ರಸ್ತೆಯಲ್ಲಿ ಕುಡಿದು ತೇಲಾಡಿದ ಸುವರ್ಣ ನ್ಯೂಸ್ ಅಜಿತ್ ಹನುಮಕ್ಕನವರ್? ವಿಡಿಯೋ ವೈರಲ್
Sep 18, 2024, 17:28 IST
ಕಳೆದ ಕೆಲ ದಿನಗಳಿಂದ ಮಾದ್ಯಮಗಳು ನಟ ದರ್ಶನ್ ಹಿಂದೆ ಬಿದ್ದಿದೆ. ಅವರು ನಿಂತರೂ ಸುದ್ದಿ, ಕೂತರೂ ಸುದ್ದಿ ಒಟ್ಟಿನಲ್ಲಿ ಅವರು ಏನೇ ಮಾಡಿದ್ರೂ ಸುದ್ದಿಮಾಡಿ ಟಿಆರ್ಪಿ ಬಾಚಿಕೊಳ್ಳುತ್ತಿದ್ದಾರೆ. ಒಂದು ವೇಳೆ ಕೊಲೆ ಆರೋಪಿ ದರ್ಶನ್ ಪರ ಏನಾದರೂ ಇದೇ ಮಾಧ್ಯಮಗಳು ನಿಂತಿದ್ದರೆ ಅಥವಾ ದರ್ಶನ್ ಗೆ ಫೇವರ್ ದರ್ಶನ್ ಅವರ ಕುರಿತಾಗಿ ಒಂದೇ ಒಂದು ನ್ಯೂಸ್ ಪ್ರಕಟಿಸಿಲ್ಲ ಎಂದಿದ್ದರೆ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ನಿರಪರಾಧಿ ಎಂದು ಎಂದೋ ಹೊರಬರುತ್ತಿದ್ದರು.
ಇಷ್ಟು ಹೊತ್ತಿಗಾಗಲೇ ಯಾರಾದರು ರಾಜಕೀಯದ ವ್ಯಕ್ತಿ ಅವರನ್ನು ಬಿಡಿಸಿ ಬಕೆಟ್ ಹಿಡಿದಾಗಿರುತ್ತಿತ್ತು. ಆದರೆ ಮಾಧ್ಯಮಗಳು ನ್ಯಾಯದ ಪರವಾಗಿ, ದರ್ಶನ್ ಅವರ ಉಗ್ರ ರೂಪದ ಎದುರು ಸೆಟೆದು ನಿಂತ ಕಾರಣದಿಂದಲೇ ಇಂದು ಈ ಪ್ರಕರಣ ಇಷ್ಟು ಸ್ಟ್ರಾಂಗ್ ಆಗಿ ಮುನ್ನಡೆಯುತ್ತಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಇದು ಸತ್ಯ ಕೂಡ.
ದರ್ಶನ್ ಆರೋಪಿ ಎಂದು ಅರೆಸ್ಟ್ ಆದಾಗಲಿಂದಲೂ ಮಾಧ್ಯಮಗಳು, ನಿರೂಪಕರು ಯರ್ರಾಬಿರ್ರಿ ಅವರ ಜನ್ಮ ಜಾಲಾಡುತ್ತಿದ್ದಾರೆ. ಅದರಲ್ಲೂ ನಿರೂಪಕ ಅಜಿತ್ ಹನುಮಕ್ಕನವರ್ ಅಂತೂ ಮೈ ಮೇಲೆ ಆವೇಷಬಂದಂತೆ ದರ್ಶನ್ ವಿರುದ್ಧ ಹರಿಹಾಯ್ದಿದ್ದಾರೆ. ಏಕವಚನದಲ್ಲೇ ಜಾಡಿಸಿದ್ದಾರೆ. ಹೈವಾನ, ಕಿಲ್ಲಿಂಗ್ ಸ್ಟಾರ್, ದನ ಇದ್ದಾಗೆ ಇದ್ದಾನೆ, ಕೊಲೆಗಡುಕ ಎಂದೆಲ್ಲಾ ಹಿಂಡಿ ಹಿಪ್ಪೆ ಮಾಡಿದ್ದಾರೆ. ಕೆಲವು ದಿನಗಳಿಂದ ಕೊಂಚ ತಣ್ಣಗಾಗಿದ್ದ ಅಜಿತ್ ಇದೀಗ ಜೈಲಲ್ಲಿ ದರ್ಶನ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮತ್ತೆ ಕೆಂಡಾಮಂಡಲವಾಗಿದ್ದಾರೆ. ನಟ ದರ್ಶನ್ ಅವರನ್ನು ಚೆನ್ನಾಗಿಯೇ ರೋಸ್ಟ್ ಮಾಡಿದ್ದಾರೆ.
<a href=https://youtube.com/embed/30jg0oTiMyU?autoplay=1&mute=1><img src=https://img.youtube.com/vi/30jg0oTiMyU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇವೆಲ್ಲದರ ನಡುವೆ ಕಳೆದೆರಡು ದಿನಗಳಿಂದ ಆಂಕರ್ ಅಜಿತ್ ಹನುಮಕ್ಕನವರ್ದು ಎನ್ನಲಾದ ವಿಡಿಯೊ ಒಂದು ಎಲ್ಲೆಡೆ ವೈರಲ್ ಆಗ್ತಿದೆ. ಕುಡಿದು ರೋಡ್ ನಲ್ಲಿ ತೂರಾಡುತ್ತಾ ನಡೆಯುತ್ತಿರುವ ಈ ವಿಡಿಯೋ ಹಲವಾರು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಹೌದು ಬೆಂಗಳೂರಿನ BEL ರಸ್ತೆಯಲ್ಲಿ ಮದ್ಯ ಕುಡಿದು ತೂರಾಡುತ್ತಾ ಸರಿಯಾಗಿ ನಿಲ್ಲಲೂ ಆಗದೆ ಬೀಳುತ್ತ ಏಳುತ್ತ ಸಾಗುತ್ತಿರುವ ವಿಡಿಯೋ ಒಂದು ಎಲ್ಲೆಡೆ ಹರಿದಾಡ್ತಿದೆ. ಎಷ್ಯಾನೆಟ್ ಸುವರ್ಣ ವಾಹಿನಿಯ ಜನಪ್ರಿಯ ಆಂಕರ್ , ರವಿ ಬೆಳಗೆರೆ ಅವರ ಶಿಷ್ಯ ಅಜಿತ್ ಅವ್ರು ಹೀಗ್ಯಾಕೆ ಮಾಡಿದ್ರು ಅನ್ನೋ ಪ್ರಶ್ನೆ ಹಲವರಿಗೆ ಮೂಡಿದೆ.
ಅಷ್ಟಕ್ಕೂ ಅಜಿತ್ ಹನುಮಕ್ಕನವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸೈಕಾಲಜಿಯಲ್ಲಿ ಬಿಎ ಮಾಡಿದ್ದಾರೆ. ಅವರು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್‌ನೊಂದಿಗೆ ಪತ್ರಿಕೋದ್ಯಮದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇವರು ಪತ್ರಕರ್ತೆ ಸಹನಾ ಭಟ್ ಅವರನ್ನು ಮದುವೆಯಾಗಿದ್ದಾರೆ. ದಂಪತಿಗಳಿಗೆ ಮುದ್ದಾದ ಅವಳಿ ಜವಳಿ ಮಕ್ಕಳಿದ್ದಾರೆ.ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ನ ಲೀಡ್ ಆಂಕರ್ ಆಗಿರುವ ಇವರು ತಿಂಗಳಿಗೆ 1ಲಕ್ಷಕ್ಕಿಂತ ಹೆಚ್ಚಿನ ಸಂಬಳ ಪಡೆಯುತ್ತಾರೆ. ಸದಾ ಸತ್ಯ ಧರ್ಮ, ಕರ್ಮಗಳ ಕುರಿತು ಮಾತನಾಡುವ ಇವರು ಇಂತಹ ಕೆಲಸ ಮಾಡಿರಲಿಕ್ಕಿಲ್ಲ ಎನ್ನುವ ಮಾತು ಜನಮಾಧ್ಯಮದಲ್ಲಿ ಕೇಳಿ ಬರ್ತಿದೆ.
ದರ್ಶನ್ ಅಭಿಮಾನಿಗಳು ಮಾತ್ರ ಇದು ಅಜಿತ್ ಹನುಮಕ್ಕನವರ್ ವಿಡಿಯೋ ಎಂದು ಎಲ್ಲೆಡೆ ಶೇರ್ ಮಾಡ್ತಿದ್ದಾರೆ. ಆದ್ರೆ ಅವರದೇ ವಿಡಿಯೋ ಹೌದೋ ಅಲ್ಲವೋ ಎನ್ನುವ ಕುರಿತು ಯಾರಿಗೂ ಸರಿಯಾದ ಮಾಹಿತಿಯಂತೂ ಇಲ್ಲ. ಅಷ್ಟಕ್ಕೂ ಅವರದ್ದೇ ವಿಡಿಯೋ ಅಂತಾದ್ರೆ ಕಾರ್ ನಂಬರ್ ಬ್ಲರ್ ಮಾಡಿದ್ದಾದ್ರು ಯಾಕೆ? ಒಂದೇ ಒಂದು ಸಲ ಕೂಡ ಅವರ ಮುಖ ಎದುರಿಗೆ ಕಾಣ್ಸಿಲ್ಲ ಯಾಕೆ? ಸೈಡ್ ಇಂದ ಅದೂ ಕತ್ತಲಲ್ಲಿ ಮಾಡಿರೋ ವಿಡಿಯೋದಲ್ಲಿ ಅವರಂತೆ ಕಾಣ್ತಿದ್ದಾರೆ ಅನ್ನೋ ಕಾರಣಕ್ಕೆ ಅವರನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ.ಒಟ್ಟಿನಲ್ಲಿ ಸತ್ಯ ಏನು ಎಂದು ಇನ್ಮೇಲೆ ತಿಳಿಯಬೇಕಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.