ಕೋಟಿ ಬೆಲೆಯ ಬೈಕ್ ನಲ್ಲಿ ಹೆಂಡತಿ ಜೊತೆ ಊರು ಸುತ್ತಿದ ತರುಣ್ ಸುಧೀರ್, ನೋಡೋಕೆ ಎರಡು ಕಣ್ಣು ಸಾಲಲ್ಲ
Oct 16, 2024, 09:34 IST
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಇದೇ 11ರಂದು ಬೆಂಗಳೂರಿನ ನಡೆದಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಸೋನಲ್ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ.
ಈ ವಿವಾಹಕ್ಕೆ ಕನ್ನಡದ ಸ್ಟಾರ್ ಕಲಾವಿದರ ದಂಡು, ರಾಜಕೀಯ ಗಣ್ಯರು ಭಾಗಿಯಾದರು. ಬಳಿಕ ಜೋಡಿ ಕ್ರೈಸ್ತ ಸಂಪ್ರದಾಯದಂತೆ ಮಂಗಳೂರಿನಲ್ಲಿ ಮದುವೆ ಮಾಡಿಕೊಂಡರು. ಇನ್ನು ಕೆಲವೇ ದಿನಗಳ ಹಿಂದಷ್ಟೇ ಮಾಲ್ದೀವ್ಸ್‌ಗೆ ನವದಂಪತಿಗಳು ಹನಿಮೂನ್‌ಗೂ ತೆರಳಿ ಎಂಜಾಯ್ ಮಾಡಿದ್ದರು. ಅದರಲ್ಲೂ ತರುಣ್ ಹುಟ್ಟುಹಬ್ಬವನ್ನು ಸಕತ್ತಾಗಿ ಆಚರಿಸಬೇಕು ಎಂದು ಈ ಸಮಯದಲ್ಲಿ ಹೋಗಿದ್ದರು ಎನ್ನಲಾಗಿದೆ.
https://www.instagram.com/reel/DBEPxrny3El/?igsh=cTQ3ZXViN2Mzb3E1
ಇನ್ನು ಅಲ್ಲಿನ ಒಂದಷ್ಟು ಫೋಟೋಗಳನ್ನು ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಖತ್ ಸುದ್ದಿಯಾಗಿದ್ದರು. ಚೌಕ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ತರುಣ್ ಸುಧೀರ್‌ಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಚೌಕ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಅವರು, ರಾಬರ್ಟ್ ಸಿನಿಮಾಕ್ಕೂ ಆಕ್ಷನ್ ಕಟ್ ಹೇಳಿದ್ದರು. ಆದರೆ ದರ್ಶನ್ ಜೈಲಿಗೆ ಹೋಗುವ ಮುನ್ನ ಅಭಿನಯಿಸಿದ ಚಿತ್ರ ಕ್ಲಿಕ್ ಆಗಿತ್ತು.
ಇನ್ನು ಇತ್ತೀಚಿಗೆ ಅಷ್ಟೇ ತರುಣ್ ಸುಧೀರ್ ಅವರ ಕಚೇರಿಯಲ್ಲಿ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ, ವಿವಿಧ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೂ ಸಂಪ್ರದಾಯ ಬದ್ಧವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ತರುಣ್ ಸುಧೀರ್ ಅವರೊಂದಿಗೆ ತಾಯಿ ಮಾಲತಿ ಸುಧೀರ್, ಪತ್ನಿ ಸೋನಲ್ ಹಾಗೂ ಕಚೇರಿ ಸಿಬ್ಬಂದಿಗಳು ಸಹ ಪೂಜೆಯಲ್ಲಿ ಭಾಗವಹಿಸಿದ್ದರು. ಪೂಜೆ ಮುಗಿಸಿ ಪತ್ನಿಯನ್ನು ತಮ್ಮ ಹಾರ್ಲೆ-ಡೇವಿಡ್ಸನ್ ಎಕ್ಸ್440 ಬೈಕ್ ಅಲ್ಲಿ ಜಾಲಿ ರೈಡ್ ಮಾಡಿಸಿದ್ದಾರೆ. ಅದನ್ನು ಕಂಡು ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.