ಖ್ಯಾ.ತ ನಟ ಒಮ್ಮೆಲೆ ಆಸ್ಪತ್ರೆಗೆ; ಓಡೋಡಿ ಬಂದ ಯಶ್

 

ಬಿರು ಬೇಸಿಗೆಯ ದಿನಗಳಲ್ಲಿ ಉಷ್ಣಾಂಶ ಹೆಚ್ಚಿರುವ ಕಾರಣ ದೇಹದ ಅರೋಗ್ಯ ಕೆಡಿಸಿಕೊಳ್ಳುವುದು ಅಗತ್ಯ. ಹೌದು ರಾಮಾಚಾರಿ ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಗೆಳೆಯ ಪ್ರಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅಶೋಕ್‌ ಶರ್ಮಾ ಇದೀಗ ಕನ್ನಡದ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ.

ಪ್ರತಿ ನಿತ್ಯ ಧಾರಾವಾಹಿಯಲ್ಲಿ ಕಾಣಿಸಿಕೊಡು ರಂಜಿಸುತ್ತಿದ್ದ ನಟ ಅಶೋಕ್‌ ಶರ್ಮಾ ಇದೀಗ ದಿಢೀರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.ನಟ ಅಶೋಕ್‌ ಶರ್ಮಾ ಆಸ್ಪತ್ರೆ ಬೆಡ್‌ ಮೇಲೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್‌ ಆಗಿತ್ತು. ಇದರಿಂದ ಇವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಇನ್ನೂ ಕೆಲವರು ಧಾರಾವಾಹಿ ಅಥವಾ ಸಿನಿಮಾ ಶೂಟಿಂಗ್‌ ಫೋಟೋ ಇರಬಹುದು ಎಂದುಕೊಂಡಿದ್ದರು. ಆದರೆ ನಿಜಾಂಶ ಬೇರೆಯೇ ಇದೆ. <a href=https://youtube.com/embed/Ci-PEBHGEks?autoplay=1&mute=1><img src=https://img.youtube.com/vi/Ci-PEBHGEks/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಾಗಿದ್ದುಕೊಂಡು ಫೋಟೋಗಳನ್ನು ಹಾಕಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದ ನಟ ಅಶೋಕ್‌ ಶರ್ಮಾ ಕಳೆದ ಹದಿನೈದು ದಿನಗಳಿಂದ ಸಾಮಾಜಿಕ ಜಾಲತಾಣದಿಂದ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಅಭಿಮಾನಿಗಳು ಹಳೆಯ ಫೋಟೋಗಳಿಗೆ ಕಮೆಂಟ್‌ ಹಾಕಿ, ಯಾಕೆ ಏನಾಯ್ತು ಎಂದು ವಿಚಾರಿಸುತ್ತಿದ್ದರು. ಕೊನೆಗೂ ಈ ಬಗ್ಗೆ ಅಶೋಕ್‌ ಶರ್ಮಾ ಅವರೇ ಉತ್ತರ ನೀಡಿದ್ದಾರೆ.

ಆಸ್ಪತ್ರೆ ಬೆಡ್‌ ಮೇಲೆ ಕುಳಿತಿರುವ ಫೋಟೋ ಶೇರ್‌ ಮಾಡಿಕೊಂಡಿರುವ ಅಶೋಕ್‌ ಶರ್ಮಾ "ತುಂಬಾ ದಿನದಿಂದ ಒಂದೂ ಪೋಸ್ಟ್ ಇಲ್ಲ ಅಂತ ಕೇಳುತ್ತಿದ್ದೀರಿ. ನಾನು ನ್ಯುಮೋನಿಯಾದಿಂದ ಬಳಲುತ್ತಿದ್ದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಈಗ ನಾನು ಆರಾಮವಾಗಿದ್ದೇನೆ. ನಿಮ್ಮೆಲ್ಲರ ಕಾಳಜಿ, ಪ್ರೀತಿ, ಮನೆಯವರ ಹರಕೆ, ಹಾರೈಕೆ ನನ್ನನ್ನು ಸರಿಪಡಿಸಿದೆ. ದಯವಿಟ್ಟು ಎಲ್ಲರೂ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಆರೋಗ್ಯವೇ ಸಂಪತ್ತು. ದಯವಿಟ್ಟು ಹೈಡ್ರೇಟೆಡ್ ಆಗಿರಿ. ಅದಕ್ಕಾಗಿ ನೀರು ಕುಡಿರಿ, ಕುಡಿಸಿ ಎಂದು ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.)