ಬಿಗ್ ಬಾಸ್ ಮನೆಗೆ ಸುವರ್ಣ ನ್ಯೂಸ್ ಅಜಿತ್ ಸರ್ ಆಯ್ಕೆ; ಈ‌ ಬಾರಿ ಕನ್ನಡಿಗರಿಗೆ ಭರ್ಜರಿ ಮನರಂಜನೆ

 
ಖಾಸಗಿ ವಾಹಿನಿಯೊಂದು ಸುವರ್ಣ ನ್ಯೂಸ್‌ ಮುಖ್ಯಸ್ಥ ಅಜಿತ್ ಹನಮಕ್ಕನವರ್ ಬಿಗ್‌ಬಾಸ್ ಮನೆಗೆ ಹೋಗುತ್ತಾರೆಂದು ಸುದ್ದಿ ಮಾಡಿದ್ದು, ಇದಕ್ಕೆ ಖುದ್ದು ಅಜಿತ್ ತಮ್ಮ ಸೋಷಿಯಲ್ ಮೀಡಿಯಾದಲ್ಲೊಂದು ಪೋಲ್ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಹಲವರು ಇದು ಫೇಕ್ ನ್ಯೂಸ್ ಎಂದರೆ, ಮತ್ತೆ ಕೆಲವರು ನಿಮ್ಮನ್ನು ಬಿಗ್ ಬಾಸ್ ಮನೆಯಲ್ಲಿ ನಿರೀಕ್ಷಿಸುತ್ತಿದ್ದೇವೆ, ಎಂದೂ ಹೇಳಿದ್ದಾರೆ. 
ಒಟ್ಟಿನಲ್ಲಿ ಅಜಿತ್ ಬಿಗ್‌ಬಾಸ್ ರಿಯಾಲಿಟಿ ಶೋಗೆ ಕಾಲಿಡುತ್ತಾರೋ ಸೆಕೆಂಡರಿ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ದೊಡ್ಡ ಮಟ್ಟದ ಪರ ವಿರೋಧ ಚರ್ಚೆಗಳಾಗುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಪ್ರೋಮೋ ಶೂಟಿಂಗ್ ಕೂಡ ನಡೆದಿದ್ದು, ಎಡಿಟಿಂಗ್ ಕೆಲಸ ನಡೆಯುತ್ತಿದೆ. 
ಈ ನಡುವೆ ಕಳೆದವಾರ ಪ್ರೋಮೋ ಶೂಟಿಂಗ್‌‌ನಲ್ಲಿ ಭಾಗವಹಿಸಿದ ಶೋ ನಿರೂಪಕ ಕಿಚ್ಚನ 2 ಫೋಟೋಗಳೂ ಲೀಕ್ ಆಗಿದ್ದು, ಈ ಬಾರಿಯೂ ಬಿಗ್‌ಬಾಸ್‌ಗೂ ಕಿಚ್ಚನೇ ಬಾಸ್ ಎಂಬುವುದು ಸ್ಪಷ್ಟವಾಗಿದೆ. ಈ ಮುಂಚೆ ಈ ಶೋಗೆ ಕಿಚ್ಚ ಗುಡ್ ಬೈ ಹೇಳಲಿದ್ದು, ರಿಷಭ್ ಶೆಟ್ಟಿ ಅಥವಾ ಅರವಿಂದ್ ರಮೇಶ್ ಎಂಬ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಇದೀಗ ಅಜಿತ್ ಬಿಗ್‌ಬಾಸ್ ಮನೆಗೆ ಹೋಗುವ ಬಗ್ಗೆ ಆನೇಕ ಗಾಳಿ ಸುದ್ದಿಗಳು ಹರಡುತ್ತಿವೆ. <a href=https://youtube.com/embed/vbdB_Q1z_o4?autoplay=1&mute=1><img src=https://img.youtube.com/vi/vbdB_Q1z_o4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದರ ಬೆನ್ನಲ್ಲೇ ಅವರು ಬರಬಹುದು ಇವರು ಬರಬಹುದು, ಬರ್ತಾರಂತೆ ಎಂಬ ಗಾಸಿಪ್ಸ್  ಸಹಜವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ವಿಶೇಷವೆಂದರೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಎಡಿಟರ್‌ ಅಜಿತ್ ಹನಮಕ್ಕನವರ್ ಹೆಸರೂ ಸೇರಿ ಕೊಂಡಿರುವುದು ಸಾಮಾಜಿಕ ಮಾಧ್ಯಮ ಲೋಕದಲ್ಲಿ ಚರ್ಚೆ ಹುಟ್ಟು ಹಾಕಿದೆ.
ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾಗಿದ್ದುಕೊಂಡು ಬಿಗ್‌ ಬಾಸ್‌ ಮನೆಗೆ ಹೋದರೆ ಅವರ ಸ್ಥಾನವನ್ನು ಯಾರು ತುಂಬಬಹುದು ಎಂಬುದೇ ಈಗಿರುವ ದೊಡ್ಡ ಪ್ರಶ್ನೆಯಾಗಿ ನೆಟ್ಟಿಗರನ್ನು ಕಾಡುತ್ತಿರುವಂತೆ ಕಾಣುತ್ತಿದೆ. ಅಜಿತ್‌ ನಡೆಸಿಕೊಡುವ, ಪಾರ್ಟಿ ರೌಂಡ್ಸ್, ಲೆಫ್ಟ್ ರೈಟ್‌ ಸೆಂಟರ್‌, ರಾತ್ರಿ 8.30ಕ್ಕೆ ನಡೆಸಿಕೊಡುವ ನ್ಯೂಸ್‌ ಅವರ್, ವೀಕೆಂಡ್‌‌ನಲ್ಲಿ ಬರುವ ನ್ಯೂಸ್‌ ಅವರ್  ಸ್ಪೆಷಲ್‌ ಯಾರು ನಡೆಸಿ ಕೊಡಬಹುದೆಂಬುದನ್ನೂ ಸೋಷಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.