರಂಗ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿರುವ ನಿತಿನ್ ಹಾಗೂ ಸುಹಾನಾ ಕಳೆದ 16 ವರ್ಷಗಳ ಸ್ನೇಹವನ್ನು ಈಗ ದಾಂಪತ್ಯ ಜೀವನದ ಹೊಸ ಅಧ್ಯಾಯವಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೃದಯದ ಮಾತು ಹಂಚಿಕೊಂಡ ಸುಹಾನಾ ಹೀಗೆ ಬರೆದಿದ್ದಾರೆ ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ… ಪ್ರೇಮಕ್ಕೆ ಮಿತಿ ಇಲ್ಲ. ನಾವು ಅದಕ್ಕೆ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದೆ. ಪ್ರತಿಯೊಂದು ಸವಾಲು, ಸಂಶಯ ಮತ್ತು ಭಯದ ನಡುವೆ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ. ಇಂದು ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಆಶೀರ್ವಾದ ನಮ್ಮೊಂದಿಗೆ ಇರಲಿ. <a style="border: 0px; overflow: hidden" href=https://youtube.com/embed/yuNFs8rtJLo?autoplay=1&mute=1><img src=https://img.youtube.com/vi/yuNFs8rtJLo/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಸುಹಾನಾ ಅವರ ಈ ನಿರ್ಧಾರವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಿಂದೂ ಯುವಕನೊಂದಿಗೆ ಮದುವೆಯಾಗುತ್ತಿರುವ ಸುದ್ದಿ ಕೆಲವರ ಟೀಕೆಗೆ ಗುರಿಯಾದರೂ, ಅಭಿಮಾನಿಗಳು ಪ್ರೀತಿಗೆ ಯಾವ ಧರ್ಮ-ಜಾತಿ ಅಡೆತಡೆ ಇಲ್ಲ ಎಂಬ ಸಂದೇಶವನ್ನು ಮೆಚ್ಚುತ್ತಿದ್ದಾರೆ.