ದಶಕಗಳ ಹಿಂದಿನ ಸೂಪರ್ ಸ್ಟಾರ್ ಶಂಕರ್ ನಾಗ್ ಮಗಳು ಈಗ ಅಪ್ಸರೆಯಂತಿದ್ದಾರೆ
Nov 11, 2024, 10:29 IST
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ಆಟೋ ನೋಡಿದರೆ, ಸ್ಯಾಂಡಲ್‌ವುಡ್‌ನ ದಿಗ್ಗಜರನ್ನು ನೆನಪಿಸಿಕೊಳ್ಳುವಾಗ, ಅಷ್ಟೇ ಯಾಕೆ ನಮ್ಮ ಮೆಟ್ರೋ ಉದ್ಘಾಟನೆಯಾಗುವಾಗಲೂ ಕನ್ನಡಿಗರು ನೆನಪಿಸುಕೊಳ್ಳುವ ನಟನೆಂದರೆ ಶಂಕರ್‌ನಾಗ್. ಚಿತ್ರದುರ್ಗದಲ್ಲಿ ಅಪಘಾತವಾಗಿ ಕೊನೆಯುಸಿರೆಳೆದ ಶಂಕರ್ ನಾಗ್ ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗಕ್ಕೆ ಅವರ ಸ್ಥಾನವನ್ನು ತುಂಬಲು ಇವತ್ತಿಗೂ ಅಸಾಧ್ಯ.
ದೂರದೃಷ್ಟಿ ಜೊತೆ ನಾಟಕ, ನಟನೆ, ನಿರ್ದೇಶನಕ್ಕೂ ತಾವು ಸೈ ಎಂದು ಚಿಕ್ಕ ವಯಸ್ಸಿನಲ್ಲಿಯೇ ಪ್ರೂವ್ ಮಾಡಿದ ಈ ನಟನ ಪತ್ನಿ ಅರುಂಧತಿ ನಾಗ್, ನಾಟಕಗಳ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಆದರೆ, ಮಗಳು ಕಾವ್ಯಾ ಬಗ್ಗೆ ಎಲ್ಲಿಯೂ ವಿಷಯ ಸಿಗೋಲ್ಲ. ವಿದೇಶದಿಂದ ಮರಳಿದ ಮೇಲೆ ಸದ್ಯ ಬೆಂಗಳೂರಿನಲ್ಲಿ ವಾಸ ಇರುವ ಕಾವ್ಯಾನಾಗ್ ಈಗೇನು ಮಾಡುತ್ತಿದ್ದಾರೆ ಎಂಬುದು ಬಹುತೇಕರ ಕುತೂಹಲ.
ವಿದ್ಯಾಭ್ಯಾಸ ಮುಗಿದ ಮೇಲೆ ಕಾವ್ಯಾ ನಾಗ್ ಅವರು ಆಯ್ಕೆ ಮಾಡಿಕೊಂಡಿದ್ದು ವಕೀಲಿಕೆ. ಇದರ ಜತೆಗೆ ಎನ್‌ಜಿಓವೊಂದರಲ್ಲಿ ಕೆಲಸ ಮಾಡುವ ಮೂಲಕ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಅಂದಹಾಗೆ ವಕೀಲ ವೃತ್ತಿ ಮಾಡುತ್ತಿರುವಾಗಲೇ ಬಾಲ್ಯದ ಗೆಳೆಯನ್ನು ವರಿಸುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 2010ರಲ್ಲಿ ತಮ್ಮ ಬಾಲ್ಯದ ಗೆಳೆಯ ಸಲಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
<a href=https://youtube.com/embed/JW14YB2cH5Q?autoplay=1&mute=1><img src=https://img.youtube.com/vi/JW14YB2cH5Q/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹುಣಸೂರಿನ ತಮ್ಮ ತಂದೆ ಜಮೀನಿನಲ್ಲಿ ಕೋಕೋನೆಸ್ ಅನ್ನುವ ಕಂಪನಿ ತೆರೆದಿರುವ ಕಾವ್ಯಾನಾಗ್, ಕೆಮಿಕಲ್ ಮುಕ್ತ ಸೋಪ್ ಹಾಗೂ ಆಯಿಲ್ ಉತ್ಪಾದಿಸಿ, ಮಾರುತ್ತಿದ್ದಾರೆ. ಕೋಕೋನೆಸ್ ಸಂಸ್ಥೆ ಮೂಲಕ ತಯಾರಾಗುತ್ತಿರುವ ಪರಿಶುದ್ಧ ತೆಂಗಿನೆಣ್ಣೆ ಅಥವಾ ವರ್ಜಿನ್ ಆಯಿಲ್ ಬೆಂಗಳೂರಿನ ಆರ್ಗ್ಯಾನಿಕ್ ಶಾಪ್‌ಗಳಲ್ಲಿ, ಕೋಕೋನೆಸ್ ವೆಬ್‌ಸೈಟ್, ಅಮೆಜಾನ್‌ನಂಥ ಆನ್‌ಲೈನ್ ತಾಣಗಳಲ್ಲಿ ದೊರೆಯುತ್ತದೆ. ಬೆಂಗಳೂರು ಹೊರವಲಯದಲ್ಲಿ ಇವರ ಕೋಕೋನೆಸ್ ತೆಂಗಿನ ಹಾಲು ಉತ್ಪಾದಕ ಘಟಕವಿದೆ.
ಕಾವ್ಯಾನಾಗ್ ಅವರು ಓದಿದ್ದು ವೈಲ್ಡ್‌ಲೈಫ್ ಬಯಾಲಜಿ. ಜೀವವಿಜ್ಞಾನ, ವನ್ಯಜೀವಿಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಈ ಹಿನ್ನೆಯಲ್ಲಿ ಹುಟ್ಟಿಕೊಂಡ ಯೋಚನೆಯೇ ವರ್ಜಿನ್ ಆಯಿಲ್. 'ನಮ್ಮ ನೆಲದಲ್ಲಿ ತೆಂಗು ಹೇರಳವಾಗಿದೆ. ಆದರೆ, ಅದನ್ನು ಸರಿಯಾಗಿ ಬಳಸುವಲ್ಲಿ ಸೋಲುತ್ತಿದ್ದೇವೆ. ನಮ್ಮ ಪರಂಪರೆಯ ಜ್ಞಾನವನ್ನು ಮೂಲೆಗುಂಪು ಮಾಡಿ, ವಿದೇಶಿ ಉತ್ಪನ್ನಗಳ ಹಿಂದೆ ಹೋಗುತ್ತಿದ್ದೇವೆ.
ನಮ್ಮ ನೆಲದ ಸಂಪತ್ತು ಹಾಗೂ ಜ್ಞಾನವನ್ನು ಮುಂದುವರಿಸಬೇಕು. ಅದು ಜನಕ್ಕೆ ಬಳಕೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಕೋಕೋನೆಸ್ ಸಂಸ್ಥೆ ಆರಂಭಿಸಿದೆ, ಎನ್ನುತ್ತಾರೆ ಕಾವ್ಯಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.