ಕೊ ಲೆ ಮಾಡಿದಕ್ಕೆ ಸಿಡಿದೆದ್ದ ಸೀರಿಯಲ್ ನ ಟಿ ರಂಜನಿ ರಾಘವನ್; 'ಮನುಷ್ಯತ್ವ ಇದೆಯಾ'
Updated: Jun 15, 2024, 17:38 IST
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ಬಗ್ಗೆ ಇದೀಗ ಚಿತ್ರರಂಗದ ಒಬ್ಬೊಬ್ಬರೇ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. ಇದೀಗ ಕಿರುತೆರೆಯಿಂದ ಹಿರಿತೆರೆ ಬಂದ ನಟಿ ರಂಜಿನಿ ರಾಘವನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಹೆಸರು ಉಲ್ಲೇಖಿಸದೇ ಇದ್ದರೂ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಲನ್ ಗಳು ಸತ್ತಾಗ ಸಂಭ್ರಮಿಸೋದು ಅಭ್ಯಾಸವಾಗಿ ಈ ಸಾವಿನ ತೀವ್ರತೆ ಗೊತ್ತಾಗುತ್ತಿಲ್ಲವೇ? ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ರೇಣುಕಾಸ್ವಾಮಿ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಮತ್ತು ದರ್ಶನ್ ತಪ್ಪೇ ಮಾಡಿಲ್ಲ ಎಂದು ಪರ ವಹಿಸುತ್ತಿರುವವರಿಗೆ ರಂಜಿನಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
<a href=https://youtube.com/embed/GgJeGnMKUPA?autoplay=1&mute=1><img src=https://img.youtube.com/vi/GgJeGnMKUPA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಪುಟ್ಟಗೌರಿ ಮದುವೆ, ಕನ್ನಡತಿ ಮುಂತಾದ ಧಾರವಾಹಿಗಳ ಮೂಲಕ ಕನ್ನಡಿಗರ ಮನೆ ಮಗಳಾದ ರಂಜಿನಿ ರಾಘವನ್ ಬಳಿಕ ಸ್ಯಾಂಡಲ್ ವುಡ್ ನಲ್ಲೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದರ್ಶನ್ ಸಂಬಂಧಿ ಮನೋಜ್ ನಾಯಕರಾಗಿರುವ ಸಿನಿಮಾದಲ್ಲೇ ರಂಜಿನಿ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ.
ದರ್ಶನ್ ಬಂಧಿತರಾದ ಬೆನ್ನಲ್ಲೇ ನಟಿ ರಮ್ಯಾ ತಮ್ಮಸೋಷಿಯಲ್ ಮೀಡಿಯಾದಲ್ಲಿ ಈ ಅಪರಾಧಕ್ಕೆ ಜೀವಾವಧಿ ಅಥವಾ ಗಲ್ಲು ಇದಕ್ಕಿಂತ ಕಡಿಮೆ ಶಿಕ್ಷೆ ಇರಬಾರದು ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ದರ್ಶನ್ ಆಪ್ತ ಸ್ನೇಹಿತೆ, ನಟಿ ರಕ್ಷಿತಾ ಕೂಡಾ ಜೀವನ ಎನ್ನುವುದು ಗಿಫ್ಟ್ ಎಂದು ಮಾರ್ಮಿಕವಾಗಿ ಒಂದು ಸಂದೇಶ ಬರೆದಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.