ವೈದ್ಯರ ನಿರ್ಲಕ್ಷ್ಯಕ್ಕೆ ಮುದ್ದಾದ ಮಗುವನ್ನು ಕಳೆದುಕೊಂಡ ತಾ.ಯಿ, ಕರ್ಮ ಬಿಡಲ್ಲ ಎಂದು ಶಾಪ ಹಾಕಿದ ತಾಯಿ

 

ಹಾಸನದಿಂದ ಝೀರೋ ಟ್ರಾಫಿಕ್​ನಲ್ಲಿ ಚಿಕಿತ್ಸೆಗಾಗಿ ಕರೆ ತಂದಿದ್ದ ಒಂದೂವರೆ ವರ್ಷದ ಮಗು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಬಳಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಝೀರೋ ಟ್ರಾಫಿಕ್​​ನಲ್ಲಿ ಬಂದ ಮಗುವಿಗೆ  ಸರಿಯಾದ ಸಮಯದಲ್ಲಿ ಚಿಕಿತ್ಸೆ ಲಭಿಸದ ಕಾರಣ ಮಗು ಸಾವನ್ನಪ್ಪಿದೆ ಅಂತ ಪೋಷಕರು ಆರೋಪಿಸಿದ್ದಾರೆ. ನಿಮ್ಹಾನ್ಸ್ ಅಸ್ಪತ್ರೆ ಮುಂದೆ ಸಾರ್ವಜನಿಕರ ಪ್ರತಿಭಟನೆ  ನಡೆಸಿದ್ದು, ಮಗು ಸಾವಿಗೆ ನ್ಯಾಯ ಬೇಕು ಅಂತಾ ಆಗ್ರಹಿಸಿದ್ದಾರೆ.

ಒಂದೂವರೆ ವರ್ಷದ ಮಗು ಆಟವಾಡುತ್ತಿದ್ದ ಸಂದರ್ಭದಲ್ಲಿ ಮೆಟ್ಟಿಲ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ಕೂಡಲೇ ಪೋಷಕರು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲೆ ಮಾಡಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗುವಿನ ಸ್ಥಿತಿ ಗಂಭೀರವಾಗಿದ್ದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಂತೆ.

ಇದರಂತೆ ಹಾಸನ ಪೊಲೀಸರ ನೆರವು ಪಡೆದ ಪೋಷಕರು ಮಗುವನ್ನು ಝೀರೋ ಟ್ರಾಫಿಕ್​ನಲ್ಲಿ ಆ್ಯಂಬುಲೆನ್ಸ್ ಮೂಲಕ ನಿಮ್ಹಾನ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದ ತಂದ ಬೆಡ್​ ಇಲ್ಲ ಎಂದು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಮಗುವನ್ನು ಆ್ಯಂಬುಲೆನ್ಸ್​ನಲ್ಲೇ ಉಳಿಸಿದ್ದರಂತೆ. ಆದರೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಗು ಚಿಕಿತ್ಸೆ ಇಲ್ಲದೇ ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. <a href=https://youtube.com/embed/b48DyXGSoDQ?autoplay=1&mute=1><img src=https://img.youtube.com/vi/b48DyXGSoDQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ನಿಮ್ಹಾನ್ಸ್ ಆಸ್ಪತ್ರೆ ಬಳಿ ಬಂದರೂ ವೈದ್ಯರು ಪ್ರಾಥಮಿಕ ಚಿಕಿತ್ಸೆಯನ್ನು ಮಗುವನ್ನು ನೀಡುವ ಕಾರ್ಯ ಮಾಡಿಲ್ಲ. ಬೆಡ್ ಖಾಲಿಯಿಲ್ಲ ಎಂದು ಆಸ್ಪತ್ರೆಯ ಆವರಣದಲ್ಲಿಯೇ ಆಡಳಿತ ಮಂಡಳಿ ನಿಲ್ಲಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ಹೋಗುವಂತೆ ಸೂಚಿಸಿದ್ದ ಹಾಸನ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೂಚಿಸಿ ಬೆಡ್ ಕಾಯ್ದಿರಿಸುವಿಕೆಗಾಗಿ ನಿಮ್ಹಾನ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದರಂತೆ. 

ಆದರೆ ಇಲ್ಲಿಗೆ ಬಂದ ಬಳಿಕ ಈಗ ಬೆಡ್ ಇಲ್ಲ ಎಂದೇಳಿದ್ದರಂತೆ. ಝೀರೋ ಟ್ರಾಫಿಕ್ ನಲ್ಲಿ ಹಾಸನದಿಂದ ನಿಮಾನ್ಸ್ ಗೆ 1 ಗಂಟೆ 40 ನಿಮಿಷದಲ್ಲಿ ಬಂದಿದರೂ, ಮಗುವಿಗೆ ಚಿಕಿತ್ಸೆ ಲಭಿಸದೆ ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ ಆದರೆ ಈಗೀಗ ವೈದ್ಯಕೀಯ ಕ್ಷೇತ್ರದಲ್ಲಿ ಏನೇನು ನಡೆಯುತ್ತಿದೆ ಬಲ್ಲವರು ಯಾರು ಇಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.