ದರ್ಶನ್‌ಗೆ ಜಾಮೀನು ಕೊಟ್ಟ ಸುಪ್ರೀಂ ಕೋರ್ಟ್;‌ 'ನ್ಯಾಯ ಎಲ್ಲಿದೆ' ಅಂತ ರೇಣುಕಾಸ್ವಾಮಿ ತಂದೆಯ‌ ಕೂಗು

 
ರೇಣುಕಾಸ್ವಾಮಿ ಕೊ ಲೆ‌ ಕೇಸ್ ನಲ್ಲಿ ಜೈಲು ಸೇರಿದ್ದ ದರ್ಶನ್ ಗೆ ಇದೀಗ ಬಿಗ್ ರಿಲೀಫ್ ‌ಸಿಕ್ಕಿದೆ. ಕರ್ನಾಟಕದ‌ ಪ್ರಖ್ಯಾತ ಲಾಯರ್ ಅವರ ವಾದವಿವಾದಗಳ ಚಮತ್ಕಾರದಿಂದ ದರ್ಶನ್ ಹಾಗೂ ಪವಿತ್ರ ಗೌಡಗೆ ಜಾಮೀನು ಕೊಟ್ಟ ಸುಪ್ರೀಂ ಕೋರ್ಟ್. ನ್ಯಾಯಾಲಯದ ತೀರ್ಪು ಹೊರಬರುತ್ತಿದ್ದಂತೆ ರೇಣುಕಾಸ್ವಾಮಿ ತಂದೆ 'ನ್ಯಾಯ ಎಲ್ಲಿದೆ ಅಂತ ಕಣ್ಣೀರು ಹಾಕಿದ್ದಾರೆ. 
ಹೌದು, ಮಗನ ಕೊ ಲೆ‌ ಬಳಿಕ ತಮ್ಮ‌ ಮನೆಯಲ್ಲಿ ಸೂತಕದ ಛಾಯೆ ಇನ್ನೂ ಹೋಗಿಲ್ಲ. ಈ ಸಂಧರ್ಭದಲ್ಲಿ ಕೊ ಲೆಗಾರ ದರ್ಶನ್ ಅವರನ್ನು‌‌ ನ್ಯಾಯಾಲಯ‌ ಇದೀಗ ಜಾಮೀನು ಕೊಟ್ಟು ಹೊರ ಬಿಟ್ಟಿದೆ. ನನ್ನ ಮಗನ‌ ಸಾ ವಿಗೆ ಸಿಕ್ಕ ‌ನ್ಯಾಯ ಇದೇನಾ ಅಂತ ರೇಣುಕಾಸ್ವಾಮಿ ತಂದೆ ಕಣ್ಣೀರು ಹಾಕಿದ್ದಾರೆ. ಇನ್ನು ದರ್ಶನ್ ಅವರ ಜೊತೆ ಪವಿತ್ರ ಗೌಡಗೂ ನ್ಯಾಯಾಲಯದ ಜಾಮೀನು ಕೊಟ್ಟಿದೆ. ಪವಿತ್ರ ಗೌಡ ಅವರ‌ ತಾಯಿಯ ನಿರಂತರ ಹೋರಾಟಕ್ಕೆ ಇದೀಗ ‌ಜಯ ಸಿಕ್ಕಂತಾಯಿತು. 
ಇನ್ನು ಇವತ್ತು ಜೈಲಿನಿಂದ ಹೊರಬರಲಿರುವ ಪವಿತ್ರ ಗೌಡ ಮೊದಲು ತನ್ನ ತಾಯಿ ಹಾಗೂ ಮಗಳನ್ನು ನೋಡಲಿದ್ದಾರೆ‌. ಜೊತೆಗೆ ತನ್ನ ಗಂಡ ಅಂದರೆ ದರ್ಶ ಅವರನ್ನು ‌ನೋಡಲು ಆಸ್ಪತ್ರೆಗೆ ಬರುತ್ತಾರಾ ಎಂಬ ಕುತೂಹಲವೂ ಎದ್ದಿದೆ. ದರ್ಶನ್ ಅವರ ಜೊತೆ ಸಾಕಷ್ಟು ಒಡನಾಟವಿದ್ದ ಪವಿತ್ರ ಅವರು‌ ನೆಚ್ಚಿನ ಗಂಡನನ್ನು ನೋಡಲು ಆಸ್ಪತ್ರೆಗೆ ಬರುವ ಲಕ್ಷಣಗಳು ಕಾಣುತ್ತಿದೆ‌. <a href=https://youtube.com/embed/OX6qQy5iwqM?autoplay=1&mute=1><img src=https://img.youtube.com/vi/OX6qQy5iwqM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಸಿಕ್ಕ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಚಿತ್ರೀಕರಣ ಮತ್ತೆ ಆರಂಭವಾಗುವ ಎಲ್ಲಾ‌‌ ಸಾಧ್ಯತೆಗಳು‌ ಕಾಣುತ್ತಿದೆ‌. ಇದರ ಜೊತೆಗೆ ದರ್ಶನ್ ಅವರನ್ನು ನೋಡಲು ಹಲವಾರು ನಿರ್ಮಾಪಕರು ಹಾಗೂ ನಿರ್ದೇಶಕರು ಕೂಡ ದರ್ಶನ್ ‌ಅವರ ಬಳಿ ಮತ್ತೆ ತಿರುಗಿ ನೋಡುತ್ತಿದ್ದಾರೆ