ಶ್ರೀಲೀಲಾ ಕೈಹಿಡಿಯಲಿದ್ದಾರೆ ತೆಲುಗು ಸಿನಿಮಾದ ಸೂಪರ್ ಸ್ಟಾರ್; ಮೆಚ್ಚಿಕೊಂಡ ಫ್ಯಾನ್ಸ್

 

ಶ್ರೀಲೀಲಾ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಹಾಗೆ ಅನ್ನುವುದಕ್ಕಿಂತ ಸುಮ್ಮ ಸುಮ್ಮನೆ ಅವರನ್ನು ಹೀಗೆ ಸಿಲುಕಿಸಿದ್ದಾರೆ. ಈಗ ತಾನೇ ಟಾಲಿವುಡ್  ಅಂಗಳದಲ್ಲಿ ನೆಲೆ ಊರುತ್ತಿರುವ ಹುಡುಗಿಯನ್ನು ಮದುವೆ ಮಾಡಿಸಲು ಹೊರಟಿದ್ದಾರೆ ಕೆಲವರು. ಇದೇನಿದು? ಯಾರ ಜೊತೆ ಶ್ರೀಲೀಲಾ ಹೆಸರು ಥಳಕು ಹಾಕಿಕೊಂಡಿತು? ಇಲ್ಲಿದೆ ಮಾಹಿತಿ.

ಕನ್ನಡತಿ ಶ್ರೀಲೀಲಾ ಮುಖ ಸಪ್ಪೆ ಮಾಡಿಕೊಂಡಿದ್ದಾರೆ. ಇನ್ಯಾರದ್ದೋ ತಪ್ಪಿಗೆ ಹೀಗೆ ಅವಮಾನ ಅನುಭವಿಸುತ್ತಿದ್ದಾರೆ. ಈಗ ತಾನೇ ಟಾಲಿವುಡ್ ಅಂಗಳದಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿಯೇ ಇವರ ಹೆಸರು ಅದೊಬ್ಬ ಸೂಪರ್‌ಸ್ಟಾರ್ ನಟನ ಮಗನ ಜೊತೆ ಸೇರಿಕೊಂಡಿದೆ. ಅಷ್ಟೇ ಅಲ್ಲ. ಆ ಹುಡುಗನ ಜೊತೆ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ವೈರಲ್ ಆಗುತ್ತಿದೆ.  <a href=https://youtube.com/embed/v7vgdmWFZp8?autoplay=1&mute=1><img src=https://img.youtube.com/vi/v7vgdmWFZp8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಹೆಸರು ಮಾಡುತ್ತಿದ್ದಾರೆ. ಒಂದಲ್ಲ ಎರಡಲ್ಲ ಭರ್ತಿ ಹನ್ನೊಂದು ಸಿನಿಮಾ ಇವರ ಕೈಯಲ್ಲಿವೆ. ಸ್ಟಾರ್ ನಟರಿಂದ ಹಿಡಿದು ಬಡ್ಡಿಂಗ್ ಆರ್ಟಿಸ್ಟ್ ಅಂತಾರಲ್ಲ. ಅವರ ಜೊತೆ ನಟಿಸುತ್ತಿದ್ದಾರೆ.  ‘ಭಗವಂತ ಕೇಸರಿ’ ಸಿನಿಮಾದಲ್ಲಿ ಟಾಲಿವುಡ್ ಟಾಪ್ ಸ್ಟಾರ್ ಬಾಲಕೃಷ್ಣನ ಮಗಳಾಗಿ ನಟಿಸಿದ್ದಾರೆ. ಇದೇ ಬಾಲಯ್ಯನ ಮಗ ಮೋಕ್ಷಗಣನ ಜೊತೆ ಶ್ರೀಲೀಲಾ ಹೆಸರು ಓಡಾಡುತ್ತಿದೆ. ಬರೀ ಅಷ್ಟೆ ಅಲ್ಲ. ಆ ಹುಡುಗನ ಜೊತೆ ಮದುವೆ  ಆಗಲಿದ್ದಾರಂತೆ ಕನ್ನಡದ ನಟಿ ಶ್ರೀಲೀಲಾ.

ಮೋಕ್ಷಗಣನ ಜೊತೆ ಶ್ರೀಲೀಲಾ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಜೊತೆಗೆ ಓಡಾಡಿದ್ದೂ ಸುಳ್ಳಲ್ಲ. ಅಷ್ಟಕ್ಕೇ ಇವರಿಬ್ಬರ ನಡುವೆ ಸಂಬಂಧ ಇದೆ ಎಂದು ಅಲ್ಲಿಯ ಕೆಲವು ಮೀಡಿಯಾ ವರದಿ ಮಾಡಿವೆ. ಇದನ್ನು ಕೇಳಿ ಶ್ರೀಲೀಲಾ ಫುಲ್ ಅಪ್‌ಸೆಟ್ ಆಗಿದ್ದಾರೆ. ಈ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದರೂ ಯಾರೂ ಕೇಳುತ್ತಿಲ್ಲ. ಸಿನಿಮಾ ಅಂದ ಮೇಲೆ ಈ ರೀತಿ ಗಾಳಿ ಸುದ್ದಿ ಸಾಮಾನ್ಯ. ಇದನ್ನು ತಲೆಗೆ ಹಚ್ಚಿಕೊಳ್ಳದೇ ಕೆಲಸ ಮಾಡಬೇಕಷ್ಟೇ. ಕನ್ನಡದ ಹುಡುಗಿ ಆದಷ್ಟು ಬೇಗ ಇದರಿಂದ ಹೊರಗೆ ಬರಲಿ ಎಂಬುದೇ ಅಭಿಮಾನಿಗಳ ಆಶಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.